ಚೆನ್ನೈ, ಆ. 6: ತಮಿಳುನಾಡಿನ ಮಧುರೆಯಲ್ಲಿ ಹುಟ್ಟಿ ನಾಲ್ಕು ದಿನವಾಗಿದ್ದ ಮಗುವೊಂದು ಕೊರೊನಾ ಸೋಂಕಿಗೆ ಬಲಿಯಾಗಿದೆ. ಈ ಮಗು ದೇಶದಲ್ಲಿ ಕೊರೊನಾಕ್ಕೆ ಬಲಿಯಾದ ಅತಿ ಚಿಕ್ಕ ಪ್ರಾಯದ ಮಗು.
ಮಧುರೆಯ ರಾಜಾಜಿ ಸರಕಾರಿ ಆಸ್ಪತ್ರೆಯಲ್ಲಿ ಆ.2ರಂದು ಮಗು ತೀವ್ರ ಉಸಿರಾಟದ ತೊಂದರೆಯಿಂದ ಕೊನೆಯುಸಿರೆಳೆದಿದೆ.
ಜು.29ರಂದು ಹುಟ್ಟಿದ ಮಗುವಿಗೆ ಜನಿಸುವಾಗಲೇ ಉಸಿರಾಟದ ಸಮಸ್ಯೆಯಿತ್ತು. ಮೆಕೊನಿಯಂ ಆಸ್ಪಿರೇಶನ್ ಸಿಂಡ್ರೂಮ್ ಎಂಬ ಉಸಿರಾಟದ ಸಮಸ್ಯೆಯಿಂದ ಮಗು ಬಳಲುತ್ತಿತ್ತು. ಹೆರಿಗೆಗಿಂತ ಕೆಲ ಮುಂಚೆ ತಾಯಿ ಕೊರೊನಾ ವೈರಸ್ ಸೋಂಕಿಗೊಳಗಾಗಿದ್ದರು. ಸಿಸೇರಿಯನ್ ಮೂಲಕ ಮಗುವನ್ನು ಹೊರತೆಗೆಯಲಾಗಿತ್ತು. ಮಗುವಿಗೆ ಜನಿಸಿದ ಎರಡು ದಿನದಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು.
ದಕ್ಷಿಣ ಆಫ್ರಿಕದಲ್ಲಿ 2 ದಿನದ ಮಗುವೊಂದು ಕೊರೊನಾಕ್ಕೆ ಬಲಿಯಾಗಿದ್ದು, ಇದು ಕೊರೊನಾ ಬಲಿ ತೆಗೆದುಕೊಂಡ ಜಗತ್ತಿನ ಅತಿ ಚಿಕ್ಕ ಮಗು.