ಮಂಜೇಶ್ವರ : ಲಾಕ್ ಡೌನ್ ಜಾರಿಯಲ್ಲಿದ್ದರೂ ಮಾದಕ ವಸ್ತುಗಳ ಕಳ್ಳ ಸಾಗಾಟ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ. ಕರ್ನಾಟಕ –ಕೇರಳ ಗಡಿ ಭಾಗವಾಗಿರುವ ಮಂಜೇಶ್ವರದ ಕುಂಜತ್ತೂರಿನಲ್ಲಿ ಪಿಕಪ್ ವಾಹನದಲ್ಲಿ ಬಾಳೆಗೊನೆಗಳ ಮಧ್ಯೆ ಬಚ್ಚಿಟ್ಟು ಗಾಂಜಾ ಸಾಗಾಟ ಮಾಡಿದ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕುಂಜತ್ತೂರಿನಲ್ಲಿ ಕಾರ್ಯಾಚರಣೆ ನಡೆಸಿದ ಮಂಜೇಶ್ವರ ಪೊಲೀಸರು ಒಂದು ಕ್ವಿಂಟಾಲ್ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪಿಕಪ್ ವಾಹನದಲ್ಲಿದ್ದ ಅರೋಪಿಗಳು ಪರಾರಿಯಾಗಿದ್ದಾರೆ.