ರಷ್ಯಾದಲ್ಲಿ ತಯಾರಾಯಿತು ಕೊರೊನಾದ ಮೊದಲ ಲಸಿಕೆ

0

ಎಲ್ಲ ಟ್ರಯಲ್ ಗಳು ಯಶಸ್ವಿ ಎಂದ ವಿವಿ

ಮಾಸ್ಕೊ: ಕೊರೊನಾಗೆ ನಲಸಿಕೆ ಕಂಡುಹಿಡಿಯುವ ಸ್ಪರ್ಧೆಯಲ್ಲಿ ರಷ್ಯಾ ಉಳಿದ ದೇಶಗಳನ್ನು ಹಿಂದಿಕ್ಕಿದೆ. ರಷ್ಯಾದ ಸೆಶೆನೋವ್ ಫಸ್ಟ್ ಮಾಸ್ಕೋ ಸ್ಟೇಟ್ ಮೆಡಿಕಲ್ ವಿಶ್ವವಿದ್ಯಾನಿಲಯ ಕಂಡುಹಿಡಿದಿರುವ ಇ ಲಸಿಕೆ ಜಗತ್ತಿನಲ್ಲಿ ಕೊಕೊನಾ ವೈರಸ್ಗೆ ಕಂಡುಹಿಡಿಯಲಾದ ಮೊದಲ ಲಸಿಕೆ ಎಂಬ ಹಿರಿಮೆಗೆ ಪಾತ್ರವಾಗಲಿಹೆ. ಕೊರೊನಾ ವ್ಯಾಕ್ಸಿನ್ ನ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ವಿವಿ ಹೇಳಿಕೊಂಡಿದೆ. ಒಂದು ವೇಳೆ ವಿಶ್ವವಿದ್ಯಾಲಯ ನೀಡಿರುವ ಈ ಕುರಿತು ಮಾಹಿತಿ ನೀಡಿರುವ ಇನ್ಸ್ಟಿಟ್ಯೂಟ್ ಫಾರ್ ಟ್ರಾನ್ಸ್ ಲೆಶನಲ್ ಮೆಡಿಸಿನ್ ಅಂಡ್ ಬಯೋಟೆಕ್ನಾಲಜಿಯ ನಿರ್ದೇಶಕ ವ್ಲಾಡಿಮ್ ತರಾಸೋವ್, ಸಶೆನೋವ್ ವಿಶ್ವವಿದ್ಯಾನಿಲಯ ಸ್ವಯಂಸೇವಕರ   ಮೇಲೆ ಕೊವಿಡ್-19 ನ ವಿಶ್ವದ ಮೊಟ್ಟಮೊದಲ ಲಸಿಕೆಯ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಹೇಳಿದ್ದಾರೆ.

ವಿಶ್ವವಿದ್ಯಾಲಯ ಜೂನ್ 18ರಂದು ರಷ್ಯಾದ ಗೆಮಲಿ ಇನ್ಸ್ಟಿಟ್ಯೂಟ್ ಫಾರ್ ಎಪಿಡೆಮಿಯಾಲಾಜಿ ಅಂಡ್ ಮೈಕ್ರೋಬಯಾಯಾಲಾಜಿ ಸಿದ್ಧಪಡಿಸಿರುವ ಈ ಲಸಿಕೆಯ ಪರೀಕ್ಷೆ ಆರಂಭಿಸಿತ್ತು. ವಾಲೆಂಟೀರ್ಸ್ ಗಳ ಮೊದಲ ತಂಡವನ್ನು  ಬುಧವಾರ ಹಾಗೂ ಎರಡನೇ ತಂಡವನ್ನು  ಜುಲೈ 20ರಂದು ಡಿಸ್ಚಾರ್ಜ್ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸುರಕ್ಷಿತವಾಗಿದೆ ವ್ಯಾಕ್ಸಿನ್
ಸೆಶೆನೋವ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಪ್ಯಾರಾಸೈಟಾಲಾಜಿ, ಟ್ರಾಪಿಕಲ್ ಆಂಡ್ ವೆಕ್ಟರ್ ಬೋರ್ನ್ ಡಿಸೀಸಸ್ ನಿರ್ದೇಶಕ ಅಲೆಕ್ಸಾಂಡರ್ ಲುಕಾಶೇವ್ ಪ್ರಕಾರ, ವ್ಯಾಕ್ಸಿನ್ ಸುರಕ್ಷಿತವಾಗಿರುವುದು ದೃಢಪಟ್ಟಿದೆ. ಸೆಶೆನೋವ್ ವಿವಿ ಮಹಾಮಾರಿಯ ಕಾಲದಲ್ಲಿ ಕೇವಲ ಒಂದು ಶೈಕ್ಷಣಿಕ ಸಂಸ್ಥೆಯಾಗಿ ಮಾತ್ರ ಕಾರ್ಯನಿರ್ವಹಿಸದೆ, ಒಂದು ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನಾ ಕೇಂದ್ರದ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಾರಾಸೋವ್ ಹೇಳಿದ್ದಾರೆ. ಜೊತೆಗೆ ಜಟಿಲ ಹಾಗೂ ಮಹತ್ವಪೂರ್ಣ ಔಷಧಿಗಳನ್ನು ಅಭಿವೃದ್ಧಿಪಡಿಸುವ ಕ್ಷಮತೆ ಹೊಂದಿದೆ ಎಂದೂ ಕೂಡ ಅವರು ಹೇಳಿದ್ದಾರೆ.

Previous articleಬೆಳ್ಮಣ್ ಗ್ರಾಮ ಪಂಚಾಯತಿ ಸದಸ್ಯರಿಗೆ ಕೊರೊನಾ ಪಾಸಿಟಿವ್‌
Next articleಉಡುಪಿ,ದ.ಕ. ಸೇರಿ 12 ಜಿಲ್ಲೆಗಳಲ್ಲಿ ಲಾಕ್​ಡೌನ್​ ಸಾಧ್ಯತೆ

LEAVE A REPLY

Please enter your comment!
Please enter your name here