ಸುದ್ದಿ

ಮುಂಗಾರು ಆಗಮನ – ಆರೋಗ್ಯದ ಕಡೆಯಿರಲಿ ಗಮನ

ಕಾರ್ಕಳ : ಇನ್ನೇನು ಮುಂಗಾರು ಆಗಮನವಾಗಲಿದೆ. ಮಳೆಯಿಲ್ಲದೆ ಕಡುಬಿಸಿಲಿನಿಂದ ಭೂಮಿಯು ಒಣಗಿ ಹೋಗಿದ್ದು, ಜೀವರಾಶಿಗಳು ನೀರಿಗಾಗಿ ಹಪಾಹಪಿಸುವಂತಾಗಿದೆ. ಆದರೆ, ಮಳೆಯ ವಿಳಂಬದ ಹಿನ್ನೆಲೆ ಈ ಬಾರಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆಯಾಗಿದೆ. ಇಲ್ಲದಿದ್ದಲ್ಲಿ, ಏಪ್ರಿಲ್‌ ಮೇ ತಿಂಗಳಲ್ಲಿ ಮಳೆಯಾಗುತ್ತಿದ್ದು, ಬಿಟ್ಟು ಬಿಟ್ಟು ಸುರಿಯುವ ಮಳೆಗೆ ಸಾಂಕ್ರಾಮಿಕ ರೋಗಗಳು ಹಬ್ಬುತ್ತಿದ್ದವು. ಪ್ರಮುಖವಾಗಿ 5 ರೋಗಗಳುಮೊದಲ ಮಳೆಗೆ ಅಲ್ಲಲ್ಲಿ ನಿಂತ ನೀರಿನಿಂದಾಗಿ ಉತ್ಪತ್ತಿಯಾಗುವ ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್‌ಗುನ್ಯ, ಆನೆಕಾಲು ರೋಗ ಹಾಗೂ ಮೆದುಳು ಜ್ವರ ಎಂಬ …

ಮುಂಗಾರು ಆಗಮನ – ಆರೋಗ್ಯದ ಕಡೆಯಿರಲಿ ಗಮನ Read More »

ಪಿಲಿಕುಳ ಜೈವಿಕ ಮೃಗಾಲಯದಲ್ಲಿ ಹುಲಿ ಸಾವು

ರಣ ಭೀಕರ ಕಾಳಗದಲ್ಲಿ ಗಾಯಗೊಂಡಿದ್ದ ವ್ಯಾಘ್ರ ಮಂಗಳೂರು: ಪಿಲಿಕುಳದ ಡಾ| ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಹುಲಿಯೊಂದು ಇಂದು ಹೃದಯಾಘಾತವಾಗಿ ಸಾವನ್ನಪ್ಪಿದೆ.ಇತ್ತೀಚೆಗೆ ಎರಡು ಹುಲಿಗಳ ನಡುವೆ ಭೀಕರ ಕಾಳಗ ನಡೆದು ಗಾಯಗೊಂಡಿದ್ದ ಒಂದು ಹುಲಿಗೆ ಹೃದಯಾಘಾತವಾಗಿದೆ. ಗಾಯಗೊಂಡಿದ್ದ ಈ ಹುಲಿ ಚೇತರಿಸಿತ್ತು. ಆದರೆ ಬುಧವಾರ ಹೃದಯಾಘಾತದಿಂದ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರಕಾರ : ಪ್ರತಿ ಬಾಟಲ್‌ಗೆ 10 ರಿಂದ 20 ರೂ. ಏರಿಕೆ

ಬೆಂಗಳೂರು : ಗ್ಯಾರಂಟಿ ಯೋಜನೆಯ ಹಿನ್ನೆಲೆಯಲ್ಲಿ ರಾಜ್ಯದ ಬೊಕ್ಕಸದ ಮೇಲಾಗುವ ಹಣದ ಹೊರೆಯನ್ನು ತಪ್ಪಿಸಲು ರಾಜ್ಯ ಸರಕಾರ ಮುಂದಾಗಿದ್ದು ಅದಕ್ಕಾಗಿ ಸಂಪನ್ಮೂಲ ಕ್ರೋಢೀಕರಣಕ್ಕೆ ಸರ್ಕಾರ ಹೆಜ್ಜೆಯಿಟ್ಟಿದೆ. ಆ ಹಿನ್ನೆಲೆಯಲ್ಲಿ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಿಸಲಾಗಿದೆ. ಪ್ರತಿ ಬಾಟಲ್‌ಗೆ 10 ರಿಂದ 20 ರೂಪಾಯಿವರೆಗೆ ಏರಿಕೆಯಾಗಲಿದೆ. ಬಿಯರ್ ಸೇರಿದಂತೆ ಹಾರ್ಡ್ ಡ್ರಿಂಕ್ಸ್‌ಗಳ ಬೆಲೆಯಲ್ಲಿಯೂ ಏರಿಕೆಯಾಗಲಿದೆ. ಬಡ್ವೈಸರ್ ಬಿಯರ್ ದರ 198 ರೂ. ನಿಂದ 220 ರೂ.ಗೆ ಹೆಚ್ಚಳವಾಗಿದೆ. ಕಿಂಗ್ ಫಿಶರ್ ಬಿಯರ್ ದರವು 160 ರೂ. ನಿಂದ 170 …

ಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರಕಾರ : ಪ್ರತಿ ಬಾಟಲ್‌ಗೆ 10 ರಿಂದ 20 ರೂ. ಏರಿಕೆ Read More »

ನೈತಿಕ ಪೊಲೀಸ್‌ಗಿರಿ ಸಂತ್ರಸ್ತನ ಮೇಲೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ : ಪೊಲೀಸ್ ಆಯುಕ್ತರಿಗೆ ವಿದ್ಯಾರ್ಥಿಯಿಂದ ದೂರು

ಮಂಗಳೂರು: ಇತ್ತೀಚೆಗಷ್ಟೇ ಸೋಮೇಶ್ವರ ಬೀಚ್‌ನಲ್ಲಿ ನಡೆದ ನೈತಿಕ ಪೊಲೀಸ್‌ಗಿರಿ ಘಟನೆಗೆ ಬಲಿಯಾದ ವಿದ್ಯಾರ್ಥಿಯೊಬ್ಬರು ತಮ್ಮ ಮೇಲೆ ಉಳ್ಳಾಲ ಠಾಣೆಯ ಪೊಲೀಸ್‌ ಅಧಿಕಾರಿಯೊಬ್ಬರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ವಿರುದ್ಧ ವಿದ್ಯಾರ್ಥಿಯೊಬ್ಬರು ದೂರು ನೀಡಿರುವುದನ್ನು ಕಮಿಷನರ್ ಕುಲದೀಪ್ ಕುಮಾರ್ ಆರ್. ಜೈನ್ ಖಚಿತಪಡಿಸಿದ್ದಾರೆ. ನಾವು ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುವಂತೆ ಡಿಸಿಪಿ ಗೆ ಕೇಳಿದ್ದೇನೆ. ಪೊಲೀಸ್ ಠಾಣೆ ಸಿಬ್ಬಂದಿ …

ನೈತಿಕ ಪೊಲೀಸ್‌ಗಿರಿ ಸಂತ್ರಸ್ತನ ಮೇಲೆ ಪೊಲೀಸ್ ಅಧಿಕಾರಿಯಿಂದ ಹಲ್ಲೆ : ಪೊಲೀಸ್ ಆಯುಕ್ತರಿಗೆ ವಿದ್ಯಾರ್ಥಿಯಿಂದ ದೂರು Read More »

ಕಾರ್ಕಳ ರೋಟರಿ ಆಸ್ಪತ್ರೆ ಶುಶ್ರೂಷಕಿ ಹೇಮಲತಾ ಪ್ರಭು ನಿಧನ

ಕಾರ್ಕಳ : ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಶುಶ್ರೂಷಕಿಯಾಗಿದ್ದ ಹೊಸ್ಮಾರುವಿನ ಹೇಮಲತಾ ಪ್ರಭು (55) ಅವರು ಜೂ. 6ರಂದು ನಿಧನ ಹೊಂದಿದರು. ಕಳದೆ ಮೂರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಮೃತರು ಪತಿ, ಓರ್ವ ಪುತ್ರನನ್ನು ಅಗಲಿದ್ದಾರೆ. ಹೇಮಲತಾ ಅವರು ಕಳೆದ 34 ವರ್ಷಗಳಿಂದ ಕಾರ್ಕಳ ರೋಟರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ತನ್ನ ಸೇವೆಯ ಮೂಲಕವೇ ಕಾರ್ಕಳದಲ್ಲಿ ಪರಿಚಿತರಾಗಿದ್ದರು.

ಬ್ರಿಜ್ ಭೂಷಣ್ ವಿರುದ್ಧ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ

ಮಾತುಕತೆಗೆ ಕೇಂದ್ರ ಸರಕಾರ ಮತ್ತೊಮ್ಮೆ ಆಹ್ವಾನ ದೆಹಲಿ : ಕುಸ್ತಿ ಅಸೋಸಿಯೇಷನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಕುಸ್ತಿಪಟುಗಳು, ಪಟ್ಟು ಬಿಡದೆ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದು, ಈ ನಡುವೇ ಕೇಂದ್ರ ಸರಕಾರ ಕುಸ್ತಿಪಟುಗಳನ್ನು ಮತ್ತೊಮ್ಮೆ ಮಾತುಕತೆಗೆ ಆಹ್ವಾನಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು, ಕುಸ್ತಿಪಟುಗಳೊಂದಿಗೆ ಅವರ ಸಮಸ್ಯೆಗಳನ್ನು ಚರ್ಚಿಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ. ಈ …

ಬ್ರಿಜ್ ಭೂಷಣ್ ವಿರುದ್ಧ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ Read More »

ಪಠ್ಯ ಪುಸ್ತಕ ಪರಿಷ್ಕರಣೆ : ಸಿದ್ದರಾಮಯ್ಯಗೆ ಸುನಿಲ್‌ ಕುಮಾರ್‌ ಪ್ರಶ್ನೆಗಳು

ಸರಣಿ ಟ್ವೀಟ್‌ನಲ್ಲಿ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ ಮಾತ್ರ ಇರಬೇಕೆ ಎಂಬ ಪ್ರಶ್ನೆ ಕಾರ್ಕಳ : ಪಠ್ಯ ಪುಸ್ತಕ ಪರಿಷ್ಕರಿಸುವ ಕುರಿತಾಗಿ ನಡೆಯುತ್ತಿರುವ ಮಾತುಕತೆಗಳ ಹಿನ್ನೆಲೆಯಲ್ಲಿ ಶಾಸಕ, ಮಾಜಿ ಸಚಿವ ವಿ, ಸುನಿಲ್‌ ಕುಮಾರ್‌ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಟ್ವಿಟ್ಟರ್‌ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳಿ ಕುಟುಕಿದ್ದಾರೆ. ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದ ರಾಮಯ್ಯ ಸರಕಾರ ಪಠ್ಯ-ಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕೃತಿ ಹಾಗೂ ಇತಿಹಾಸದ ನೈಜ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ …

ಪಠ್ಯ ಪುಸ್ತಕ ಪರಿಷ್ಕರಣೆ : ಸಿದ್ದರಾಮಯ್ಯಗೆ ಸುನಿಲ್‌ ಕುಮಾರ್‌ ಪ್ರಶ್ನೆಗಳು Read More »

ಸ್ವಾಮೀಜಿಗೆ ಫೇಸ್‌ಬುಕ್‌ ಗೆಳತಿಯಿಂದ 35 ಲ.ರೂ. ಪಂಗನಾಮ

ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿ ಮೋಸ ಬೆಂಗಳೂರು: ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷಾ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂ. ತಮ್ಮ ಖಾತೆಗೆ ಹಾಕಿಸಿಕೊಂಡು ವಂಚನೆ ಎಸರುವ ಕುರಿತು ಕಂಬಾಳು ಮಠದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದೂರು ನೀಡಿದ್ದಾರೆ.ಫೇಸ್‌ಬುಕ್‌ನಲ್ಲಿ ಪರಿಚಯವಾಗಿ ವೀಡಿಯೊ ಕರೆ ಮೂಲಕ ಮಾತನಾಡುತ್ತಿದ್ದಮಹಿಳೆ ಬಲೆಗೆ ಬಿದ್ದು ಕಂಬಾಳು ಮಹಾಸಂಸ್ಥಾನದ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಸುಮಾರು 35 ಲಕ್ಷ ರೂ. ಕಳೆದುಕೊಂಡಿರುವ ಸಂಬಂಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಸ್ವಾಮೀಜಿ ಅವರನ್ನು …

ಸ್ವಾಮೀಜಿಗೆ ಫೇಸ್‌ಬುಕ್‌ ಗೆಳತಿಯಿಂದ 35 ಲ.ರೂ. ಪಂಗನಾಮ Read More »

ವಿದೇಶ ಉದ್ಯೋಗದ ಆಮಿಷ : 3.30 ಲ.ರೂ. ವಂಚನೆ

ವೇಣೂರು: ನಾರಾವಿಯ ಯುವಕನಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರ ತಂದೆಯಿಂದ 3.30 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಇಬ್ಬರು ಆರೋಪಿಗಳ ವಿರುದ್ಧ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾರಾವಿಯ ಅಟ್ಯಡ್ಕ ನಿವಾಸಿ ಲಿಯೋ ಪಾಯಸ್‌ ವಂಚನೆಗೊಳಗಾದವರು.ಪ್ರಕರಣದ ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಮತ್ತೋರ್ವ ಆರೋಪಿಯನ್ನು ಮಂಗಳೂರಿನ ಸುಧೀರ್‌ ಎಂದು ಗುರುತಿಸಲಾಗಿದೆ. ಈತನ ಮೇಲೆ ಬಂಟ್ವಾಳ ನಗರ, ಗ್ರಾಮಾಂತರ, ಮೂಡುಬಿದಿರೆ, ಮಂಗಳೂರು ಸೇರಿದಂತೆ ಹಲವು ಠಾಣೆಗಳಲ್ಲಿ ಇದೇ ಮಾದರಿಯ ವಂಚನೆ ಕೇಸುಗಳಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.ಆರೋಪಿಗಳಿಬ್ಬರು ಜ. …

ವಿದೇಶ ಉದ್ಯೋಗದ ಆಮಿಷ : 3.30 ಲ.ರೂ. ವಂಚನೆ Read More »

ಅಯೋಧ್ಯೆ ಹೋರಾಟ ಈಗ ಸಿನೆಮಾ

ಮಂದಿರ ಲೋಕಾರ್ಪಣೆ ದಿನದಂದೇ ಬಿಡುಗಡೆಯಾಗಲಿದೆ ರಾಮಜನ್ಮಭೂಮಿ ಆಂದೋಲನದ ಚಿತ್ರ ಮುಂಬಯಿ : ರಾಮಾಯಣ ಟಿವಿ ಸರಣಿಯಲ್ಲಿ ರಾಮನ ಪಾತ್ರದಲ್ಲಿ ಅಭಿನಯಿಸಿ ಜನಪ್ರಿಯರಾಗಿರುವ ಅರುಣ್‌ ಗೋವಿಲ್‌ ಈಗ ರಾಮನ ಇನ್ನೊಂದು ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದ್ದಾರೆ. ರಾಮ ಜನ್ಮಭೂಮಿ ಮುಕ್ತಿಗಾಗಿ ದಶಕಗಳ ಕಾಲ ನಡೆದ ಹೋರಾಟದ ಕಥೆಯನ್ನೊಳಗೊಂಡಿರುವ ʼ6,9,5′ ಎಂಬ ವಿಶಿಷ್ಟ ಚಿತ್ರವನ್ನು ಅವರು ನಿರ್ಮಿಸಿ ನಟಿಸಿದ್ದಾರೆ. ಚಿತ್ರೀಕರಣ ಶೇ.95ರಷ್ಟು ಪೂರ್ಣಗೊಂಡಿದ್ದು ರಾಮ ಮಂದಿರ ಲೋಕಾರ್ಪಣೆಯಾಗುವ ದಿನವೇ ಈ ಚಿತ್ರವೂ ಬಿಡುಗಡೆಯಾಗಲಿದೆ.‘ಆರು ಒಂಬತ್ತು ಐದು (6,9,5)’ ಚಿತ್ರದಲ್ಲಿ ಗೋವಿಲ್ ರಾಮ …

ಅಯೋಧ್ಯೆ ಹೋರಾಟ ಈಗ ಸಿನೆಮಾ Read More »

error: Content is protected !!
Scroll to Top