ಸುದ್ದಿ

ಸಂಗಾತಿಯನ್ನು ಕೊಂದು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ

ಮುಂಬಯಿಯಲ್ಲಿ ಶ್ರದ್ಧಾ ವಾಲ್ಕರ್‌ ಮಾದರಿಯ ಕೊಲೆ ಪ್ರಕರಣ ಮುಂಬಯಿ : ಕಳೆದ ವರ್ಷ ದಿಲ್ಲಿಯಲ್ಲಿ ಅಫ್ತಾಬ್‌ ಪೂನಾವಾಲ ಎಂಬಾತ ತನ್ನ ಲಿವ್‌ ಇನ್‌ ಪಾರ್ಟ್ನರ್‌ ಶ್ರದ್ಧಾ ವಾಲ್ಕರ್‌ ಎಂಬಾಕೆಯನ್ನು ಕೊಂದು ದೇಹವನ್ನು ಕತ್ತರಿಸಿ ಫ್ರಿಜ್‌ನಲ್ಲಿಟ್ಟದ್ದು, ದೇಶಾದ್ಯಂತ ಸುದ್ದಿಯಾಗಿತ್ತು. ಇದೀಗ ಮುಂಬಯಿಯಲ್ಲೂ ಇದೇ ಮಾದರಿಯ ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬ ಸಂಗಾತಿಯನ್ನು ಕೊಂದು ದೇಹವನ್ನು ಮರ ಕತ್ತರಿಸುವ ಯಂತ್ರದಿಂದ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಬರ್ಬರ ಕೃತ್ಯ ಮುಂಬಯಿಯ ಮಿರಾರೋಡ್‌ನಲ್ಲಿ ಸಂಭವಿಸಿದೆ. ಆರೋಪಿ ಮನೋಜ್‌ ಸಹಾನಿಯನ್ನು (56) ಪೊಲೀಸರು ಬಂಧಿಸಿದ್ದಾರೆ. ಈತ …

ಸಂಗಾತಿಯನ್ನು ಕೊಂದು ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ Read More »

ಇಂದು ಬಿಜೆಪಿ ಅವಲೋಕನ ಸಭೆ

ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿರುವ ಬಿಜೆಪಿ ಇದೇ ಮೊದಲ ಬಾರಿಗೆ ಇಂದು ನೂತನ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಅವಲೋಕನ ಸಭೆಯನ್ನು ಕರೆದಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಇಂದು ಸಂಜೆ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ, ವಿರೋಧ ಪಕ್ಷದ ನಾಯಕ ಹಾಗೂ ಹೊಸ ರಾಜ್ಯಾಧ್ಯಕ್ಷ ಆಯ್ಕೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.ಈ …

ಇಂದು ಬಿಜೆಪಿ ಅವಲೋಕನ ಸಭೆ Read More »

ಕೊಲ್ಲೂರು ದೇವಳದಲ್ಲಿ ಮಹಿಳೆಯ 4.75 ಆಭರಣ ಕಳವು

ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನ ಎಗರಿಸಿದ ಕಳ್ಳರು ಕೊಲ್ಲೂರು: ಕೊಲ್ಲೂರು ದೇವಸ್ಥಾನದಲ್ಲಿ ಮಹಿಳೆಯೊಬ್ಬರ ಸುಮಾರು 4.75 ಲ.ರೂ. ಮೌಲ್ಯದ ಆಭರಣ ಕಳ್ಳತನವಾದ ಘಟನೆ ಸಂಭವಿಸಿದೆ. ಮೂಲತಃ ಕೇರಳದ ಕಾಸರಗೋಡು ಶಾರದಾ ನಗರದ ಹಣಂಗೋಡಿನವರಾಗಿರುವ ಪ್ರಸ್ತುತ ಸುರತ್ಕಲ್‌ನಲ್ಲಿರುವ ದಂಪತಿ ಮಕ್ಕಳೊಂದಿಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಶ್ರೀ ದೇವಿಯ ದರ್ಶನಕ್ಕೆಂದು ಜೂ. 4ರಂದು ಬಂದಿದ್ದರು. ಅವರ ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿಕ್ಕ ಪರ್ಸ್‌ನಲ್ಲಿದ್ದ ಹದಿಮೂರೂವರೆ ಪವನ್‌ ಚಿನ್ನಾಭರಣ ಕಳವು ಆದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.ಸುರತ್ಕಲ್‌ನಲ್ಲಿರುವ ಬಾಡಿಗೆ …

ಕೊಲ್ಲೂರು ದೇವಳದಲ್ಲಿ ಮಹಿಳೆಯ 4.75 ಆಭರಣ ಕಳವು Read More »

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ : ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ : ಮೀನುಗಾರರಿಗೆ ಮುನ್ನೆಚ್ಚರಿಕೆ

ಮಂಗಳೂರು : ಹವಾಮಾನ ಮುನ್ಸೂಚನೆಯಂತೆ ಜೂ. 6ರಿಂದ 11ರವರೆಗೆ ಬಿಪೊರ್ ಜಾಯ್ ಚಂಡಮಾರುತದಿಂದಾಗಿ ಅರಬ್ಬಿ ಸಮುದ್ರವು ಪ್ರಕ್ಷುಬ್ಧಗೊಂಡಿದ್ದು, ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಹಾಗೂ ಮೀನುಗಾರಿಕೆಗೆ ತೆರಳಿರುವ ಎಲ್ಲಾ ಮೀನುಗಾರಿಕೆ ದೋಣಿಗಳು ಕೂಡಲೇ ದಡ ಸೇರುವಂತೆ ಸೂಚಿಸಲಾಗಿದೆ. ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನಲೆಯಲ್ಲಿ ಕರ್ನಾಟಕದ ಕರಾವಳಿ ಭಾಗದಲ್ಲಿ ಭಾರೀ ಮಳೆ ಹಾಗೂ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಹಿನ್ನಲೆಯಲ್ಲಿ …

ಅರಬ್ಬೀ ಸಮುದ್ರದಲ್ಲಿ ಚಂಡಮಾರುತ ಭೀತಿ : ಕರಾವಳಿ ಭಾಗದಲ್ಲಿ ಭಾರೀ ಮಳೆ ಸಾಧ್ಯತೆ : ಮೀನುಗಾರರಿಗೆ ಮುನ್ನೆಚ್ಚರಿಕೆ Read More »

ಟಿಪ್ಪು ಸುಲ್ತಾನ್ ಬಗ್ಗೆ ಪೋಸ್ಟ್ ವಿವಾದ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಘರ್ಷ, ಕಲ್ಲು ತೂರಾಟ

ಮಹಾರಾಷ್ಟ್ರ : ಟಿಪ್ಪು ಸುಲ್ತಾನ್ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ವಿಚಾರದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ. ಟಿಪ್ಪು ಸುಲ್ತಾನ್ ಚಿತ್ರವನ್ನು ಆಕ್ಷೇಪಾರ್ಹ ಆಡಿಯೋ ಸಂದೇಶದೊಂದಿಗೆ ತಮ್ಮ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳಲ್ಲಿ ಬಳಸಿರುವ ಸ್ಥಳೀಯರ ವಿರುದ್ಧ ಈ ಬಗ್ಗೆ ಕೆಲವು ಬಲಪಂಥೀಯ ಕಾರ್ಯಕರ್ತರು ಪ್ರತಿಭಟನೆ ನಡೆಸಲು ಶಿವಾಜಿ ಚೌಕ್‌ನಲ್ಲಿ ಜಮಾಯಿಸಿದ್ದರು. ಪ್ರತಿಭಟನೆ ಮುಗಿದ ನಂತರ ಗುಂಪು ಚದುರಿತು. ಆದರೆ ಅವರ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಕೊಲ್ಲಾಪುರ ಪೊಲೀಸ್ ವರಿಷ್ಠಾಧಿಕಾರಿ ಮಹೇಂದ್ರ ಪಂಡಿತ್ …

ಟಿಪ್ಪು ಸುಲ್ತಾನ್ ಬಗ್ಗೆ ಪೋಸ್ಟ್ ವಿವಾದ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಂಘರ್ಷ, ಕಲ್ಲು ತೂರಾಟ Read More »

ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ವಿವಿದ ಸಂಘಗಳ ಉದ್ಘಾಟನೆ – ಗಿಡ ವಿತರಣಾ ಕಾರ್ಯಕ್ರಮ

ಕಾರ್ಕಳ : ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನ ಶೈಕ್ಷಣಿಕ ವರ್ಷದ ಸಹಪಠ್ಯ ಚಟುವಟಿಕೆಗಳ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜೂ. 7 ರಂದು ಜರುಗಿತು. ಸಂಸ್ಥೆಯ ಮುಖ್ಯ ಶಿಕ್ಷಕಿ ವೃಂದಾ ಶೆಣೈ ದೀಪ ಪ್ರಜ್ವಲಿಸಿ ವಿವಿಧ ಸಂಘಗಳ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಿದರು. ವಿವಿಧ ಸಂಘಗಳ ಚಟುವಟಿಕೆಗಳ ಕುರಿತಂತೆ ಸಂಘಗಳ ಸಂಚಾಲಕ ಶಿಕ್ಷಕರಾದ ನಾರಾಯಣ ಶೆಣೈ, ಸಂಜಯ್ ಕುಮಾರ್, ನಯನಾ ಶೆಣೈ ಪೂರ್ಣಿಮಾ ಶೆಣೈ, ಚೇತನಾ ನಾಯಕ್, ವೀಣಾ ಬಿ., ಇಂದಿರಾ ಪಿ. ನಾಯಕ್, ಸುಧಾ …

ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ ವಿವಿದ ಸಂಘಗಳ ಉದ್ಘಾಟನೆ – ಗಿಡ ವಿತರಣಾ ಕಾರ್ಯಕ್ರಮ Read More »

ಅಪೂರ್ವ ಪರಿಸರ ಪ್ರೇಮಿ ಅಫ್ರಾನ್‌ : ಹಾವು ಹಿಡಿಯುವಲ್ಲೂ ಸೈ ಈ ಬಾಲಕ

ಕಾರ್ಕಳ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಎಳವೆಯಿಂದಲೇ ಪ್ರಕೃತಿಯೊಂದಿಗೆ ಬೆರೆತು ಪರಿಸರ ಪ್ರೇಮಿಯಾಗಿ ಬೆಳೆದವರು ಪರ್ವೆಜ್ ಅಫ್ರಾನ್.‌ ಬಾಲ್ಯದಿಂದಲೇ ಪರಿಸರದೊಂದಿಗಿನ ಇವರ ಒಡನಾಟ ಮೆಚ್ಚುವಂತದ್ದೆ. ಸಾಣೂರು ಮುರತ್ತಂಗಡಿ ನಿವಾಸಿ ಅಬೂಬಕ್ಕರ್‌ ಮತ್ತು ಅಸ್ಮಾ ದಂಪತಿ ಪುತ್ರನೇ ಈ ಅಫ್ರಾನ್‌. 2 ವರ್ಷದಲ್ಲೇ ಈಜು ಕರಗತಅಫ್ರಾನ್‌ ಪುಟ್ಟ ಮಗುವಾಗಿದ್ದಾಗಲೇ ಕಾರ್ಕಳ ಪುಲ್ಕೇರಿ ಮಠದ ಕೆರೆಯಲ್ಲಿ ಈಜಾಡುತ್ತಿದ್ದ. ಅಫ್ರಾನ್‌ಗೆ ಎರಡು ವರ್ಷ ತುಂಬುತ್ತಿದ್ದಂತೆ ತಂದೆ ಅಬೂಬಕ್ಕರ್‌ ಪೋರವನ್ನು ಪ್ರತಿನಿತ್ಯ ಬೆಳಿಗ್ಗೆ 8 ಗಂಟೆಗೆ ಮಠದ ಕೆರೆಗೆ ಕರೆದುಕೊಂಡು ಬಂದು …

ಅಪೂರ್ವ ಪರಿಸರ ಪ್ರೇಮಿ ಅಫ್ರಾನ್‌ : ಹಾವು ಹಿಡಿಯುವಲ್ಲೂ ಸೈ ಈ ಬಾಲಕ Read More »

ಚಿಂತಾಮಣಿಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್​​ಗಿರಿ

ಚಿಕ್ಕಬಳ್ಳಾಪುರ: ಚಿಂತಾಮಣಿಯ ಮೆಹಬೂಬ್​​ ನಗರದಲ್ಲಿ ಯುವಕರು ನೈತಿಕ ಪೊಲೀಸ್​​ಗಿರಿ ನಡೆಸಿರುವುದು ತಿಳಿದುಬಂದಿದೆ. ಮುಸ್ಲಿಂ ಯುವತಿ ಜತೆ ಹಿಂದೂ ಯುವಕ ಇದ್ದಿದ್ದಕ್ಕೆ ಆತನ ಮೇಲೆ ಹಲ್ಲೆ ಯತ್ನ ನಡೆಸಲಾಗಿದೆ. ಜತೆಗೆ ಮುಸ್ಲಿಂ ಯುವತಿ ಮೇಲೆಯೂ ಹಲ್ಲೆಗೆ ಯತ್ನ ನಡೆಸಿದ್ದಾರೆ. ಚೇಳೂರು ಮೂಲದ ಯುವತಿ, ಚಿಂತಾಮಣಿ ಮೂಲದ ಯುವಕ ಜತೆಗೆ ಇದ್ದಾಗ ಸ್ಥಳಕ್ಕೆ ಬಂದ ಯುವಕರು ಯುವಕನನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್​ಗಿರಿಗೆ ಅವಕಾಶ ಇಲ್ಲ, …

ಚಿಂತಾಮಣಿಯಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್​​ಗಿರಿ Read More »

ಸುಳ್ಳು ಮಾನ ಹಾನಿಕರ ಹೇಳಿಕೆ ನೀಡಿದ ಶುಭದ ರಾವ್‌ ವಿರುದ್ಧ ಕಾನೂನು ಕ್ರಮ – ರವೀಂದ್ರ ಮೊಯ್ಲಿ

ಆರೋಪದಲ್ಲಿ ಸ್ಪಷ್ಟತೆಯಿಲ್ಲ – ಹಿಟ್‌ ಆ್ಯಂಡ್ ರನ್‌ ಪಾಲಿಸಿ ಕಾರ್ಕಳ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷ, ರಾಜಕೀಯ ನಾಯಕರುಗಳ ಹಾಗೂ ಜನಪ್ರತಿನಿಧಿಗಳ ವಿರುದ್ಧ ಟೀಕೆ, ಆರೋಪ ಸರ್ವೇಸಾಮಾನ್ಯ. ಆದರೆ, ಆ ಆರೋಪ ಟೀಕೆಗಳು ಸತ್ಯವಾಗಿರಬೇಕು ಅಥವಾ ಕನಿಷ್ಠ ಪಕ್ಷ ಸತ್ಯಕ್ಕೆ ಹತ್ತಿರವಾಗಿರಬೇಕು ಎಂದು ನಗರ ಬಿಜೆಪಿ ಅಧ್ಯಕ್ಷ ರವೀಂದ್ರ ಮೊಯ್ಲಿ ತಿಳಿಸಿದರು. ಅವರು ಬುಧವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿ, ಮಾತನಾಡಿದರು.ಜೂ. 5ರಂದು ಕಾರ್ಕಳ ಕಾಂಗ್ರೆಸ್ ವಕ್ತಾರ, ಪುರಸಭಾ ಸದಸ್ಯ ಶುಭದ ರಾವ್ ಪತ್ರಿಕಾಗೋಷ್ಠಿಯಲ್ಲಿ …

ಸುಳ್ಳು ಮಾನ ಹಾನಿಕರ ಹೇಳಿಕೆ ನೀಡಿದ ಶುಭದ ರಾವ್‌ ವಿರುದ್ಧ ಕಾನೂನು ಕ್ರಮ – ರವೀಂದ್ರ ಮೊಯ್ಲಿ Read More »

ಜ್ಞಾನಸುಧಾ: ಎಸ್ಸೆಸೆಲ್ಸಿ ಪರೀಕ್ಷಾ ಮರು ಮೌಲ್ಯಮಾಪನ ಫಲಿತಾಂಶ – 21 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ

ಕಾರ್ಕಳ : ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಎಸ್ಸೆಸೆಲ್ಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶದ ಬಳಿಕ ವಿದ್ಯಾರ್ಥಿನಿ ಶ್ರಾವ್ಯ 619 (SAN – 125, KAN-100, SCI-100)ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳಾದ ಅನ್ವಿತಾ ನಾಯಕ್ (KAN-100, MATHS-100) 618ಅಂಕ ಗಳಿಸಿ ದ್ವಿತೀಯ ಸ್ಥಾನ ಹಾಗೂ ಕೆ. ವಿಘ್ನೇಶ್‌ ಕಿಣಿ 617 (ENG-125, HIN-100) ಅಂಕ ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ. ಸಮನ್ವಿತಾ ಜಿ. ನಾಯಕ್‌ 614 (SAN-125, KAN-100) ಅಂಕಗಳನ್ನು ಪಡೆದಿದ್ದಾರೆ. ಒಟ್ಟು 21 …

ಜ್ಞಾನಸುಧಾ: ಎಸ್ಸೆಸೆಲ್ಸಿ ಪರೀಕ್ಷಾ ಮರು ಮೌಲ್ಯಮಾಪನ ಫಲಿತಾಂಶ – 21 ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ Read More »

error: Content is protected !!
Scroll to Top