ಕಾರ್ಕಳ : ನಿಟ್ಟೆ ರೋಟರಿ ಕ್ಲಬ್‌ನ ವತಿಯಿಂದ ಎನ್‌ಇಟಿ (NET) ಸಿಬ್ಬಂದಿಗಳ ವಸತಿಗೃಹದ ಆವರಣದಲ್ಲಿ ಜು. 10ರಂದು ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಡಾ. ರಘುನಂದನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಮಹಾವಿದ್ಯಾಲಯಗಳ ಶಿಕ್ಷಕರ ಸಂಘದ ಅಧ್ಯಕ್ಷ ಡಾ. ಸುರೇಂದ್ರ ಶೆಟ್ಟಿ ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಮಾಹಿತಿ ನೀಡಿದರು. ಹಿರಿಯ ರೋಟೆರಿಯನ್ ಯೋಗೀಶ್ ಹೆಗ್ಡೆ, ತುಕರಾಮ ಶೆಟ್ಟಿ, ವೀಣಾ ದೇವಿ ಶಾಸ್ತ್ರೀಮಠ, ಕರಣಾಕರ ಶೆಟ್ಟಿ, ಸತೀಶ್ ಕುಮಾರ್, ವೇಣುಗೋಪಾಲ ಟಿ. ಆರ್. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಿಟ್ಟೆ ರೋಟರಿ ಕ್ಲಬ್ – ವನಮಹೋತ್ಸವ























