ಜು. 13 : ರಕ್ತದಾನ ಶಿಬಿರ – ಸ್ತನ ಕ್ಯಾನ್ಸರ್‌ನ ಮಾಹಿತಿ ಕಾರ್ಯಗಾರ – ತಪಾಸಣಾ ಶಿಬಿರ

ಕಾರ್ಕಳ : ಜನನಿ ಮಿತ್ರ ಮಂಡಳಿ ವಾಂಟ್ರಾಯಿಪದವು, ರೋಟರಿ ಕ್ಲಬ್‌ ಕಾರ್ಕಳ, ಜೇಸಿಐ ಕಾರ್ಕಳ, ರೋಟರ್ಯಾಕ್ಟ್‌ ಕ್ಲಬ್, ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು, ವಿಶ್ವ ಹಿಂದೂ ಪರಿಷತ್‌ ಸಾಮ್ರಾಟ್‌ ಬಜರಂಗದಳ ಘಟಕ ಕಲಂಬಾಡಿಪದವು ಹಾಗೂ ರೋಟರಿ ಸಮುದಾಯ ದಳ ಕಲಂಬಾಡಿ ಪದವು ಇವರ ಆಶ್ರಯದಲ್ಲಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ವಿಭಾಗ ಅಜ್ಜರಕಾಡು ಉಡುಪಿ ಇವರ ಸಹಯೋಗದೊಂದಿಗೆ ಬೃಹತ್‌ ರಕ್ತದಾನ ಶಿಬಿರ ಹಾಗೂ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಮಣಿಪಾಲ ಇದರ ಸಮುದಾಯ ವೈದ್ಯಕೀಯ ವಿಭಾಗದ ಸಹಯೋಗದಲ್ಲಿ ಸ್ತನ ಕ್ಯಾನ್ಸರ್‌ನ ಮಾಹಿತಿ ಕಾರ್ಯಗಾರ ಹಾಗೂ ತಪಾಸಣಾ ಶಿಬಿರ ಜು. 13ರಂದು ಬೆಳಿಗ್ಗೆ 9 ಗಂಟೆಯಿಂದ 12.30 ಗಂಟೆಗೆ ಕಲಂಬಾಡಿ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 9880197475, 9591513162, 9880726811 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಆಯೋಜಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.































error: Content is protected !!
Scroll to Top