ಸಿದ್ದರಾಮಯ್ಯಗೆ 1.9 ಕೋಟಿಯ ಮಂಚ, ಸೋಫಾಸೆಟ್‌ ಉಡುಗೊರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವರೊಬ್ಬರು ತಮ್ಮ ಬೆಂಬಲಿಗರ ಮೂಲಕ 1.9 ಕೋಟಿ ರೂ. ಮೌಲ್ಯದ ಮಂಚ ಮತ್ತು ಎರಡು ಜೊತೆ ಸೋಫಾ ಸೆಟ್‌ ಉಡುಗೊರೆಯಾಗಿ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.
ಸಿದ್ದರಾಮಯ್ಯನವರು ಮೊದಲ ಅವಧಿಯಲ್ಲಿ ಸಿಎಂ ಆಗಿದ್ದಾಗ ಕಟ್ಟಿದ್ದ ಹ್ಯೂಬ್ಲೋಟ್ ವಾಚ್ ವಿವಾದದ ಪರಿಷ್ಕೃತ ಆವೃತ್ತಿಯಂತೆ ಕಾಣುತ್ತಿದೆ. ಈ ಉಡುಗೊರೆ ನೀಡಿದ ವಿಚಾರವನ್ನು ತಮಗೆ ಅನಾಮಿಕರೊಬ್ಬರು ತಿಳಿಸಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನನ್ನನ್ನು ದೊಡ್ಡ ಸುಳ್ಳುಗಾರ ಎಂದು ಪದೇ ಪದೆ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದೆ ಬಂದು ತನಗೆ ಇಂತಹ ವಸ್ತುಗಳನ್ನು ಉಡುಗೊರೆಯಾಗಿ ಯಾಕೆ ನೀಡಿದ್ದಾರೆ ಎಂಬುದರ ಹಿಂದಿನ ಸತ್ಯವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸಚಿವರು ಬರ ಪರಿಸ್ಥಿತಿ ನಿಭಾಯಿಸುವ ಬದಲು ಹೊಸ ಕಾರುಗಳನ್ನು ಖರೀದಿಸುತ್ತಿದ್ದಾರೆ, ಸಚಿವರ ಬಂಗಲೆಗಳನ್ನು ನವೀಕರಣ ಮಾಡಲಾಗುತ್ತಿದೆ. ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿರುವ ಸಮ್ಮೇಳನ ಸಭಾಂಗಣವನ್ನು ನವೀಕರಿಸಲು ರಾಜ್ಯವು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.















































































error: Content is protected !!
Scroll to Top