ಜೇಸೀಸ್ ಶಾಲೆಯಲ್ಲಿ ಅಕ್ಷರಾಭ್ಯಾಸ

ಸಮಾಜದಲ್ಲಿ ಬದುಕಲು ಕಲಿತಾಗ ವಿದ್ಯೆ ಸಾರ್ಥಕ

ಕಾರ್ಕಳ : ಜೇಸಿ ಶಾಲೆಯಲ್ಲಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಜೂ. 8 ರಂದು ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಿತು. ಅ -ಳ-ಕ್ಷ ಅಕ್ಷರಗಳ ಭಾರತೀಯ ಸಂಸ್ಕೃತ ಪದಗಳನ್ನು ಬರೆಯಿಸುವುದರ ಮೂಲಕ ಅಕ್ಷರಾಭ್ಯಾಸ ನೆರವೇರಿಸಿ ಮಾತನಾಡಿದ ವಿದ್ವಾನ್ ಗಣೇಶ್ ವಂಧವ ಭಟ್, ಜ್ಞಾನದ ಆರಂಭವಾಗಬೇಕಾದರೆ ಅಕ್ಷರಾಭ್ಯಾಸ ಬಹಳ ಮುಖ್ಯ. ಆದರೆ, ಅಕ್ಷರಗಳನ್ನು ಅಭ್ಯಾಸಿಸುವಾಗಲೇ ಮಕ್ಕಳಲ್ಲಿ ದೇವರ ಮೇಲೆ ಭಕ್ತಿ ಹಾಗೂ ಹಿರಿಯರ ಮೇಲೆ ಬಗ್ಗೆ ಗೌರವ ಮೂಡಿಸುವಂತಹ ಕಾರ್ಯವಾಗಬೇಕು. ಕುಟುಂಬ ಮತ್ತು ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿತಾಗ ವಿದ್ಯೆ ಸಾರ್ಥಕವಾಗುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಹಳೆ ವಿದ್ಯಾರ್ಥಿ ವಿಖ್ಯಾತ್ ರಾವ್, ಜ್ಞಾನ ಮತ್ತು ಶಿಕ್ಷಣದಿಂದಾಗಿ ಸಮಾಜದಲ್ಲಿ ಘನತೆ ಹೆಚ್ಚುತ್ತದೆ. ತನ್ಮೂಲಕ ಎಲ್ಲರೊಂದಿಗೆ ಹೊಂದಿಕೊಂಡು ವಿನಯಶೀಲರಾಗಿ ಬದುಕಲು ಪ್ರೇರೇಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ, ಶಾಲಾ ಆಡಳಿತ ಮಂಡಳಿಯ ಸದಸ್ಯ ಜಯ ಕುಮಾರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುರೇಖಾ ರಾಜ್ ಸ್ವಾಗತಿಸಿದರು. ಸಹ ಶಿಕ್ಷಕಿಯರಾದ ಶಾಲಿನಿ ಕಾರ್ಯಕ್ರಮ ನಿರೂಪಿಸಿ, ಶ್ರೀದೇವಿ ವಂದಿಸಿದರು.

ಅಕ್ಷರಾಭ್ಯಾಸ




























































































































































































































error: Content is protected !!
Scroll to Top