ಜೆಇಇ ಮೈನ್ (ಬಿ.ಆರ್ಕ್‌) ಅಂತಿಮ ಫಲಿತಾಂಶ

ಕಾರ್ಕಳ ಜ್ಞಾನಸುಧಾದ ಇಬ್ಬರು ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್

10 ವಿದ್ಯಾರ್ಥಿಗಳಿಗೆ 90ಕ್ಕಿಂತ ಅಧಿಕ ಪರ್ಸಂಟೈಲ್

ಕಾರ್ಕಳ : ರಾಷ್ಟ್ರಮಟ್ಟದಲ್ಲಿ ಎನ್‌ಟಿಎ ನಡೆಸಿದ ಜೆ.ಇ.ಇ. ಮೈನ್ – ಬಿ.ಆರ್ಕ್ ಪರೀಕ್ಷೆಯಲ್ಲಿ ಕಾರ್ಕಳ ಗಣಿತನಗರ ಜ್ಞಾನಸುಧಾ ಪಿ.ಯು. ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಹಾಗೂ 10 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದಿದ್ದಾರೆ.

ವಿದ್ಯಾರ್ಥಿಗಳಾದ ಚಮನ್ ಡಿ.ಪಿ – 99.8141321, ಶ್ರೀಕಾಂತ್ ಎಚ್.- 99.6402022, ಸೂರ್ಯ ವಿ.- 96.6726137, ಹರ್ಷಿತ್.ಎಸ್.ಎಸ್.- 96.0327859, ವಿಶಾಲ್ ಎಂ.ವಿ. – 94.8139797, ಸಾಯಿ ಲಿಖಿತ್‌ ರೆಡ್ಡಿ -92.4129315, ಅಖಿಲ್‌ ದಯಾನಂದ್ ನಾಯಕ್ – 92.2271781, ಶ್ರೀರಾಮ ಗಜಾನನ ಪಟಗಾರ್ – 92.2271781, ಅಮೋಘ ಎಸ್.ಆರ್. – 91.8465656 ಹಾಗೂ ದರ್ಶನ್‌ ರಾಜು ನಾಯಕ್- 91.0783388 ಪರ್ಸಂಟೈಲ್ ಗಳಿಸಿರುತ್ತಾರೆ.

ಈ ಹಿಂದೆ ರಾಷ್ಟ್ರ ಮಟ್ಟದಲ್ಲಿ ನಡೆದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಮೈನ್ 2ನೇ ಫೇಸ್‌ನ ಅಂತಿಮ ಫಲಿತಾಂಶದಲ್ಲಿಯೂ ಕಾರ್ಕಳ ಜ್ಞಾನಸುಧಾ ಪಿಯು ಕಾಲೇಜಿನ ಒಟ್ಟು 9 ವಿದ್ಯಾರ್ಥಿಗಳು 98 ಪರ್ಸಂಟೈಲ್‌ಗಿಂತ ಅಧಿಕ, 45 ವಿದ್ಯಾರ್ಥಿಗಳು 95 ಪರ್ಸಂಟೈಲ್‌ಗಿಂತ ಅಧಿಕ ಹಾಗೂ 97 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. ಒಟ್ಟು 126 ವಿದ್ಯಾರ್ಥಿಗಳು ಐಐಟಿ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆ ಗಿಟ್ಟಿಸಿಕೊಂಡಿರುತ್ತಾರೆ. 2020-21 ಮತ್ತು 2021-22ರ ಜೆಇಇ ಮೈನ್‌ಅಂತಿಮ ಫಲಿತಾಂಶದಲ್ಲಿಯೂ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿಕೊಂಡಿರುತ್ತಾರೆ.
ಸಾಧಕ ವಿದ್ಯಾರ್ಥಿಗಳನ್ನು ಹಾಗೂ ಜ್ಞಾನಸುಧಾ ಎಂಟ್ರನ್ಸ್ ಅಕಾಡೆಮಿಯಾವನ್ನು ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್‌ ಟ್ರಸ್ಟ್‌ ಅಧ್ಯಕ್ಷ ಸುಧಾಕರ್‌ ಶೆಟ್ಟಿ ಅಭಿನಂದಿಸಿದ್ದಾರೆ.





























































































































































































































error: Content is protected !!
Scroll to Top