ಸೋಮವಾರದಿಂದ ಶಾಲಾರಂಭ : ಮುಂದುವರಿದ ಪಠ್ಯ ಪುಸ್ತಕ ಗೊಂದಲ

ಮೊದಲ ದಿನವೇ ಸಿಗಲಿದೆ ಸಮವಸ್ತ್ರ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲದ ನಡುವೆಯೇ ಸೋಮವಾರದಿಂದ ಶಾಲಾರಂಭಕ್ಕೆ ಸಿದ್ಧತೆಗಳು ನಡೆದಿವೆ. ಮೇ 29ರಂದು ಶಾಲೆಗಳನ್ನು ಆರಂಭಿಸುವುದಾಗಿ ಹಿಂದಿನ ಬಿಜೆಪಿ ಸರಕಾರ ಆದೇಶ ಹೊರಡಿಸಿತ್ತು. ಆ ಪ್ರಕಾರ ಸೋಮವಾರ ಶಾಲೆ ಆರಂಭವಾಗಲಿದೆ. ಆದರೆ ಉಡುಪಿ ಮತ್ತು ದಕ್ಷಿಣ ಕನ್ನಡ ಸೇರಿ ಕೆಲವು ಜಿಲ್ಲೆಗಳಲ್ಲಿ ಭಾರಿ ಸೆಖೆಯಿದ್ದು, ನೀರಿಗೂ ಬರವಿದೆ. ಇಂಥ ಪರಿಸ್ಥಿತಿಯಲ್ಲಿ ಶಾಲೆ ಆರಂಭಿಸುವುದು ಸರಿಯೇ ಎಂಬ ಪ್ರಶ್ನೆಯಿದೆ.
ಸೋಮವಾರ ಒಂದರಿಂದ ಹತ್ತನೇ ತರಗತಿಗಳು ಆರಂಭವಾಗಲಿದ್ದು, ಮೊದಲ ದಿನವೇ ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಒಂದು ಜತೆ ಸಮವಸ್ತ್ರ ಸಿಗಲಿದೆ ಎಂದು ಶೀಕ್ಷಣ ಇಲಾಖೆ ಹೇಳಿದೆ.
ಈಚೆಗೆ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಶಿಕ್ಷಣ ಇಲಾಖೆ ಈ ಬಾರಿ ಮೊದಲ ದಿನವೇ ಅಗತ್ಯ ಸಾಮಗ್ರಿ ಪೂರೈಸಲು ನಿರ್ಧರಿಸಿದೆ. ಆದರೆ ಸರಕಾರದ ಮಟ್ಟದಲ್ಲಿ ಆಗಬೇಕಾಗಿರುವ ಕೆಲವು ತೀರ್ಮಾನ ವಿಳಂಬವಾಗುತ್ತಿರುವುದರಿಂದ ಗೊಂದಲ ಮುಂದುವರಿದಿವೆ.
ಈಗಾಗಲೇ ಸುಮಾರು 6.30 ಕೋಟಿ ಪಠ್ಯ ಪುಸ್ತಕಗಳನ್ನು ವಿತರಿಸಲಾಗಿದೆ. ಪಠ್ಯಕ್ರಮ ಪರಿಷ್ಕರಿಸುವುದಾಗಿ ಕಾಂಗ್ರೆಸ್‌ ಸರಕಾರ ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಚರ್ಚಿಸುವುದಾಗಿ ಹೇಳಿದ್ದಾರೆ. ಆದರೆ ಈ ವರ್ಷದ ಪಠ್ಯಪುಸ್ತಕಗಳು ಈಗಾಗಲೇ ವಿತರಣೆ ಆಗಿದ್ದು, ಪರಿಷ್ಕರಣೆಯ ಪರಿಣಾಮ ಏನು ಎಂಬ ಗೊಂದಲವಿದೆ. ಇಡೀ ಪಠ್ಯಪುಸ್ತಕವನ್ನೇ ವಾಪಸ್‌ ಪಡೆಯಲಾಗುವುದೆ ಅಥವಾ ಕೆಲವು ಅಂಶ ಕೈಬಿಡಲಾಗುವುದೆಎಂಬ ಬಗ್ಗೆ ಅಸ್ಪಷ್ಟತೆ ಇದೆ.
ಶಾಲೆಯ ಮೊದಲ ದಿನವೇ ಒಂದು ಜತೆ ಸಮವಸ್ತ್ರವನ್ನು ಮಕ್ಕಳಿಗೆ ನೀಡುವ ಸಂಕಲ್ಪ ಮಾಡಲಾಗಿದೆ. ಮತ್ತೂಂದು ಜತೆ ಸಮವಸ್ತ್ರವನ್ನು ಆಗಸ್ಟ್‌ ವೇಳೆಗೆ ನೀಡುವ ಚಿಂತನೆ ಇದೆ.









































error: Content is protected !!
Scroll to Top