ಬೈಕ್‌ ಪಲ್ಟಿಯಾಗಿ ಗಾಯ

ಹೆಬ್ರಿ: ಹೆಬ್ರಿಯ ವರಂಗ ಗ್ರಾಮದ ಚಟ್ಕಲ್‌ಪಾದೆಯ ಬಳಿ ಸೆ.16ರಂದು ರಾತ್ರಿ ಬೈಕ್‌ ಪಲ್ಟಿಯಾಗಿ ಮುನಿಯಾಲಿನ ಪ್ರಭಾಕರ ಜೋಗಿ (66) ಎಂಬವರು ಗಾಯಗೊಂಡಿದ್ದಾರೆ.
ದೇವಿಪ್ರಸಾದ್‌ ಎಂಬವರ ಬೈಕಿನಲ್ಲಿ ಹಿಂಬದಿ ಸವಾರನಾಗಿ ಪ್ರಯಾಣಿಸುತ್ತಿದ್ದ ವೇಳೆ ಚಟ್ಕಲ್‌ಪಾದೆಯಲ್ಲಿ ಬೈಕ್‌ ಪಲ್ಟಿಯಾಗಿ ಪ್ರಭಾಕರ ಜೋಗಿಯವರ ಕಾಲಿನ ಮೂಳೆ ಮುರಿದು , ಕೈಗಳಿಗೆ ತರಚಿದ ಗಾಯವಾಗಿದೆ. ದೇವಿಪ್ರಸಾದ್‌ ಗಾಯಗಳಿಲ್ಲದೆ ಪಾರಾಗಿದ್ದಾರೆ. ಅತಿವೇದಿಂದ ಮತ್ತು ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿ ಸಡನ್‌ ಬ್ರೇಕ್‌ ಹಾಕಿದಾಗ ಹತೋಟಿ ತಪ್ಪಿದ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಪ್ರಭಾಕರ ಜೋಗಿ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.error: Content is protected !!
Scroll to Top