ಫಾಝಿಲ್‌ ಹತ್ಯಾ ಪ್ರಕರಣ: 6 ಆರೋಪಿಗಳ ಬಂಧನ

ಮಂಗಳೂರು : ಸುರತ್ಕಲ್‌ನಲ್ಲಿ ಜು. 28ರಂದು ನಡೆದ ಫಾಝಿಲ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹುಟ್ಟುಹಬ್ಬದ ಮುನ್ನ ದಿನ ರಾತ್ರಿ ವಾಚ್ ಮತ್ತು ಚಪ್ಪಲಿ ಖರೀದಿಗಾಗಿ ಸುರತ್ಕಲ್‌ ಪೇಟೆಗೆ ಬಂದಿದ್ದ ಫಾಝಿಲ್‌ನನ್ನು ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಅಟ್ಟಾಡಿಸಿ ಕೊಲೆ ಮಾಡಿದ್ದರು. ಹತ್ಯೆಗೆ ಬಳಸಿದ ಕಾರು ಇನ್ನಾದ ಬಳಿ ಪತ್ತೆಯಾದ್ದು, ಕಾರಿನ ಮಾಲಕ ಅಜಿತ್‌ ಕ್ರಾಸ್ತ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಇದೀಗ ಪ್ರಕರಣದ ರಹಸ್ಯ ಬಯಲಾಗಿದೆ.
ಫಾಝಿಲ್‌ ಕೊಲೆ ಪ್ರಕರಣ ಸಂಬಂಧ ಮಂಗಳವಾರ ಖಚಿತ ಮಾಹಿತಿಯ ಮೇರೆಗೆ ತನಿಖಾ ತಂಡವು ಕಾರ್ಯಾಚರಣೆ ನಡೆಸಿ ಉದ್ಯಾವರದಲ್ಲಿ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ವಿಚಾರಣೆ ವೇಳೆ ಆರೋಪಿಗಳು ಹತ್ಯೆ ಬಗ್ಗೆ ಇಂಚಿಂಚು ಮಾಹಿತಿಯನ್ನು ಹೊರಹಾಕಿದ್ದಾರೆ. ಸುಹಾಸ್‌ ಶೆಟ್ಟಿ, ಮೋಹನ್‌, ಗಿರಿಧರ್‌, ಅಭಿಷೇಕ್‌, ಶ್ರೀನಿವಾಸ್‌ ಮತ್ತು ದೀಕ್ಷಿತ್ ಬಂಧಿತರು. ಸುಹಾಸ್‌ ವಿರುದ್ಧ ಬಜ್ಪೆ ಮತ್ತು ಬೆಳ್ತಂಗಡಿ ಠಾಣೆಯಲ್ಲಿ 4 ಪ್ರಕರಣ ದಾಖಲಾಗಿತ್ತು. ಮೋಹನ್‌ ವಿರುದ್ಧ ಸುರತ್ಕಲ್‌ ಮತ್ತು ಕಾವೂರಿನಲ್ಲಿ ಎರಡು ಪ್ರಕರಣಗಳು, ಸುರತ್ಕಲ್‌ ನಿವಾಸಿ ಗಿರಿಧರ್‌ ವಿರುದ್ಧ ಎರಡು ಪ್ರಕರಣಗಳು, ಕಾಟಿಪಳ್ಳ ನಿವಾಸಿ ಅಭಿಷೇಕ್‌ ವಿರುದ್ಧ 2 ಪ್ರಕರಣಗಳು, ಶ್ರೀನಿವಾಸ ವಿರುದ್ಧ 4 ಪ್ರಕರಣಗಳು ಮತ್ತು ದೀಕ್ಷಿತ್‌ ವಿರುದ್ಧ 3 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ.

ಹಂತಕರ ಪ್ಲಾನ್‌
ಬಂಧಿತ ಆರೋಪಿಗಳು ಫಾಝಿಲ್‌ ಕೊಲೆ ಸಂಚಿನ ಬಗ್ಗೆ ಪೊಲೀಸರಿಗೆ ತಿಳಿಸಿರುತ್ತಾರೆ. ಸುಹಾಸ್‌ ಅಭಿಷೇಕ್ ನೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಓರ್ವನನ್ನು ಹತ್ಯೆ ಮಾಡುವ ಬಗ್ಗೆ ಮಾತಾನಾಡುತ್ತಾನೆ. ಜು. 27 ರಂದು ಸುರತ್ಕಲ್‌ನ ಒಂದು ಕಡೆಯಲ್ಲಿ ಅಭಿಷೇಕ್‌ ಮತ್ತು ಸುಹಾಸ್‌ ಉಳಿದವರನ್ನು ಸೇರಿಸಿಕೊಂಡು ಮಾತುಕತೆ ನಡೆಸಿ ಕೃತ್ಯಕ್ಕೆ ಕಾರಿನ ಅವಶ್ಯಕತೆ ಬಗ್ಗೆ ಹೇಳಿಕೊಂಡಿದ್ದಾರೆ. ಅದರಂತೆ ಮೋಹನ್‌ ಮತ್ತು ಗಿರಿಧರ್‌ ಮಧ್ಯಾಹ್ನದ ವೇಳೆಗೆ ಅಜಿತ ಕ್ರಾಸ್ತ ಅವರ ಕಾರನ್ನು 15 ಸಾವಿರ ರೂ. ಬಾಡಿಗೆಗೆ ತರುತ್ತಾರೆ. ಫಾಝಿಲ್‌ ಚಲನವಲನಗಳ ಮೇಲೆ ನಿಗಾ ಇಡುತ್ತಾರೆ. ಅಂದು ಸಂಜೆ 6 ಮಂದಿ ಕಾರಿನಲ್ಲಿ ಫಾಝಿಲ್‌ ಬರುವಿಕೆಗಾಗಿ ಸುರತ್ಕಲ್‌ನಲ್ಲಿ ಕಾಯುತ್ತಿರುತ್ತಾರೆ. ಫಾಝಿಲ್‌ ಕಣ್ಣಿಗೆ ಬೀಳುತ್ತಿದ್ದಂತೆ ಸುಹಾಸ್‌, ಮೋಹನ್‌, ಅಭಿಷೇಕ್‌ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಚ್ಚಿ ಪರಾರಿಯಾಗಿದ್ದಾರೆ. ಗಿರಿಧರ್‌ ಕಾರು ಚಾಲನೆ ಮಾಡುತ್ತಿದ್ದು, ದೀಕ್ಷಿತ್‌ ಕಾರಿನಲ್ಲೇ ಕುಳಿತ್ತಿದ್ದನು. ಶ್ರೀನಿವಾಸ್‌ ಕೃತ್ಯ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಯಾರು ಕೂಡ ಅಡ್ಡಿ ಬರಬಾರದೆಂದು ಕಾರಿನ ಬಳಿ ನಿಲ್ಲುತ್ತಾನೆ. ಕೃತ್ಯ ನಡೆಸಿ ಬಳಿಕ ಕಾರಿನಲ್ಲೆ ಪರಾರಿಯಾದ ಆರೋಪಿಗಳು ಕಾರ್ಕಳಕ್ಕೆ ಬಂದಿರುತ್ತಾರೆ. ನಿರ್ಜನ ಪ್ರದೇಶದಲ್ಲಿ ಕಾರನ್ನು ನಿಲ್ಲಿಸಿ ಬೇರೊಂದು ಕಾರಿನಲ್ಲಿ ಓಡಾಟ ನಡೆಸಲು ಪ್ರಾರಂಭಿಸಿದ್ದಾರೆ. ಆದರೂ ಬೇರೆ ಬೇರೆ ಕಡೆಗಳಲ್ಲಿ ಆರೋಪಿಗಳು ನೆಲೆಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ನಡುವೆ ಮಂಗಳವಾರ ಬೆಳಿಗ್ಗಿನ ಜಾವ 2 ಗಂಟೆಗೆ ಪೊಲೀಸರಿಗೆ ಹಂತಕರ ಸುಳಿವು ದೊರೆತು, 5.30ರ ಸುಮಾರಿಗೆ ಹಂತಕರನ್ನು ವಶಕ್ಕೆ ಪಡೆಲಾಗಿದೆ.

















































































































































error: Content is protected !!
Scroll to Top