ನ್ಯೂಸ್ ಕಾರ್ಕಳ ವರದಿ ಫಲಶ್ರುತಿ

ಕಾರ್ಕಳ : ನಿಟ್ಟೆ ರಸ್ತೆ ಬದಿಯಲ್ಲಿ ವಿದ್ಯುತ್‌ ತಂತಿಗೆ ಚಾಚಿಕೊಂಡಿದ್ದ ಮರದ ಬಳ್ಳಿಯನ್ನು ಮೆಸ್ಕಾಂ ಇಲಾಖೆ ತೆರವುಗೊಳಿಸುವ ಮೂಲಕ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ. ನಿಟ್ಟೆ ಮುಖ್ಯರಸ್ತೆ ಬದಿ ಒಣಗಿದ ಮರಗಳು, ವಿದ್ಯುತ್‌ ತಂತಿಯಲ್ಲಿ ಹರಡಿಕೊಂಡಿದ್ದ ಮರದ ಬಳ್ಳಿಗಳನ್ನು ಮೆಸ್ಕಾಂ ಇಲಾಖೆ ಸಿಬ್ಬಂದಿ ಮಂಗಳವಾರ ತೆರವುಗೊಳಿಸಿದೆ.

ಫಲಶ್ರುತಿ
ವಿದ್ಯುತ್‌ ತಂತಿಗೆ ಹರಡಿಕೊಂಡಿದ್ದ ಬಳ್ಳಿ, ಒಣಗಿದ ಮರ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕುರಿತು ನ್ಯೂಸ್‌ ಕಾರ್ಕಳ ಜು. 4ರಂದು ವರದಿ ಪ್ರಕಟಿಸಿತ್ತು. ತಂತಿಗೆ ತಾಗಿದ್ದ ಬಳ್ಳಿ ಮೂಲಕ ವಿದ್ಯುತ್ ನೆಲಕ್ಕೆ ಪ್ರವಹಿಸಿದರೆ ಅವಘಡ ಸಂಭವಿಸುವ ಸಾ‍ಧ್ಯತೆ ಇತ್ತು. ಎಚ್‌ಟಿ ಲೈನ್‌ಗೆ ಬಳ್ಳಿ ಹಬ್ಬಿದ್ದ ಪರಿಣಾಮ ಈ ಭಾಗದಲ್ಲಿ ಪದೇ ಪದೆ ವಿದ್ಯುತ್‌ ವ್ಯತ್ಯಯವಾಗುತ್ತಿತ್ತು. ಮನೆ, ಹೊಟೇಲ್‌ಗಳ ವಿದ್ಯುತ್‌ ಉಪಕರಣ ಹಾನಿಗೀಡಾಗುತ್ತಿತ್ತು. ಇದೀಗ ಮೆಸ್ಕಾಂ ಇಲಾಖೆ ಕೂಡಲೇ ಸ್ಪಂದಿಸಿರುವುದರಿಂದ ಸ್ಥಳೀಯರಿಗೆ ಅನುಕೂಲ ಮಾಡಿಕೊಟ್ಟಿದೆ.





























































































































































































































error: Content is protected !!
Scroll to Top