Thursday, May 26, 2022
spot_img
Homeರಾಜ್ಯಗೋವಾ ಗಡಿ ದಾಟಲು ಕರ್ನಾಟಕ ಪ್ರವಾಸಿಗರಿಗೆ 10 ಸಾವಿರ ರೂ. ದಂಡ

ಗೋವಾ ಗಡಿ ದಾಟಲು ಕರ್ನಾಟಕ ಪ್ರವಾಸಿಗರಿಗೆ 10 ಸಾವಿರ ರೂ. ದಂಡ

ಪಣಜಿ : ಗೋವಾಗೆ ಟ್ಯಾಕ್ಸಿಯಲ್ಲಿ ಹೋಗುವ ಕರ್ನಾಟಕದ ಪ್ರವಾಸಿಗರು ಗಡಿ ದಾಟುವುದಕ್ಕೆ ವಿಶೇಷ ಪರವಾನಗಿ ಪಡೆಯಲು ಪ್ರತಿ ವಾಹನಕ್ಕೆ 10,262 ರೂ. ದಂಡ ಪಾವತಿಸಬೇಕಾಗಿದೆ. ಗೋವಾ ಸರ್ಕಾರದ ಈ ನಡೆ ಕರ್ನಾಟಕದ ಪ್ರವಾಸಿಗರು ಗೋವಾಗೆ ತೆರಳದೆ ರಾಜ್ಯಕ್ಕೆ ವಾಪಸಾಗುತ್ತಿದ್ದಾರೆ. ಗೋವಾದ ಚೆಕ್ ಪೋಸ್ಟ್‌ ಗಳಲ್ಲಿ ಗುರುವಾರದಿಂದ ಶನಿವಾರ ರಾತ್ರಿಯವರೆಗೆ 40 ಟ್ಯಾಕ್ಸಿಗಳನ್ನು ತಡೆಹಿಡಿಯಲಾಗಿದೆ ಎಂದು ಕರ್ನಾಟಕ ಪ್ರವಾಸೋದ್ಯಮ ವೇದಿಕೆಯ ಉಪಾಧ್ಯಕ್ಷ ಎಂ. ರವಿ ತಿಳಿಸಿದ್ದಾರೆ. ಸಾಮಾನ್ಯವಾಗಿ ವಿಶೇಷ ಪರವಾನಗಿ ಪಡೆಯಲು ರೂ. 100 ಅಥವಾ ರೂ. 200 ವೆಚ್ಚವಾಗುತ್ತದೆ. ಆ ಹಣವನ್ನು ಬೆಂಗಳೂರಿನ ಶಾಂತಿನಗರದಲ್ಲಿರುವ ರಾಜ್ಯ ಸಾರಿಗೆ ಪ್ರಾಧಿಕಾರ ಕಚೇರಿ ಮತ್ತು ರಾಜ್ಯದ ಇತರ ಭಾಗಗಳಲ್ಲಿನ ಆರ್‌ಟಿಒಗಳಲ್ಲಿ ಪಾವತಿಸಲಾಗುತ್ತದೆ. ಆದರೆ ಎ. 14 ಗುರುವಾರದಿಂದ ನಾಲ್ಕು ದಿನಗಳ ಕಾಲ ರಜೆ ಇರುವ ಕಾರಣ ಆರ್‌ಟಿಒ ಕಚೇರಿಗಳು ಕಾರ್ಯನಿರ್ವಹಿಸುತ್ತಿಲ್ಲ. ರಾಜ್ಯದಲ್ಲಿ ಆನ್ಲೈನ್‌ನಲ್ಲಿ ಪರವಾನಗಿ ಪಡೆಯುವ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಟ್ಯಾಕ್ಸಿ ಚಾಲಕರು ಈ ಪರವಾನಗಿಗಳನ್ನು ಪಡೆಯಲು ಸಾಧ್ಯವಾಗಿಲ್ಲ.
ಚೆಕ್‌ಪೋಸ್ಟ್‌ಗಳಲ್ಲಿ ವಿಶೇಷ ಪರವಾನಗಿ ಪಡೆಯುವ ಸೌಲಭ್ಯವಿತ್ತು. ಹೀಗಾಗಿ ಟ್ಯಾಕ್ಸಿ ಚಾಲಕರು ಗೋವಾ ಗಡಿಯಲ್ಲಿಯೇ ಲೈಸೆನ್ಸ್‌ ಪಡೆಯಲು ತೆರಳಿದ್ದರು. ಆದರೆ ಅಲ್ಲಿ ಏಪ್ರಿಲ್ 1ರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಆನ್ಲೈನ್‌ ಮೂಲಕ ವಿಶೇಷ ಪರವಾನಗಿಗಳನ್ನು ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ ಇನ್ನೂ ಆ ಸೌಲಭ್ಯ ಜಾರಿಗೆ ಬಂದಿಲ್ಲ. ಪ್ರವಾಸಿಗರು ಗೋವಾಕ್ಕೆ ಪ್ರವೇಶಿಸಲು ದಂಡದಂತಹ ದೊಡ್ಡ ಮೊತ್ತವನ್ನು ಪಾವತಿಸಬೇಕಾಗಿದೆ. ನಮ್ಮದೇ ಆದ ಅರ್ಜುನ್ ಟೂರ್ಸ್ ಅಂಡ್ ಟ್ರಾವೆಲ್ಸ್‌ನ ಟ್ಯಾಕ್ಸಿ ಡ್ರೈವರ್ 10,262 ರೂ. ದಂಡ ಪಾವತಿಸಿದ್ದಾರೆ. ವ್ಯಾನ್‌ಗಳಂತಹ ದೊಡ್ಡ ವಾಹನಗಳಿಗೆ 17,000 ರೂ. ಮತ್ತು ಪ್ರವಾಸಿ ಬಸ್‌ಗಳಿಗೆ 25,000 ರೂ. ದಂಡವನ್ನು ಗೋವಾ ಗಡಿಯಲ್ಲಿ ವಿಧಿಸಲಾಗುತ್ತಿದೆ ಎಂದು ರವಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!