ಮಂಗಳೂರು : ಲೇಡಿಹಿಲ್ ಸರ್ಕಲ್ ಗೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ

ಮಂಗಳೂರು: ಮಹಾನಗರ ಪಾಲಿಕೆಯು ಲೇಡಿಹಿಲ್ ಸರ್ಕಲ್ ಗೆ ಎ. 14ರಂದು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಿತು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ಸರ್ಕಲ್ ಗೆ ಇಡಬೇಕೆಂಬ ಒತ್ತಾಯವಿತ್ತು. ಇದೀಗ ಶಾಸಕ ವೇದವ್ಯಾಸ ಕಾಮತ್, ನಾರಾಯಣ ಗುರುಗಳ ಹೆಸರನ್ನು ಈ ಸರ್ಕಲ್ ಗೆ ಇಡುವ ಮೂಲಕ ಅವರ ಹೆಸರನ್ನು ಇನ್ನಷ್ಟು ಜೀವಂತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭವಿಷ್ಯದಲ್ಲಿ ನಾರಾಯಣ ಗುರುಗಳ ಪುತ್ಥಳಿಯನ್ನು ನಿರ್ಮಾಣ ಮಾಡಿ ನೂತನ ವೃತ್ತ ನಿರ್ಮಾಣದ ಯೋಚನೆಯನ್ನು ನಮ್ಮ ಸರಕಾರದ ಹೊಂದಿದೆ ಎಂದು ತಿಳಿಸಿದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮಾತನಾಡಿ, ಲೇಡಿಹಿಲ್ ಸರ್ಕಲ್ ಗೆ ನಾರಾಯಣ ಗುರುಗಳ ಮರುನಾಮಕರಣಕ್ಕೆ ಜಿಲ್ಲಾಡಳಿತ ಯತ್ನಿಸುತ್ತಿದ್ದ ಸಂದರ್ಭ ಹತ್ತಾರು ರೀತಿಯಲ್ಲಿ ತಡೆಯೊಡ್ಡುವ ಕಾರ್ಯ ನಡೆಯಿತು. ಈ ಎಲ್ಲಾ ಅಡೆತಡೆಗಳ ಮಧ್ಯೆಯೇ ನಾರಾಯಣ ಗುರು ವೃತ್ತವೆಂದು ಅಧಿಕೃತವಾಗಿ ಘೋಷಣೆ ಮಾಡಿದೆ ಎಂದರು.
ಬಹಳಷ್ಟು ವರ್ಷಗಳಿಂದ ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಹೆಸರಿಡಬೇಕೆಂಬ ಕೂಗು ಕೇಳಿ ಬರುತ್ತಿದ್ದು, ಸಾಕಷ್ಟು ಸಂಘಟನೆಗಳು ಜನಪ್ರತಿನಿಧಿಗಳಿಗೆ ಒತ್ತಾಯವನ್ನು ಮಾಡುತ್ತಲೇ ಇತ್ತು. ಈ ನಡುವೆ ಕೆಲ ಸಂಘಟನೆಗಳು ಅನಧಿಕೃತವಾಗಿಯೂ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡುವ ಪ್ರಯತ್ನವನ್ನೂ ಮಾಡಿದ್ದರೂ, ಇದಕ್ಕೆ ಸಾಕಷ್ಟು ವಿರೋಧವೂ ವ್ಯಕ್ತವಾಗಿತ್ತು. ಇದೀಗ ರಾಜ್ಯ ಸರಕಾರದ ಆದೇಶದಂತೆ ಪಾಲಿಕೆಯಿಂದಲೇ ಲೇಡಿಹಿಲ್ ಸರ್ಕಲ್ ಗೆ ಅಧಿಕೃತವಾಗಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಲಾಗಿದೆ.





























































































































































































































error: Content is protected !!
Scroll to Top