Tuesday, May 17, 2022
spot_img
Homeಜಿಲ್ಲಾಮಕ್ಕಳಿಗೆ ಲಸಿಕೆ : ಉಡುಪಿಗೆ 3ನೇ ಸ್ಥಾನ

ಮಕ್ಕಳಿಗೆ ಲಸಿಕೆ : ಉಡುಪಿಗೆ 3ನೇ ಸ್ಥಾನ

ಮಂಗಳೂರು : ರಾಜ್ಯಾದ್ಯಂತ ಚಾಲ್ತಿಯಲ್ಲಿರುವ 12ರಿಂದ 14 ವರ್ಷದ ಮಕ್ಕಳ ಲಸಿಕಾ ಅಭಿಯಾನದಲ್ಲಿ ಕರಾವಳಿಯ ಜಿಲ್ಲೆಗಳು ಉತ್ತಮ ಪ್ರಗತಿಯನ್ನು ಸಾಧಿಸುತ್ತಿವೆ. ಉಡುಪಿ ಜಿಲ್ಲೆ ಲಸಿಕಾಕರಣದಲ್ಲಿ 3 ನೇ ಸ್ಥಾನವನ್ನು ಪಡೆದುಕೊಂಡರೆ ದ.ಕ. 6ನೇ ಸ್ಥಾನದಲ್ಲಿದೆ.
ಆರೋಗ್ಯ ಇಲಾಖೆಯ ಗುರಿಯ ಪ್ರಕಾರ ಉಡುಪಿ ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 30,935 ಮಂದಿಯ ಗುರಿ ಇರಿಸಿದ್ದು ಈಗಾಗಲೇ 28,426 ಮಕ್ಕಳಿಗೆ ಲಸಿಕೆ ನೀಡಲಾಗಿದೆ. ದ.ಕ.ದಲ್ಲಿ 60,573 ಮಂದಿಯ ಗುರಿ ಇದ್ದು, 50,350 ಮಂದಿಗೆ ಮೊದಲ ಡೋಸ್‌ ಲಸಿಕೆ ನೀಡಲಾಗಿದೆ. ಲಸಿಕಾ ಅಭಿಯಾನಕ್ಕೆ ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆಯೂ ಸಾಥ್‌ ನೀಡಿದ್ದು, 12ರಿಂದ 14 ವಯೋಮಾನದವರಿಗೆ ಕೊರ್ಬೇವ್ಯಾಕ್ಸ್‌ ಲಸಿಕೆಯನ್ನು ಎರಡು ಡೋಸ್‌ಗಳನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ.
ಪ್ರಥಮ ಸ್ಥಾನವನ್ನು ವಿಜಯಪುರ ಜಿಲ್ಲೆ ಪಡೆದುಕೊಂಡರೆ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕ್ರಮವಾಗಿ ಬೀದರ್‌ ಮತ್ತು ಉಡುಪಿ ಜಿಲ್ಲೆ ಪಡೆದುಕೊಂಡಿದೆ.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!