ಫೆ. 19 : ಕಾರ್ಕಳದಲ್ಲಿ ಕಂದಾಯ ಮೇಳ

ಕಾರ್ಕಳ : ಫೆ. 12ರಂದು ಕಾರ್ಕಳದಲ್ಲಿ ಪ್ರಾರಂಭಗೊಂಡ ಕಡತ ವಿಲೇವಾರಿ ಸಪ್ತಾಹ ಫೆ. 19ರಂದು ಕೊನೆಗೊಳ್ಳುತ್ತಿದ್ದು, ಕುಕ್ಕುಂದೂರು ಗ್ರಾ.ಪಂ. ಮುಂಭಾಗದ ಮೈದಾನದಲ್ಲಿ ಕಂದಾಯ ಮೇಳ ನಡೆಯಲಿದೆ. ಕಂದಾಯ ಸಚಿವ ಆರ್. ಅಶೋಕ್‌ ಕಂದಾಯ ಮೇಳದ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಈ ವೇಳೆ 4367 ಫಲಾನುಭವಿಗಳಿಗೆ ಸರಕಾರದ ಸೌಲಭ್ಯ ವಿತರಣೆಯಾಗಲಿದೆ.

10 ಸಾವಿರಕ್ಕೂ ಅಧಿಕ ಕಡತ ವಿಲೇವಾರಿ

ದಾಖಲೆಗಳ ಕೊರತೆ, ತಾಂತ್ರಿಕ ಕಾರಣದಿಂದ ಬಾಕಿಯಿದ್ದ ಸುಮಾರು 10 ಸಾವಿರ ಕಡತಗಳು ಸಪ್ತಾಹದಲ್ಲಿ ವಿಲೇವಾರಿಯಾಗಿದೆ. ಕಂದಾಯಕ್ಕೆ ಸಂಬಂಧಿಸಿದ ಕಡತ, ಸರಕಾರಿ ಸೌಲಭ್ಯ ಪಡೆಯುವಲ್ಲಿ ಬೇಕಾಗಿದ್ದ ಕಡತಗಳ ವಿಲೇವಾರಿಯಾಗಲಿದೆ.

ರಾಜ್ಯದಲ್ಲೇ ಮಾದರಿ ಎಂಬಂತೆ ಕಾರ್ಕಳದಲ್ಲಿ ಕಡತ ವಿಲೇವಾರಿ ಸಪ್ತಾಹ ನಡೆದಿದ್ದು, ಇದರಿಂದ ಸಾವಿರಾರು ಮಂದಿಗೆ ಪ್ರಯೋಜನವಾಗಿದೆ. ತಾಂತ್ರಿಕ ದೋಷ, ದಾಖಲೆ ಕೊರತೆ, ಅಧಿಕಾರಿಗಳ ವಿಳಂಬ ಧೋರಣೆ, ದಲ್ಲಾಳಿ ಹಾವಳಿ, ಹಣದ ಬೇಡಿಕೆ ಹೀಗೆ ನಾನಾ ಕಾರಣದಿಂದ ಬಾಕಿಯಾಗಿದ್ದ ಕಡತಗಳಿಗೆ ಇದೀಗ ಮುಕ್ತಿ ದೊರೆತಿದ್ದು, ಫಲಾನುಭವಿಗಳು ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ. ಸಚಿವ ಸುನಿಲ್‌ ಕುಮಾರ್‌ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.





























































































































































































































error: Content is protected !!
Scroll to Top