ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಪುರಸಭೆ ಕಾರ್ಕಳದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ದಿನಾಚರಣೆಯನ್ನು ಜ.೩೧ ರಂದು ಆಚರಿಸಲಾಯಿತು. ನ್ಯಾಯಾಲಯದ ವಠಾರವನ್ನು ಪೌರ ಕಾರ್ಮಿರೊಡಗೂಡಿ ನ್ಯಾಯಾಲಯದ ಸಿಬ್ಬಂದಿಗಳು ಸ್ವಚ್ಛತೆಯನ್ನು ಮಾಡಿದರು.. ಈ ಸಂದರ್ಭದಲ್ಲಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಸಿವಿಲ್ ಮತ್ತು ಎ.ಸಿ.ಜೆ.ಎಮ್ ರೂಪಶ್ರೀ, ಪ್ರಿನ್ಸಿಪಾಲ್ ಮತ್ತು ಜೆ.ಎಂ.ಎಫ್.ಸಿ ಚೇತನಾ ಎಸ್.ಎಫ್, ಪುರಸಭಾ ಮುಖ್ಯಾಧಿಕಾರಿ ರೂಪ ಶೆಟ್ಟಿ, ಆರೋಗ್ಯ ಪರೀವೀಕ್ಷಕಿ ಲೈಲಾ ಥಾಮಸ್, ವಕೀಲರ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಪದ್ಮಪ್ರಸಾದ್ ಜೈನ್, ಸನತ್ ಕುಮಾರ್ ಜೈನ್, ಹೆಚ್. ಶೇಖರ ಮಡಿವಾಳ, ಪಿ.ಎ. ಸಮದ್, ವಿಜೇಂದ್ರ ಕುಮಾರ್, ಶಿರಸ್ತೇದಾರರಾದ ಸೆಬಾಸ್ಟಿಯನ್ ಚಂದ್ರ ಸೋನ್ಸ್, ಶಿವಪ್ಪ ಎ., ಲಿಂಗಪ್ಪ, ಭವಾನಿಶಂಕರ್, ಸರಕಾರಿ ಸಹಾಯಕ ಅಭಿಯೋಜಕಿ ಶೋಭಾ, ಮತ್ತು ಪ್ರಕಾಶ್ ರಾವ್ ಹಾಗೂ ಎಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Recent Comments
ಕಗ್ಗದ ಸಂದೇಶ
on