Thursday, May 19, 2022
spot_img
HomeUncategorizedಮಿತ್ರಪ್ರಭಾ ಅವರ ಸಂಶೋಧನ ಕೃತಿ "ಅಂಬಾತನಯ ಮುದ್ರಾಡಿ ಸಾಹಿತ್ಯ - ಒಂದು ಅಧ್ಯಯನ" ಬಿಡುಗಡೆ

ಮಿತ್ರಪ್ರಭಾ ಅವರ ಸಂಶೋಧನ ಕೃತಿ “ಅಂಬಾತನಯ ಮುದ್ರಾಡಿ ಸಾಹಿತ್ಯ – ಒಂದು ಅಧ್ಯಯನ” ಬಿಡುಗಡೆ

ಕಾರ್ಕಳ : ಕಾರ್ಕಳ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಅವರ ಅಂಬಾತನಯ ಮುದ್ರಾಡಿ ಸಾಹಿತ್ಯ – ಒಂದು ಅಧ್ಯಯನ ಕೃತಿ ಜ. 30ರಂದು ಹೊಟೇಲ್‌ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಹೊಸಸಂಜೆ ಪ್ರಕಾಶನ ಹೊರತಂದ ಈ ಕೃತಿಯನ್ನು ನಿವೃತ್ತ ಪ್ರಾಂಶುಪಾಲ ಡಾ. ಪಾದೇಕಲ್ಲು ವಿಷ್ಣು ಭಟ್‌ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಕವಿ, ಸಾಹಿತಿ, ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತ, ಲೇಖಕ, ವಾಗ್ಮಿ ಅಂಬಾತನಯರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾದುದು. ತಮ್ಮ ಪರಿಸರದಲ್ಲಿ ಸಾಹಿತ್ಯ ವಾತಾವರಣ ಜೀವಂತವಾಗಿರಿಸಿ ಎಳೆಯ ಮಕ್ಕಳಲ್ಲಿ ಸಾಹಿತ್ಯ ಪ್ರೀತಿಯನ್ನು ಹುಟ್ಟಿಸಿ ಕನ್ನಡದ ಪ್ರೀತಿಯನ್ನು ಹಳ್ಳಿಗಳಲ್ಲಿ ಬೆಳೆಸಿರುವ ಅಂಬಾತನಯರ ಸಾಹಿತ್ಯ ಕುರಿತು ಮಿತ್ರಪ್ರಭಾ ಹೆಗ್ಡೆ ಅವರು ಸಂಶೋಧನ ಪ್ರಬಂಧ ಬರೆದಿರುವುದು ಅಭಿನಂದನೀಯವೆಂದರು.

ರಾಷ್ಟ್ರ ಪರಿಕಲ್ಪನೆಯಲ್ಲಿ ಸಾಹಿತ್ಯವೂ ಅಡಗಿದೆ – ರಮೇಶ್‌ ಕಾರ್ಣಿಕ್‌

ರಾಷ್ಟ್ರವೆಂದರೆ ಕೇವಲ ಭೂಮಿಯಲ್ಲ. ಅಲ್ಲಿನ ಕಲೆ, ಸಂಸ್ಕೃತಿ, ಸಾಹಿತ್ಯವೂ ಅದರಲ್ಲಿ ಅಡಗಿದೆ ಎಂದು ನಿವೃತ್ತ ಏರ್‌ವೈಸ್‌ ಮಾರ್ಷಲ್‌ ರಮೇಶ್‌ ಕಾರ್ಣಿಕ್‌ ಅಭಿಪ್ರಾಯಪಟ್ಟರು.

ಸಂತಸ ತಂದಿದೆ -ಮಿತ್ರಪ್ರಭಾ
ಲೇಖಕಿ ಮಿತ್ರಪ್ರಭಾ ಹೆಗ್ಡೆ ಮಾತನಾಡಿ, 2009ರಲ್ಲಿ ಎಂಫಿಲ್‌ ಗಾಗಿ ಗುರುಗಳಾದ ಡಾ. ಪಾದೇಕಲ್ಲು ವಿಷ್ಣು ಭಟ್‌ ಅವರ ಮಾರ್ಗದರ್ಶನದಲ್ಲಿ ಅಂಬಾತನಯ ಸಾಹಿತ್ಯ ಕುರಿತು ಪ್ರಬಂಧ ಮಂಡಿಸಿದ್ದೆ. ಇದೀಗ ಹೊಸಸಂಜೆ ಪ್ರಕಾಶನದ ಮೂಲಕ ಕೃತಿ ಪ್ರಕಟಗೊಂಡಿರುವುದು ಅತ್ಯಂತ ಸಂತಸ ತಂದಿದ್ದು, ಈ ಮೂಲಕ ಸಾಹಿತ್ಯವನ್ನೇ ತಪಸ್ಸಿನಂತೆ ಸ್ವೀಕರಿಸಿದ ಅಂಬಾತನಯರಿಗೆ ಗೌರವ ಸಲ್ಲಿಸುವ ಕಾರ್ಯವಾಗಿದೆ ಎಂದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪತ್ರಕರ್ತ ಕೆ. ಶ್ರೀಕರ ಭಟ್‌, ಮುನಿಯಾಲು ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ನ ಪ್ರಾಂಶುಪಾಲೆ ಬೇಬಿ ಶೆಟ್ಟಿ, ಸ್ವರ ಸರಸ್ವತಿ ಪ್ರತಿಷ್ಠಾನದ ಸಂಸ್ಥಾಪಕ ಸುಬ್ರಹ್ಮಣ್ಯ ಬಾಸ್ರಿ, ಕಾರ್ಯಕ್ರಮದ ಆಯೋಜಕ ಹೊಸಸಂಜೆ ಪ್ರಕಾಶನದ ಆರ್. ದೇವರಾಯ ಪ್ರಭು, ಜನಬಿಂಬ ಪತ್ರಿಕೆಯ ಗೌರವ ಸಂಪಾದಕ ಕೆ. ಪದ್ಮಾಕರ ಭಟ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಮಾಲತಿ ಜಿ. ಪೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಜಯನಾರಾಯಣ ಮರಾಠೆ ವಂದಿಸಿದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!