ರಾಷ್ಟ್ರೀಯ ಯೋಗ ಸ್ಪರ್ಧೆ : ಕಾರ್ಕಳದ ಆರು ಜನರಿಗೆ ಬಹುಮಾನ

ಕಾರ್ಕಳ : ಆನ್‌ಲೈನ್‌ನಲ್ಲಿ ನಡೆದ ರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯ 11 ರಿಂದ 15 ವಯೋಮಿತಿಯೊಳಗಿನ ವಿಭಾಗದಲ್ಲಿ ರವಿಶಂಕರ್‌ ವಿದ್ಯಾಮಂದಿರದ ವಿದ್ಯಾರ್ಥಿನಿಯರಾದ ಅನ್ವಿ ಎಚ್. ಅಂಚನ್ ಹಾಗೂ ಆಯುಷ್ಯ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಅನ್ವಿ ಗುಂಡ್ಯಡ್ಕ ಹರೀಶ್‌ ಅಂಚನ್‌ ಹಾಗೂ ಶೋಭಾ ದಂಪತಿ ಪುತ್ರಿ. ಆಯುಷ್ಯಾ ಬೈಲೂರು ಗಿರೀಶ್‌ ಕುಮಾರ್‌ ಹಾಗೂ ವೀಣಾ ದಂಪತಿ ಪುತ್ರಿ. ಸ್ವಪ್ನಾ ಹೆರ್ಮುಂಡೆ, ಶಿಲ್ಪಾ, ಮಮತಾ ಮತ್ತು ಗಾಯತ್ರಿ ಜಿ. ವಿವಿಧ ವಯೋಮಿತಿ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಂಡಮಾನ್ ನಿಕೋಬಾರ್‌ ದ್ವೀಪದ ಆರ್. ಜಿ.ಟಿ. ವಿದ್ಯಾಶಾಲೆಯಲ್ಲಿ ಜರಗಬೇಕಾಗಿದ್ದ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯು ಕೊರೊನಾ ಕಾರಣದಿಂದಾಗಿ ಆನ್‌ಲೈನ್‌ ಮುಖಾಂತರ ಜರಗಿತು. ಇವರು ನರೇಂದ್ರ ಕಾಮತ್‌ ಅವರಿಂದ ತರಬೇತಿ ಪಡೆದಿರುತ್ತಾರೆ.





























































































































































































































error: Content is protected !!
Scroll to Top