ಕುಸಿಯುವ ಭೀತಿಯಲ್ಲಿ ಮುಡಾರಿನ ಆಲ್ದಟ್ಟ ಸೇತುವೆ

1950ರಲ್ಲಿ ನಿರ್ಮಾಣವಾದ ಸೇತುವೆ

ಕಾರ್ಕಳ : ಬಜಗೋಳಿಯಿಂದ ಮುಡಾರು ಹಾಗೂ ಕೆರ್ವಾಶೆಗೆ ಸಂಪರ್ಕಿಸುವ ಮುಡಾರು ಪಂಚಾಯತ್‌ ವ್ಯಾಪ್ತಿಯ ಆಲ್ದಟ್ಟ ಸೇತುವೆ ಶಿಥಿಲಗೊಂಡಿದ್ದು ಕುಸಿಯುವ ಭೀತಿ ಎದುರಾಗಿದೆ. ಹೀಗಾಗಿ ವಾಹನ ಚಾಲಕರು, ದ್ವಿಚಕ್ರ ಸವಾರರು ನಿತ್ಯ ಆತಂಕದಿಂದಲೇ ಸೇತುವೆ ಸಂಚರಿಸುವಂತಾಗಿದೆ. ಮುಡಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಬರುವ ಈ ಸೇತುವೆ 1950ರಲ್ಲಿ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.

ಕಿರಿದಾದ ಈ ಸೇತುವೆಯ ಪಿಲ್ಲರ್‌ ಬಿರುಕು ಬಿಟ್ಟಿದೆ. ತಿರುವಿನಲ್ಲಿ ಹೊಂಡ ಕಂಡುಬರುತ್ತಿದೆ. ತಡೆಬೇಲಿ ಅಪಾಯಕಾರಿ ಸ್ಥಿತಿಯಲ್ಲಿದೆ. ದಿನಂಪ್ರತಿ 500ಕ್ಕಿಂತಲೂ ಅಧಿಕ ವಾಹನಗಳು ಸಂಚರಿಸುತ್ತಿದೆ. ಬಜಗೋಳಿಯಿಂದ ದಿಡಿಂಬಿರಿ ಮುಡಾರು ಹಾಗೂ ಹಡ್ಯಾಲು ಮಾರ್ಗವಾಗಿ ಮಿಯ್ಯಾರು ಹಾಗೂ ಕೆರ್ವಾಶೆಯನ್ನು ಸಂಪರ್ಕಿಸುವ ಮುಖ್ಯ ರಸ್ತೆ ಇದಾಗಿದ್ದು ಆಗುಂಬೆಯತ್ತ ತೆರಳುವವರೂ ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ.

1950ರ ಸಂದರ್ಭ ನಿರ್ಮಾಣವಾದ ಸೇತುವೆಯಿದು. ರಸ್ತೆ ನೀರು ನದಿಗೆ ಹರಿಯುತ್ತಿದ್ದು ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಸೇತುವೆ ದುರಸ್ತಿಪಡಿಸುವಂತೆ ತಾಲೂಕು ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ಸಾಕಷ್ಟು ಬಾರಿ ಪ್ರಸ್ತಾವಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ.
ಸುಧಾಕರ್‌ ಶೆಟ್ಟಿ
ನಿಕಟಪೂರ್ವ ಸದಸ್ಯರು, ತಾಲೂಕು ಪಂಚಾಯತ್‌ ಕಾರ್ಕಳ





























































































































































































































error: Content is protected !!
Scroll to Top