Tuesday, December 7, 2021
spot_img
Homeಸ್ಥಳೀಯ ಸುದ್ದಿನಿಟ್ಟೆ ಹಾಗೂ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿ ಒಪ್ಪಂದ

ನಿಟ್ಟೆ ಹಾಗೂ ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿ ಒಪ್ಪಂದ

ನಿಟ್ಟೆ : ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಮೂಡಬಿದ್ರೆಯ ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ನಡುವಿನ ಶೈಕ್ಷಣಿಕ ತರಬೇತಿ ಒಪ್ಪಂದ ಹಸ್ತಾಂತರ ಕಾರ್ಯಕ್ರಮವು ಇತ್ತೀಚೆಗೆ ಕಾಲೇಜಿನಲ್ಲಿ ನಡೆಯಿತು. ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿನ ತಾಂತ್ರಿಕ ವಿಭಾಗದ ನಿರ್ದೇಶಕ ಪ್ರಜ್ವಲ್ ಆಚಾರ್ ಅವರು ಸಂಸ್ಥೆಯ ಕಾರ್ಯವೈಖರಿ ಹಾಗೂ ದೇಶ ವಿದೇಶಗಳಲ್ಲಿ ಅವರಿಗೆ ದೊರೆತಿರುವ ಗ್ರಾಹಕ ಸಮೂಹದ ಬಗೆಗೆ ವಿವರಿಸಿದರು. ‘ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರಾಯೋಗಿಕ ಜ್ಞಾನವನ್ನು ಹೆಚ್ಚಿಸುವ ಕೆಲಸ ನಡೆಯಬೇಕಿದೆ’ ಎಂದು ಅವರು ಹೇಳಿದರು.

ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ‘ನಮ್ಮ ಸಂಸ್ಥೆಯು ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಪ್ರೈ.ಲಿ ನೊಂದಿಗೆ ಮಾಡಿಕೊಳ್ಳಲಾಗುತ್ತಿರುವ ಒಪ್ಪಂದದ ಪೂರ್ಣ ಲಾಭವನ್ನು ಎಲ್ಲಾ ವಿಭಾಗಗಳೂ ಪಡೆದುಕೊಳ್ಳಬೇಕು’ ಎಂದರು. ಎಸ್.ಕೆ.ಎಫ್. ಎಲಿಕ್ಸರ್ ಇಂಡಿಯಾ ಪ್ರೈ.ಲಿನ ವೈಸ್ ಪ್ರೆಸಿಡೆಂಟ್ ಲಕ್ಷ್ಮೀಶ್ ರೈ, ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಶಶಿಕಾಂತ್ ಕರಿಂಕ, ಸಹಪ್ರಾಧ್ಯಾಪಕ ಡಾ. ಸಂತೋಶ್, ಕಾಲೇಜಿನ ಪಿ.ಆರ್.ಒ ಕೃಷ್ಣರಾಜ ಜೋಯಿಸ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!