ಬೆಳ್ತಂಗಡಿ, ನ.3 : ಕೃಷಿಕ ದಂಪತಿ ಮಗುವಿನೊಂದಿಗೆ ಆತ್ಮಹತ್ಯೆಗೈಯ್ಯಲು ಯತ್ನಸಿದ ಪ್ರಕರಣದಲ್ಲಿ ತಂದೆ ಮತ್ತು ಮಗು ಸಾವನ್ನಪ್ಪಿ ಹೆಂಡತಿ ಚಿಂತಾಜನಕ ಸ್ಥಿತಿಯಲ್ಲಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯ ಅತ್ರಿಜಾಲು ಸಮೀಪದ ಹೆಡ್ಲಬೆಟ್ಟು ಎಂಬಲ್ಲಿ ನ.2ರಂದು ತಡರಾತ್ರಿ ಸಂಭವಿಸಿದೆ.
ಚೇತನ್ ಕುಮಾರ್ ಶೆಟ್ಟಿಗಾರ್ (37) , ಅವರ ಪತ್ನಿ ಆಶಾ (30) ಮತ್ತು 5 ವರ್ಷದ ಮಗು ಕಿಶಾ ಆತ್ಮಹತ್ಯೆಗೆ ಯತ್ನಿಸಿದವರು. ಮೂವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮೊದಲು ಕಾರ್ಕಳದ ಆಸ್ಪತ್ರಗೆ ಒಯ್ದು ಬಳಿಕ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೇತನ್ ಕುಮಾರ್ ಮತ್ತು ಕಿಶಾ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಆಶಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.
ಚೇತನ್ ಕುಮಾರ್ ಪ್ರಗತಿಪರ ಕೃಷಿಕರಾಗಿದ್ದರು ಹಾಗೂ ಆರ್ಥಿಕವಾಗಿಯೂ ಸ್ಥಿತಿವಂತರಾಗಿದ್ದರು. ಕೌಟುಂಬಿಕ ವಿಚಾರವೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವೇಣೂರಿನಲ್ಲೊಂದು ದಾರುಣ ಘಟನೆ : ಮಗುವಿನೊಂದಿಗೆ ತಂದೆ ಆತ್ಮಹತ್ಯೆ
ಪತ್ನಿ ಜೀವನ್ಮರಣ ಹೋರಾಟ
Recent Comments
ಕಗ್ಗದ ಸಂದೇಶ
on