ರಾಗಿಣಿ , ಸಂಜನಾಗೆ ಹೈಕೋರ್ಟ್‌ನಲ್ಲೂ ಜಾಮೀನು ಸಿಗಲಿಲ್ಲ

ಬೆಂಗಳೂರು,ನ.3 : ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣ ಸಂಬಂಧ ಜೈಲು ಪಾಲಾಗಿರುವ ಕನ್ನಡ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರಿಗೆ ಹೈಕೋರ್ಟ್ ನಲ್ಲೂ ಜಾಮೀನು ಸಿಕ್ಕಿಲ್ಲ. ಹೀಗಾಗಿ ಇನ್ನಷ್ಟು ದಿನ ಈ ನಟಿಯರು ಜೈಲಿನಲ್ಲಿ ಕಳೆಯಬೇಕಾಗಿದೆ. ಹೈಕೋರ್ಟಿನ ವಿಭಾಗೀಯ ಪೀಠ ಮಂಗಳವಾರ ಅವರ ಜಾಮೀನಿ ಅರ್ಜಿಯನ್ನು ತಿರಸ್ಕರಿಸಿದೆ.
ರಾಗಿಣಿ, ಸಂಜನಾ ಹಾಗೂ ಇತರ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅ. 24 ರಂದು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರ ಪೀಠ ತೀರ್ಪು ನ.3 ಕ್ಕೆ ಕಾಯ್ದಿರಿಸಿತ್ತು.
ಇಂದು ಈ ತೀರ್ಪು ಪ್ರಕಟವಾಗಿದ್ದು, ಎಲ್ಲಾ ಆರು ಆರೋಪಿಗಳಿಗೆ ಜಾಮೀನು ನಿರಾಕರಿಸಿದ್ದಾರೆ. ಇದರಿಂದ ಜಾಮೀನು ನಿರೀಕ್ಷೆಯಲ್ಲಿದ್ದ ನಟಿಯವರಿಗೆ ತೀವ್ರ ನಿರಾಶೆಯಾಗಿದೆ.ಕಳೆದ ಎರಡು ತಿಂಗಳಿಂದ ಜೈಲಿನಲ್ಲಿರುವ ನಟಿಯರು ಈಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ.









































































































































































error: Content is protected !!
Scroll to Top