ಉಡುಪಿ, ಆ.23:ಇಲ್ಲಿನ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಸಾವನ್ನಪ್ಪಿರುವ ಮಹಿಳೆಯ ಕೊರೊನಾ ವರದಿ ತಪ್ಪಾಗಿದೆ ಎಂಬ ಆರೋಪವನ್ನು ಜಿಲ್ಲಾಸ್ಪತ್ರೆ ಅಲ್ಲಗಳೆದಿದೆ.
26 ವರ್ಷದ ಮಹಿಳೆ ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದು, ಆಸ್ಪತ್ರೆಯವರು ಮಹಿಳೆಗೆ ಕೊರೊನಾ ಪೊಸಿಟಿವ್ ಆಗಿದೆ ಎಂದು ವರದಿ ನೀಡಿ ಸತ್ಯವನ್ನು ಮರೆಮಾಚುವ ಪ್ರಯತ್ನ ಮಾಡಿದ್ದಾರೆ ಎಂದು ಮಹಿಳೆಯ ಮನೆಯವರು ಪೊಲೀಸ್ ದೂರು ದಾಖಲಿಸಿದ್ದಾರೆ.
ಮಹಿಳೆ ಕೊರೊನಾ ಪರೀಕ್ಷಾ ಮಾದರಿಯನ್ನು ಆ.21ರಂದು ಸಂಗ್ರಹಿಸಲಾಗಿತ್ತು. Rtpcr ಅರ್ಜಿಯಲ್ಲಿ ಇದನ್ನು ಸರಿಯಾಗಿ ನಮೂದಿಸಲಾಗಿದೆ. ಅದರೆ icmr ಪೋರ್ಟಲ್ ನಲ್ಲಿ ಮಾದರಿ ಸಂಗ್ರಹಿಸಿದ ದಿನಾಂಕ ಆ.20 ಎಂದು ತಪ್ಪಾಗಿ ನಮೂದಿಸಲಾಗಿದೆ. ಹೀಗಾಗಿ ವರದಿಯಲ್ಲಿ ತಪ್ಪು ದಿನಾಂಕ ನಮೂದಾಗಿದೆ. Icmr ತಾಂತ್ರಿಕ ದೋಷದಿಂದ ಹೀಗಾಗಿದೆ ಎಂದು ಜಿಲ್ಲಾಸ್ಪತ್ರೆ ಸ್ಪಷ್ಟಪಡಿಸಿದೆ.







































































