ಎಸ್‌ಕೆಡಿಆರ್‌ಡಿಪಿ ವತಿಯಿಂದ ಪೌಷ್ಠಿಕ ಆಹಾರ ಮೇಳ

0

ಕಾರ್ಕಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೈಲೂರು ವಲಯದ ವತಿಯಿಂದ ಮಹಿಳಾ ಜ್ಞಾ ವಿಕಾಸ ಕೇಂದ್ರದ ಸದಸ್ಯರಿಗೆ ಪೌಷ್ಟಿಕ ಆಹಾರ ಮೇಳ ನೀರೆಯಲ್ಲಿ ಇತ್ತೀಚೆಗೆ ನಡೆಯಿತು. ತಾಲೂಕು ಯೋಜನಾಧಿಕಾರಿ ವಿ. ಭಾಸ್ಕರ್‌ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷ ಸಂದೀಪ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪೂರ್ಣಿಮಾ ಸುರೇಶ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಪೌಷ್ಠಿ ಆಹಾರ ಸೇವನೆ ಮತ್ತು ದಿನನಿತ್ಯದ ಆಹಾರದಲ್ಲಿ ನಾರಿನ ಅಂಶ ಬಳಕೆ ಈ ಕುರಿತು ಮಾಹಿತಿ ನೀಡಿದರು. ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಮಲ್ಲಿಕಾ, ಮೇಲ್ವಿಚಾರಕ ಹರೀಶ್, ನಿಕಟ ಪೂರ್ವ ಅಧ್ಯಕ್ಷ ರತ್ನಾಕರ ಆಚಾರ್ಯ, ಸೇವಾ ಪ್ರತಿನಿಧಿ ವಿಜಯಾ, ಸಂಯೋಜಕಿ ಸವಿತಾ, ಜ್ಞಾನವಿಕಾಸ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.

 

Previous articleಪ್ರಾಮಾಣಿಕ ತೆರಿಗೆದಾರರಿಂದ ದೇಶದ ಅಭಿವೃದ್ಧಿ : ಮೋದಿ
Next articleಸತತ 4ನೇ ದಿನ ಚಿನ್ನದ ಬೆಲೆ ಇಳಿಕೆ:7 ವರ್ಷಗಳ ದಾಖಲೆ  ಕುಸಿತ

LEAVE A REPLY

Please enter your comment!
Please enter your name here