
ದಿಲ್ಲಿ,ಆ.13: ಕೊರೊನಾ ಸಂಕಷ್ಟ ಕಾಲದಲ್ಲೂ ದಿಢೀರ್ ಎಂದು ಬೆಲೆ ಏರಿಸಿಕೊಂಡು ಆಕಾಶದಲ್ಲಿ ವಿಹರಿಸುತ್ತಿದ್ದ ಚಿನ್ನ ಈಗ ಭೂಮಿಯತ್ತ ಮುಖ ಮಾಡಿದೆ. ಚಿನ್ನದ ಬೆಲೆ ಸತತ ನಾಲ್ಕನೇ ದಿನ ಕುಸಿತ ಕಂಡಿದ್ದು, ಕಳೆದ ಏಳು ವರ್ಷದಲ್ಲೇ ಭಾರಿ ಕುಸಿತವನ್ನು ದಾಖಲಿಸಿದೆ. ಗುರುವಾರ ಜಾಗತಿಕ ಮಾರುಕಟ್ಟೆಗಳಲ್ಲಿನ ಚೇತರಿಕೆಯ ಮಧ್ಯೆ ಭಾರತೀಯ ಸರಕು ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ದಾಖಲಿಸಿದರೂ, ಮತ್ತೆ ಇಳಿಕೆ ಕಂಡಿದೆ. ಇದು ಕಳೆದ ಮೂರು ದಿನಗಳಲ್ಲಿ ಕಂಡಂತಹ ಎರಡನೇ ಕುಸಿತವಾಗಿದೆ. ಸೋಮವಾರ ಮೊದಲ ಬಾರಿಗೆ ಕೊಂಚ ಇಳಿಕೆ ಕಂಡಿತ್ತು.