ಪ್ರಾಮಾಣಿಕ ತೆರಿಗೆದಾರರಿಂದ ದೇಶದ ಅಭಿವೃದ್ಧಿ : ಮೋದಿ

ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ ವೇದಿಕೆ ಉದ್ಘಾಟನೆ

ದಿಲ್ಲಿ, ಆ. 13: ಪ್ರಾಮಾಣಿಕ ತೆರಿಗೆದಾರರನ್ನು ಉತ್ತೇಜಿಸುವ ಹಾಗೂ ಇದೇ ವೇಳೆ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪಾರದರ್ಶಕಗೊಳಿಸುವ ‘ಪಾರದರ್ಶಕ ತೆರಿಗೆ- ಪ್ರಾಮಾಣಿಕರಿಗೆ ಗೌರವ’ ವೇದಿಕೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು  ಕಳೆದ ಕೆಲ ವರ್ಷಗಳಿಂದೀಚೆಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯಾಗಿವೆ. ದೇಶದ ಅಭಿವೃದ್ಧಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಈ ವೇದಿಕೆಯನ್ನು ಪ್ರಾಮಾಣಿಕ ತೆರಿಗೆದಾರರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ. ಪ್ರಾಮಾಣಿಕವಾಗಿ ದೇಶಕ್ಕೆ ತೆರಿಗೆ ನೀಡುವುದು ಪ್ರತಿಯೊಬ್ಬ ತೆರಿಗೆ ಪಾವತಿದಾರನ ಕರ್ತವ್ಯ. ಪ್ರಸ್ತುತ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಲಾಗಿದ್ದು, ದೇಶದ ಅಭಿವೃದ್ಧಿಯ ಹೊಸ ಅಧ್ಯಾಯ ತೆರೆದುಕೊಂಡಿದೆ ಎಂದು ತಿಳಿಸಿದ್ದಾರೆ.

ಈಗ ತೆರಿಗೆ ಪಾವತಿಯು ಸರಳ, ಸುಲಭವಾಗಿದ್ದು ಮತ್ತಷ್ಟು ಜನಸ್ನೇಹಿಯಾಗಿದೆ. ಈ ವೇದಿಕೆ ಗರಿಷ್ಠ ಅಭಿವೃದ್ಧಿಯ ಕನಸಿನ ಜೊತೆಗೆ ಆರಂಭವಾಗಿದ್ದು, ಪ್ರತಿಯೊಂದು ನೀತಿ ನಿಯಮಗಳನ್ನು ನಾಗರಿಕ ಸ್ನೇಹಿ, ಸಾರ್ವಜನಿಕ ಸ್ನೇಹಿಯಾಗಿಸುವಲ್ಲಿಯೂ ಸಹಕರಿಸಲಿದೆ ಎಂದು ತಿಳಿಸಿದ್ದಾರೆ.

ಮನುಷ್ಯರ ಮಧ್ಯೆ ಪ್ರವೇಶವಿಲ್ಲದೆ, ಸಂಪರ್ಕವಿಲ್ಲದೆ ಪಾರದರ್ಶಕವಾಗಿ ಸಂಪೂರ್ಣವಾಗಿ ಆನ್ ಲೈನ್ ನಲ್ಲಿ ಮೌಲ್ಯಮಾಪನ, ಮುಖತಃ ಹೋಗದೆ ಆನ್ ಲೈನ್ ಮೂಲಕ ಕುಂದುಕೊರತೆ ನಿವಾರಿಸುವ ಮತ್ತು ತೆರಿಗೆದಾರರ ಚಾರ್ಟರ್ ಈ ವೇದಿಕೆ ಪ್ರಮುಖ ಸುಧಾರಣೆಯಾಗಲಿದ್ದು ಫೇಸ್ ಲೆಸ್ ಅಸ್ಸೆಸ್ಸ್ ಮೆಂಟ್ ಮತ್ತು ತೆರಿಗೆ ಪಾವತಿದಾರರ ಸಮೂಹ ಇಂದಿನಿಂದ ಜಾರಿಗೆ ಬರುತ್ತದೆ. ಫೇಸ್ ಲೆಸ್ ಅಪೀಲ್ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ ಎಂದು ತಿಳಿಸಿದರು.

ತೆರಿಗೆ ಪಾವತಿಸಲು ಸಮರ್ಥರಾದ ಆದರೆ ತೆರಿಗೆ ವ್ಯಾಪ್ತಿಯಲ್ಲಿಲ್ಲದವರು ಮುಂದೆ ಬಂದು ತೆರಿಗೆ ಪಾವತಿ ಮಾಡಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಈ ವೇದಿಕೆಯ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ್, ಇದು ತೆರಿಗೆದಾರರಿಗೆ ಸುಧಾರಣೆಗಳನ್ನು ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ. ಜೊತೆಗೆ ತೆರಿಗೆ ಪಾವತಿಯಲ್ಲಿ ಪಾರದರ್ಶಕತೆಯನ್ನು ಪರಿಚಯಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದ್ದಾರೆ.







































































error: Content is protected !!
Scroll to Top