Wednesday, August 17, 2022
spot_img
Homeವಾರ ಭವಿಷ್ಯನಿತ್ಯ ಭವಿಷ್ಯ-10-08-2020

ನಿತ್ಯ ಭವಿಷ್ಯ-10-08-2020

ಮೇಷ : ಆರ್ಥಿಕವಾಗಿ ನಿಮ್ಮ ಜವಾಬ್ದಾರಿಯನ್ನು ನೀವು ಎಚ್ಚರದಿಂದ ನಿರ್ವಹಿಸಿದಲ್ಲಿ ಸಮಸ್ಯೆಯಾಗದು. ವಿದ್ಯಾರ್ಥಿಗಳಲ್ಲಿ ಸುಧಾರಣೆ ಕಂಡು ಬರಲಿದೆ. ಹಿರಿಯರೊಂದಿಗೆ ಹೊಂದಿಕೊಂಡು ಮುಂದುವರಿಯಿರಿ.

ವೃಷಭ : ದೇವರ ನಿತ್ಯ ಪ್ರಾರ್ಥನೆಯಿಂದ ನಿಮ್ಮ ಪ್ರತಿಯೊಂದು ವ್ಯವಹಾರಗಳು ಯಶಸ್ವಿಯಾಗಲಿದೆ. ಮಂಗಳ ಕಾರ್ಯಗಳು ಸುಸೂತ್ರವಾಗಿ ನೆರವೇರುವಂತೆ ನೋಡಿಕೊಳ್ಳಿ. ಸಹೋದರಿಯೊಬ್ಬರು ಆರ್ಥಿಕ ಸಹಾಯ ಮಾಡಲಿದ್ದಾರೆ .

ಮಿಥುನ : ದೇವಿ ಪಾರಾಯಣವೊಂದೇ ನಿಮ್ಮ ಸಾಂಸಾರಿಕ ಗೊಂದಲಗಳಿಗೆ ಪರಿಹಾರವಾಗಲಿದೆ. ಕೆಲವೊಂದು ಗೊಂದಲಗಳು ನಿಮ್ಮ ಮನದಲ್ಲಿ ಮೂಡಲಿದೆ.

ಕರ್ಕಾಟಕ: ನೀವು ಮನಸ್ಸಿನಲ್ಲಿ ಯೋಚಿಸುತ್ತಿರುವ ಶುಭ ಕಾರ್ಯವು ನಿಧಾನಗತಿಯಲ್ಲಿ ನೆರವೇರಲಿದೆ. ಸರಕಾರಿ ನೌಕರರು ತಮ್ಮ ಭವಿಷ್ಯದ ಬಗ್ಗೆ ವ್ಯಥೆ ಪಡಲು ಸಾಧ್ಯತೆಯಿದ್ದು, ವಿದ್ಯಾರ್ಥಿಗಳಿಗೆ ಶುಭಸುದ್ದಿ.

ಸಿಂಹ : ನೌಕರರಿಗೆ ಸಮಸ್ಯೆಗಳ ಸೇರ್ಪಡೆಯಿಂದ ತೀವ್ರ ಒತ್ತಡ ವಾಗಲಿದೆ. ನಿಮ್ಮ ಹಿತ-ಶತ್ರುಗಳಿಂದ ಏನಾದರೊಂದು ಸಮಸ್ಯೆಯಾಗುವ ಸಂಭವವಿದೆ. ಪತಿ-ಪತ್ನಿಯರಲ್ಲಿ ಸರಸ-ವಿರಸ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ ಯೋಗವಿದೆ .

ಕನ್ಯಾ :ನೀವು ಮಾಡುತ್ತಿರುವ ಕೆಲಸ ಕಾರ್ಯಗಳಲ್ಲಿ ತಪ್ಪುಗಳಾಗುವ ಸಾಧ್ಯತೆಯಿದೆ. ಮನಸ್ಸಿಗೆ ನೆಮ್ಮದಿ ಕಡಿಮೆ. ಮಕ್ಕಳಿಂದ ಅಸಹಕಾರ ಬಂಧುಗಳಲ್ಲಿ ಮನಸ್ತಾಪವಾಗದಂತೆ ನೋಡಿಕೊಳ್ಳಿ.

ತುಲಾ : ಶನಿ ಸುಖ ಸ್ಥಾನದಲ್ಲಿ ಬಂದಿರುವುದರಿಂದ ಯಂತ್ರಗಳಲ್ಲಿ ಕೆಲಸ ಮಾಡುವವರು ಎಚ್ಚರವಿರಬೇಕು. ಪ್ರಯಾಣ ಮಾಡುವವರು ಎಚ್ಚರವಿರಬೇಕು.

ವೃಶ್ಚಿಕ :ಉತ್ತಮವಾದ ದೈವಾನುಗ್ರಹವಿದ್ದು, ಆದಾಯವೂ ಉತ್ತಮ ವಿರುವುದು. ಕುಟುಂಬದ ಸದಸ್ಯ ವರ್ಗದವರಲ್ಲಿ ಅಸಮಾಧಾನ ಬಂದು  ಆತ್ಮಬಲ ಕುಗ್ಗಲಿದೆ.

ಧನು : ಸಾಡೇಸಾತ್ ಶನಿಯ ಕಾಟದಿಂದಾಗಿ ನೀವು ಮಾಡುವ ಯಾವುದೇ ಕೆಲಸಕಾರ್ಯಗಳಲ್ಲಿ ಮಂದಗತಿ , ವ್ಯವಹಾರಗಳಲ್ಲಿ ನಷ್ಟ, ಕೆಲವೊಂದು ಅಹಿತಕರ ಘಟನೆಗಳಿಂದ ತಾಳ್ಮೆ ಕೆಡಲಿದೆ. ಸಾಲ ಮಾಡುವ ಯೋಚನೆ  ಮಾಡಲಿದ್ದೀರಿ.

ಮಕರ : ಕೆಲಸ ಕಾರ್ಯಗಳು ಹಿನ್ನಡೆಯಾದರೂ ಅಂತಿಮವಾಗಿ ಫಲಪ್ರದವಾಗುವುದು. ದೀರ್ಘಕಾಲದ ಯೋಜನೆಗಳು ಕೈಗೂಡಲಿವೆ. ಮಾನಸಿಕ ಬಲ ಹೆಚ್ಚಲಿದೆ. ವ್ಯಾಪಾರ ಕ್ರಯ-ವಿಕ್ರಯದಲ್ಲಿ ಮಿಶ್ರ ಫಲ ದೊರೆಯಲಿದೆ.

ಕುಂಭ :ಲಾಭ ಕ್ಷೇತ್ರದಲ್ಲಿ ಗುರುಕೇತು ಇರುವುದರಿಂದ ಅತ್ಯಧಿಕ ಲಾಭವನ್ನು ಪಡೆಯುತ್ತಿರುವ ಸಮಯವಿದು.  ಆದರೆ, ವ್ಯಯದ ಶನಿ-ಶತ್ರುಗಳೂ ತೀವ್ರ ಒತ್ತಡ ಉಂಟು ಮಾಡುವಂತೆ ಮಾಡಲಿದ್ದಾನೆ. ಶಿವ ಸ್ಮರಣೆ ಪರಿಹಾರವಾಗಲಿದೆ.

ಮೀನ: ಕರ್ಮ ಕ್ಷೇತ್ರದ ಗುರುಕೇತು ಉದ್ಯೋಗ ಕ್ಷೇತ್ರದಲ್ಲಿ ಅಶಾಂತಿ, ಉದ್ಯೋಗ ಬಿಡುವ ಮನಸ್ಸು ಅಪವಾದ ಗಳನ್ನು ತರುವ ಸಾಧ್ಯತೆ ಇಲ್ಲದಿಲ್ಲ. ಆದಾಯಕ್ಕೆ ಮೀರಿದ ಖರ್ಚು ಬರಲಿದೆ. ಪಿತ್ರಾರ್ಜಿತ ಆಸ್ತಿ ಬಗ್ಗೆ ತಕರಾರು ಬರುವ ಸಾಧ್ಯತೆ ಕಂಡುಬರುತ್ತಿದೆ.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
97414 89529

 

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!