ಉಡುಪಿ, ಆ. 10 :ಸಾಸ್ತಾನದಲ್ಲಿ ಇಂದು ಬೆಳಗ್ಗೆ ಬೇಕರಿಯಲ್ಲಿ ಉಪಯೋಗಿಸುವ ಓವನ್ ಸ್ಫೋಟವಾಗಿ ರುಚಿ ಫ್ಯಾಕ್ಟರಿ ಮಾಲಕ ದುರ್ಮರಣವನ್ನಪ್ಪಿದ್ದಾರೆ.
ಕೆಲವು ದಿನ ಬಂದ್ ಮಾಡಲಾಗಿದ್ದ ಮಾಬುಕಳದ ಬೇಕರಿ ಆಹಾರ ತಯಾರಿಸುವ ಘಟಕಕ್ಕೆ ಹೋದ ಮಾಲಕ ರೋಬರ್ಟ್ ಪುರ್ಟಾಡೊ (58), ಮೈಕ್ರೋ ಓವನ್ ನ ಚಾಲನೆ ಮಾಡುವ ಸಂದರ್ಭ ಬೇಕರಿ ಓವೆನ್ ಸ್ಪೋಟಗೊಂಡಿತು. ಸ್ಫೋಟದ ಬಿರುಸಿಗೆ ಫುರ್ಟಾಡೊ ಅವರು ಸ್ಥಳದಲ್ಲೇ ಮೃತಪಟ್ಟರು.