ನಿತ್ಯ ಭವಿಷ್ಯ-07-08-2020

ಮೇಷ : ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿಯಾಗಿ ಆದಾಯದ  ಮೂಲ  ಹೆಚ್ಚಾಗಲಿದೆ. ಮನಸ್ಸಿಗೆ ನೆಮ್ಮದಿ ಇರಲಿದೆ. ಅತೀ ವಿಶ್ವಾಸ ಅಹಂಕಾರ ಒಳ್ಳೆಯದಲ್ಲ. ಈಶ್ವರ ದೇವರನ್ನು ಪ್ರಾರ್ಥಿಸಿರಿ.

ವೃಷಭ : ಒಂದೇ ಬಾರಿ ಎಲ್ಲ ಜವಾಬ್ದಾರಿ ನಿಮ್ಮ ಮೇಲೆ ಬರಲಿದೆ. ಹೀಗಾಗಿ ಜಾಗ್ರತೆ ವಹಿಸಿರಿ. ಅನಗತ್ಯವಾದ ಚಿಂತೆ ಬಿಟ್ಟು ಮುನ್ನೆಡಿಯಿರಿ. ಆಲಸ್ಯ ಬೇಡ.

ಮಿಥುನ : ಅಸಹನೆ ಹೆಚ್ಚಾಗಲಿದೆ. ದೈಹಿಕ ವಿಪತ್ ಹೆಚ್ಚಾಗಲಿದೆ. ಅಲ್ಪ ಹಣದ ಮುಗ್ಗಟ್ಟು ಕಾಣಬಹುದು. ಬಂಧುಗಳಿಂದ ಬೇಸರದ ಸಂಗತಿ ಕೇಳಿ ಬರಬಹುದು.

ಕರ್ಕಾಟಕ : ಗೃಹ ಕೃತ್ಯಗಳಿಗೆ ಆರ್ಥಿಕ ಅಡಚಣೆ ಮತ್ತು ವೃತ್ತಿಯಲ್ಲಿ ಅಡಚಣೆ ವಾಸ ಸ್ಥಳದಲ್ಲಿ ಬದಲಾವಣೆ ಬರಲಿದೆ. ಆರೋಗ್ಯದ ಕುರಿತು ಗಮನವಿರಲಿ.

ಸಿಂಹ: ದೂರಪ್ರಯಾಣದ ಕುರಿತು ಎಚ್ಚರಿಕೆಯಿರಲಿ. ಆರ್ಥಿಕ ಅಡಚಣೆ ಸಂಭವಿಸುವ ಸಾಧ್ಯತೆಯೂ ಅಧಿಕವಾಗಿದೆ.

ಕನ್ಯಾ : ಉದ್ಯೋಗ ಹಾಗೂ ಗೃಹಕೃತ್ಯಗಳಲ್ಲಿ ಆಡಚಣೆ ಬರಲಿದೆ. ಆರೋಗ್ಯದಲ್ಲಿ ಏರುಪೇರು ಆರ್ಥಿಕ ವ್ಯವಸ್ಥೆಯಲ್ಲಿ ಏರುಪೇರು ಸಂಭವ. ಬುದ್ಧಿಯ ಅಸ್ಥಿರತೆ ಎದುರಾಗಲಿದೆ.

ತುಲಾ : ಉತ್ತಮ ಆರೋಗ್ಯ ಪ್ರಾಪ್ತಿ, ಸರ್ವಕಾರ್ಯ ಸಫಲತೆ, ಸ್ಥಾನ ಮಾನ ಉತ್ಕರ್ಷ, ಧನಾಭಿವೃದ್ಧಿ, ಮೇಲಧಿಕಾರಿಯಿಂದ ಪ್ರಶಂಸೆ, ವಾಹನ ಚಾಲಕರು ಎಚ್ಚರವಹಿಸಿರಿ.

ವೃಶ್ಚಿಕ: ಉಸಿರಾಟದ ತೊಂದರೆ ಸಾ‍ಧ್ಯತೆ. ಅ. 17ರ ತುಲಾ ಸಂಕ್ರಮಣದ ವರೆಗೆ ಕಾರ್ಯಸಿದ್ಧಿ, ಸ್ಥಾನಮಾನ ಉತ್ಕರ್ಶೆ, ಕುಟುಂಬ ವರ್ಗದವರಿಂದ ಸ್ಫೂರ್ತಿ ಆತ್ಮ ಗೌರವ ವೃದ್ಧಿಸುವುದು. ಅನೇಕ ಮೂಲಗಳಿಂದ ಧನಾದಾಯ ಬರಲಿದೆ.

ಧನು : ದಾಂಪತ್ಯ ಜೀವನದಲ್ಲಿ ಏರುಪೇರು ಉಂಟಾಗುವ ಸಾಧ್ಯತೆಯೂ ಇದೆ. ವ್ಯವಹಾರದಲ್ಲಿ ವಿಘ್ನ -ವಿಳಂಬ ಬರಲಿದೆ . ಅಸಹನೆ ನಿಮ್ಮಲ್ಲಿರುವುದು. ಬಂಧು ವಿಯೋಗವನ್ನು ಕಾಣಲಿದ್ದೀರಿ. ಕುಟುಂಬ ದಲ್ಲಿ ಹೊಸ ಜವಾಬ್ದಾರಿ ಬರಲಿದೆ. ಪತ್ನಿ ಕಡೆಯಿಂದ ಧನಾದಾಯ ಬರಲಿದೆ .

ಮಕರ : ಮಿಶ್ರ ಫಲವನ್ನು ಎದುರಿಸುವಿರಿ . ಆಹಾರ ನೀರಿನ ವ್ಯತ್ಯಾಸದಿಂದ ದೇಹಾರೋಗ್ಯದಿಂದ ಏರುಪೇರು ಕಾಣಲಿದ್ದೀರಿ . ದಾಂಪತ್ಯ ಜೀವನದಲ್ಲಿ ವಿರಸ ಮೂಡುವ ಸಂಭವ. ಆರ್ಥಿಕ ಆಡಚಣೆಯಿಂದಾಗಿ  ಆತ್ಮಸ್ಥೈರ್ಯ ಕುಗ್ಗುವುದು. ವಿವಿಧ ಮೂಲಗಳಿಂದ ಧನ ಪ್ರಾಪ್ತಿ ಯಾಗಲಿದೆ .

ಕುಂಭ :ಉದರ ಶೂಲೆ ಉಸಿರಾಟದ ತೊಂದರೆಗಳು ಕೌಟುಂಬಿಕ ವಿರಸ ಬರಲಿದೆ. ಹಣದ ವ್ಯವಹಾರದಲ್ಲಿ ವಿರೋಧ ಬರಲಿದೆ. ಕಾರ್ಯ ವೈಫಲ್ಯವಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಮೀನ : ಗೃಹ ಸೌಕರ್ಯ ಪ್ರಾಪ್ತಿಯಾಗಲಿದೆ. ಶತ್ರುನಾಶ ಆತ್ಮ ಸ್ಥೈರ್ಯ ವೃದ್ಧಿ, ದೇಹ ನಿತ್ರಾಣಗೊಳ್ಳುವ ಸಾಧ್ಯತೆ. ಅನೇಕ ಮೂಲಗಳಿಂದ ಧನಾದಾಯವಿರುವುದು.

ಕೆ. ಸುಬ್ರಹ್ಮಣ್ಯ ಆಚಾರ್ಯ
ಶ್ರೀ ಕಾರಿಂಜೇಶ್ವರ ಜ್ಯೋತಿಷ್ಯಾಲಯ
97414 89529













































































































































































error: Content is protected !!
Scroll to Top