ದೇಶದಲ್ಲಿ 20 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

ದಿಲ್ಲಿ, ಆ. 7: ದೇಶದಲ್ಲಿ ನಿನ್ನೆ ಕೊರೋನಾ ಸೋಂಕಿತರ ಸಂಖ್ಯೆ 20 ಲಕ್ಷ ಗಡಿ ದಾಟಿದೆ.ಇದೇ ವೇಳೆ 13.70  ಲಕ್ಷ ಮಂದಿ ಗುಣಮುಖರಾಗಿದ್ದಾರೆ. ನಿನ್ನೆಯವರೆಗೆ ಒಟ್ಟು 2.27 ಕೋಟಿ  ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ನಿನ್ನೆ ಒಂದೇ ದಿನ ಸುಮಾರು 5.75 ಲಕ್ಷ ಸ್ಯಾಂಪಲ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಈ ಮಧ್ಯೆ ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಹೊರಡಿಸಿರುವ ಅಂಕಿಅಂಶದಿಂದ ಕಂಡುಬಂದಿರುವ ಸಮಾಧಾನದ ಸಂಗತಿಯೆಂದರೆ ದೇಶದಲ್ಲಿ ಗುಣಮುಖ ಹೊಂದುತ್ತಿರುವವ ಸಂಖ್ಯೆ ಹೆಚ್ಚಾಗಿದೆ. ಶೇಕಡಾ 67.62ರಷ್ಟು ಗುಣಮುಖ ಹೊಂದಿದವರ ಸಂಖ್ಯೆಯಿದ್ದು ಮೃತರ ಸಂಖ್ಯೆ ಶೇಕಡಾ 2.07ಕ್ಕೆ ಇಳಿದಿದೆ.

 

error: Content is protected !!
Scroll to Top