• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ಸುದ್ದಿ

ಕಾರ್ಕಳ : ತೆಂಗಿನ ಮರ ಕಡಿಯುವ ಸಂದರ್ಭ ವಿದ್ಯುತ್‌ ಶಾಕ್‌ಗೀಡಾಗಿ ವ್ಯಕ್ತಿ ಸಾವು

ಕಾರ್ಕಳ : ಕಾರ್ಕಳ ಕಲ್ಲೊಟ್ಟೆ ಎಂಬಲ್ಲಿ ತೆಂಗಿನ ಮರ ಕಡಿಯುವ ಸಂದರ್ಭ ವಿದ್ಯುತ್‌ ಶಾಕ್‌ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಡಿ. 23ರಂದು ಸಂಭವಿಸಿದೆ. ಜೋಡುಕಟ್ಟೆ ನಿವಾಸಿ ವಾಸು (45) ಎಂಬವರೇ ಮೃತಪಟ್ಟ ದುರ್ದೈವಿ. ವಾಸು ಅವರು ಮರ ಕಡಿಯುವುದರಲ್ಲಿ ಹೆಸರುವಾಸಿಯಾಗಿದ್ದರು. ಮೃತದೇಹ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಕಾರ್ಕಳ : ತೆಂಗಿನ ಮರ ಕಡಿಯುವ ಸಂದರ್ಭ ವಿದ್ಯುತ್‌ ಶಾಕ್‌ಗೀಡಾಗಿ ವ್ಯಕ್ತಿ ಸಾವು Read More »

ಕರ್ತವ್ಯದಲ್ಲಿ ಪ್ರಾಮಾಣಿಕತೆ-ದಕ್ಷತೆಯಿದ್ದಲ್ಲಿ ನೆಮ್ಮದಿ-ಮಹಾಬಲ ಶೆಟ್ಟಿ

ಕಾರ್ಕಳ : ಕರ್ತವ್ಯದಲ್ಲಿ ಪ್ರಾಮಾಣಿಕೆ, ದಕ್ಷತೆಯಿದ್ದಾಗ ಮಾತ್ರ ಮನಸ್ಸಿಗೆ ನೆಮ್ಮದಿ ದೊರೆಯುವುದು. ಹೆಬ್ರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ಇಲ್ಲಿನ ಜನತೆ ಸಹಕಾರ ಸ್ಮರಣೀಯವೆಂದು ನಿವೃತ್ತ ಎಸ್‌ಐ ಮಹಾಬಲ ಶೆಟ್ಟಿ ಹೇಳಿದರು.ಅವರು ಡಿ. 21ರಂದು ಹೆಬ್ರಿ ಬಂಟರ ಭವನದಲ್ಲಿ ನಡೆದ ಹೆಬ್ರಿ ಅಜೆಕಾರು ವಲಯ ಬಂಟರ ಯಾನೆ ನಾಡವರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು.ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಮುನಿಯಾಲು ಉದಯ ಶೆಟ್ಟಿ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈಯುವ ಸಮಾಜ ಬಾಂಧವರಿಗೆ ಸಂಘ ಸದಾ ಪ್ರೋತ್ಸಾಹ

ಕರ್ತವ್ಯದಲ್ಲಿ ಪ್ರಾಮಾಣಿಕತೆ-ದಕ್ಷತೆಯಿದ್ದಲ್ಲಿ ನೆಮ್ಮದಿ-ಮಹಾಬಲ ಶೆಟ್ಟಿ Read More »

ಮಾಳ ಹರ್ಷೇಂದ್ರ ಜೈನ್ ಅವರಿಗೆ ವಲ್ಡ್ ಅಪ್ರಿಶಿಯೇಷನ್ ಅವಾರ್ಡ್

ಕಾರ್ಕಳ : ಕಾರ್ಕಳ ತಾಲೂಕು ಮಾಳ ಗ್ರಾಮದ ಹರ್ಷೆಂದ್ರ ಜೈನ್‌ ಅವರಿಗೆ ಲಯನ್ಸ್‌ ಕ್ಲಬ್ ಬೆಂಗಳೂರು ಮಲ್ಲೇಶ್ವರಂ ಹೆರಿಟೇಜ್‌ ಡಿ. 20ರಂದು ವಲ್ಡ್‌ ಅಪ್ರಿಶಿಯೇಷನ್‌ ಅವಾರ್ಡ್‌ ನೀಡಿ ಗೌರವಿಸಿದೆ. ಲಾಕ್ ಡೌನ್ ಸಂದರ್ಭ ಹಸಿದವರಿಗೆ ಅನ್ನ ನೀಡುವ ಮೂಲಕ ಸಾವಿರಾರು ಮಂದಿಗೆ ಹರ್ಷೆಂದ್ರ ಜೈನ್‌ ಅವರು ನೆರವಾದ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗಿದೆ. ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲೇ ತೊಡಗಿಸಿಕೊಂಡಿರುವ ಹರ್ಷೇಂದ್ರ ಅವರು 60ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿರುತ್ತಾರೆ.

ಮಾಳ ಹರ್ಷೇಂದ್ರ ಜೈನ್ ಅವರಿಗೆ ವಲ್ಡ್ ಅಪ್ರಿಶಿಯೇಷನ್ ಅವಾರ್ಡ್ Read More »

ಉಡುಪಿ : ಆಟವಾಡುತಿದ್ದ ಬಾಲಕರಿಬ್ಬರು ನಾಪತ್ತೆ

ಉಡುಪಿ : ಆಡುತ್ತಿದ್ದ ಇಬ್ಬರು ಬಾಲಕರು ನಾಪತ್ತೆಯಾಗಿರುವ ಘಟನೆ ಉಡುಪಿಯ ಸಿಟಿ ಬಸ್ ನಿಲ್ದಾಣದ ಬಳಿ ನಡೆದಿದೆ.ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಪೇಟೆಯ ನಿವಾಸಿ ನಾಗರಾಜ ಎಂಬವರ ಮಗ ಸಂತೋಷ (11) ಹಾಗೂ ನಾಗರಾಜ ಅವರ ಪತ್ನಿಯ ತಂಗಿ ಮಂಗಳ ಎಂಬವರ ಮಗ ವಿಷ್ಣು (9) ನಾಪತ್ತೆಯಾಗಿರುವ ಬಾಲಕರು.ಶಾಲೆಗೆ ರಜೆ ಇದ್ದ ಕಾರಣ ಸಂತೋಷ್ ತನ್ನ ಚಿಕ್ಕಮ್ಮ ಮಂಗಳರವರ ಜೊತೆ ಉಡುಪಿಗೆ ಬಂದಿದ್ದು ಈ ನಡುವೆ ಡಿ.3 ರಂದು ಚಿಕ್ಕಮ್ಮನ ಮಗ ವಿಷ್ಣುವಿನೊಂದಿಗೆ ಉಡುಪಿಯ ಸಿಟಿ ಬಸ್

ಉಡುಪಿ : ಆಟವಾಡುತಿದ್ದ ಬಾಲಕರಿಬ್ಬರು ನಾಪತ್ತೆ Read More »

ಉಡುಪಿ : ಜಿಲ್ಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್

ಉಡುಪಿ: ಈ ಕೊರೊನಾ ಮಹಾಮಾರಿ ರೋಗದಿಂದ ಕಳೆದ 10 ತಿಂಗಳಿನಿಂದ ಒಂದೇ ಒಂದು ನಾಟಕ ಪ್ರದರ್ಶನವಾಗದೆ ಸಹಸ್ರಾರು ಕಲಾವಿದರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಬಗ್ಗೆ ಉಡುಪಿ ಜಿಲ್ಲೆಯ ವೃತ್ತಿಪರ ನಾಟಕ ತಂಡಗಳ ಪರವಾಗಿ ಸಮಾಜರತ್ನ ಲೀಲಾಧರ ಶೆಟ್ಟಿ ಕರಂದಾಡಿ ಇವರ ಮುಂದಾಳತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಯಾದ ಜಿ. ಜಗದೀಶ್ ಅವರಿಗೆ ನಾಟಕ ಪ್ರದರ್ಶನಕ್ಕೆ ಅನುಮತಿಯನ್ನು ಯಾಚಿಸಿದರು. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯವರು ಸರಕಾರದ ಕೋವಿಡ್ 19 ನಿಯಮಗಳನ್ನು ಪಾಲಿಸಿಕೊಂಡು ನಾಟಕ ಪ್ರದರ್ಶನ ನಡೆಸಲು ಅನುಮತಿಯನ್ನು ನೀಡಿದರು. ಜಿಲ್ಲೆಯಲ್ಲಿ ಸರಿ

ಉಡುಪಿ : ಜಿಲ್ಲೆಯಲ್ಲಿ ನಾಟಕ ಪ್ರದರ್ಶನಕ್ಕೆ ಗ್ರೀನ್‌ ಸಿಗ್ನಲ್ Read More »

ಸಾಣೂರು : ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕ ದಿನಾಚರಣೆ

ಕಾರ್ಕಳ : ಶಾಂಭವಿ ಕಲಾವಿದೆರ್ ಸಾಣೂರು ತಂಡದ ವಾರ್ಷಿಕ ದಿನಾಚರಣೆ‌ಯು ಸೆ. 8ರಂದು ನಂದ್ರೊಟ್ಟು ಶ್ರೀ ಚಾಮುಂಡಿ ನೀಚ ಬೊಬ್ಬರ್ಯ ಸನ್ನಿಧಾನದಲ್ಲಿ ನಡೆಯಿತು. ಉದಯರವಿ ಕಲಾವೃಂದದ ಅಧ್ಯಕ್ಷ ಯುವರಾಜ್ ಜೈನ್ ಕಾರ್ಯಕ್ರಮ ಉದ್ಘಾಟಿಸಿದರು. ಸಾಣೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕರುಣಾಕರ್ ಎಸ್‌. ಕೋಟ್ಯಾನ್, ಹಿರಿಯ ಕಲಾವಿದ ಚಂದ್ರಹಾಸ ಸಾಣೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೂತನ ಪದಾಧಿಕಾರಿಗಳ ಆಯ್ಕೆ ಇದೇ ಸಂದರ್ಭದಲ್ಲಿ ಶಾಂಭವಿ ಕಲಾವಿದೆರ್ ತಂಡದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಅಧ್ಯಕ್ಷರಾಗಿ ಭಾಸ್ಕರ್ ಪೂಜಾರಿ, ಸಂಚಾಲಕರಾಗಿ ಸಂತೋಷ್

ಸಾಣೂರು : ಶಾಂಭವಿ ಕಲಾವಿದೆರ್ ತಂಡದ ವಾರ್ಷಿಕ ದಿನಾಚರಣೆ Read More »

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು

ಕಾರ್ಕಳ : ಬೆಳ್ಮಣ್‌ ಗ್ರಾಮದ ಕುಂಟೊಟ್ಟು ರಾಮ ಶೆಟ್ಟಿ (79) ಎಂಬವರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಮದ್ಯವ್ಯಸನಿಯಾಗಿದ್ದ ರಾಮ ಶೆಟ್ಟಿ ಅವರು ಆ. 22ರಂದು ಕಾಣೆಯಾಗಿದ್ದರು ಎನ್ನಲಾಗುತ್ತಿದೆ. ಆ. 25ರಂದು ಮೃತದೇಹ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಕುರಿತು ಪ್ರಕರಣ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಕಾಲು ಜಾರಿ ಕೆರೆಗೆ ಬಿದ್ದು ವ್ಯಕ್ತಿ ಸಾವು Read More »

error: Content is protected !!
Scroll to Top