• All
  • ನಿಧನ
  • ನಮ್ಮೂರ ಸಾಧಕರು
  • ಸಿನೆಮಾ
  • ಸಂತಾಪ
  • ಸಂಪಾದಕೀಯ
  • ಸಂವಾದ
  • ಸುದ್ದಿ
  • ಅಂಕಣ
  • ಅಪಘಾತ
  • ಧಾರ್ಮಿಕ
  • ಶೈಕ್ಷಣಿಕ
  • ಶುಭವಿವಾಹ
  • ಮಾರುಕಟ್ಟೆ ದರ
  • ಉದ್ಯೋಗ ಮಾಹಿತಿ-ಅರ್ಜಿ
  • ಆರೋಗ್ಯಧಾರಾ
  • ಆರ್ಥಿಕತೆ
  • ಆತ್ಮಹತ್ಯೆ
  • ಇ-ಪೇಪರ್
  • ಇತರ ಸುದ್ದಿ
  • ಕರಾವಳಿ
  • ಕಾನೂನು ಕಣಜ
  • ಕಾರ್ಕಳ ಸುದ್ದಿ
  • ಕಾರ್ಕಳ ಮಾರುಕಟ್ಟೆ ದರ
  • ಕ್ಷೇತ್ರ ದರ್ಶನ
  • ಕ್ರೈಂ
  • ಕ್ರೀಡೆ
  • ಕ್ಲಾಸಿಫ್ಲೈಡ್ಸ್
  • ರಾಜಕೀಯ
  • ರಾಜ್ಯ
  • ರಾಜʼಪಥ (ರಾಜೇಂದ್ರ ಭಟ್‌ ಬರಹ)
  • ಬರಹ
  • ದಕ್ಷಿನ ಕನ್ನಡ
  • ದಕ್ಷಿಣ ಕನ್ನಡ
  • ದೇಶ
  • ತಂತ್ರಜ್ಞಾನ
  • ಹೆಬ್ರಿ ಸುದ್ದಿ
  • ಹೊರನಾಡ ಕಾರ್ಕಳದವರು
  • ಲೇಖನ
  • ಲೈವ್ ಲಿಂಕ್
  • ಪೇಟೆ ಧಾರಣೆ
  • ಜಿಲ್ಲಾ
  • ಚುನಾವಣೆ
  • ವಿಡಿಯೋ
  • ವಿದೇಶ
  • ವಾರ ಭವಿಷ್ಯ
  • ವಾರದ ವ್ಯಕ್ತಿ
  • ವಾಣಿಜ್ಯ
  • ವೈರಲ್ ಸುದ್ದಿ
  • Karkala Utsava
  • Uncategorized

ರಾಜʼಪಥ (ರಾಜೇಂದ್ರ ಭಟ್‌ ಬರಹ)

ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್‌ಜೀ

ಇಂದವರ ಹುಟ್ಟುಹಬ್ಬ “ನನಗೆ ಅಷ್ಟೊಂದು ಎತ್ತರ ಕೊಡಬೇಡ ದೇವರೇ, ನನ್ನ ಆತ್ಮೀಯರು ನನ್ನನ್ನುಆಲಂಗಿಸಲು ಆಗದಷ್ಟು”ಈ ಕವಿತೆಯನ್ನು ಬರೆದ ಸಾತ್ವಿಕ ಕವಿ, ಚತುರಮತಿ ರಾಜಕಾರಣಿ, ಪ್ರಖರ ಭಾಷಣಕಾರ, ಕವಿ ಹೃದಯದ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಬಗ್ಗೆ ಹತ್ತಾರು ಬಾರಿ ಬರೆದಿದ್ದೇನೆ. ಎಷ್ಟು ಬರೆದರೂ ಅದು ಮುಗಿದು ಹೋಗುವುದಿಲ್ಲ ಅವರ ಜೀವನ ಸಂದೇಶ! ಅವರ ಚಿಂತನೆ ಮತ್ತು ಭಾಷಣಗಳು ನವ ನವೊನ್ಮೇಶಶಾಲಿ.ವಾಜಪೇಯಿ ಬದುಕಿದ ರೀತಿಯೇ ಹಾಗೆ! ಆರೆಸ್ಸೆಸ್ ಪೂರ್ಣಕಾಲಿಕ ಪ್ರಚಾರಕ ಅಟಲ್ ಅಟಲ್‌ಜೀ ಹುಟ್ಟಿದ್ದು 1924 ಡಿಸೆಂಬರ್

ಭಾರತೀಯ ರಾಜಕಾರಣದ ಅಜಾತಶತ್ರು ಅಟಲ್‌ಜೀ Read More »

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಅವರು ಬರೆದ 900 ಹಿಂದಿ ಹಾಡುಗಳು ಸೂಪರ್ ಹಿಟ್! ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಸುಮಧುರವಾದ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದ ನನಗೆ 60-70ರ ದಶಕದ ಕೆಲವು ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯ ಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.ಆ ಕವಿ ಯಾರು ಎಂದು ಹುಡುಕಲು ತೊಡಗಿದಾಗ ವಿಸ್ಮಯ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ ಬರೆದ 900 ಸಿನೆಮಾ

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ Read More »

ರಾಮಾನುಜನ್ ಎಂಬ ದೈವದತ್ತ ಗಣಿತ ಪ್ರತಿಭೆ!

ಇಂದವರ 135ನೆಯ ಹುಟ್ಟಿದ ಹಬ್ಬ, ರಾಷ್ಟ್ರೀಯ ಗಣಿತ ದಿನ ಕೂಡ ಅವರ ಬಗ್ಗೆ ತುಂಬಾ ಸಲ ಬರೆದಿದ್ದೇನೆ. ಆದರೆ ಅವರ ಬಗ್ಗೆ ನನ್ನ ಪ್ರೀತಿ ಎಷ್ಟು ಬರೆದರೂ ಮುಗಿಯುವಂತಹದ್ದಲ್ಲ! ಬಾಲ್ಯದಿಂದಲೇ ಮಹಾ ಬುದ್ದಿವಂತ 1887 ಡಿಸೆಂಬರ್ 22ರಂದು ಈರೋಡ್ ನಗರದಲ್ಲಿ ಒಬ್ಬ ಸಾಮಾನ್ಯ ಗುಮಾಸ್ತನ ಮಗನಾಗಿಜನಿಸಿದ ರಾಮಾನುಜನ್ ಬಾಲ್ಯದಿಂದಲೂ ಗಣಿತ ಲೋಕದಲ್ಲಿ ಮುಳುಗಿಬಿಡುತ್ತಿದ್ದರು. ಐದನೇ ತರಗತಿಯಲ್ಲಿ ಒಬ್ಬ ಗಣಿತ ಅಧ್ಯಾಪಕರು ಪಾಠ ಮಾಡುತ್ತಾ ಸೊನ್ನೆಗೆ ಸೊನ್ನೆಯಿಂದ ಭಾಗಿಸಿದರೆ ಒಂದು ಎಂದು ನಿರೂಪಣೆ ಮಾಡಲು ಹೊರಟಾಗ ಸಾಧ್ಯವೇ ಇಲ್ಲ,

ರಾಮಾನುಜನ್ ಎಂಬ ದೈವದತ್ತ ಗಣಿತ ಪ್ರತಿಭೆ! Read More »

ಲೆಜೆಂಡ್‌ಗಳು ಸಾಯಬಹುದು, ಆದರೆ ಪರಂಪರೆ ಸಾಯುವುದಿಲ್ಲ

ತಂಡದವರು ಗೆಲುವಿನ ಸಂಭ್ರದಲ್ಲಿರುವಾಗ ಆತ ಸೋತವನನ್ನು ಸಾಂತ್ವನಿಸುತ್ತಿದ್ದ! A LEGEND may die, but the LEGACY continues!ಈ ರವಿವಾರದ ರಾತ್ರಿ ನಡೆದ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯವು ಹಲವು ಸ್ಮರಣೀಯವಾದ ಕ್ಷಣಗಳನ್ನು ಬಿಟ್ಟುಹೋಯಿತು. ಅರ್ಜೆಂಟೀನಾ ತನ್ನ ಫುಟ್ಬಾಲ್ ಲೆಜೆಂಡ್ ಆದ ಮೆಸ್ಸಿಗೆ ಗೆಲುವಿನ ವಿದಾಯವನ್ನು ಕೋರಿತು. ಫ್ರಾನ್ಸ್ ಕೊನೆಯ ಕ್ಷಣದವರೆಗೂ ಫೈಟ್ ಕೊಟ್ಟು ಪೆನಾಲ್ಟಿ ಶೂಟೌಟನಲ್ಲಿ ಶರಣಾಯಿತು.ಅರ್ಜೆಂಟೀನಾ ಕಪ್ತಾನ ಮೆಸ್ಸಿ ಹೊಳೆಯುವ ಫಿಫಾ ಚಿನ್ನದ ಟ್ರೋಫಿಯನ್ನು ಎತ್ತಿಕೊಳ್ಳುವ ಕ್ಷಣಕ್ಕಾಗಿ ಇಡೀ ಜಗತ್ತು ಕಾದು ಕುಳಿತಿತ್ತು.

ಲೆಜೆಂಡ್‌ಗಳು ಸಾಯಬಹುದು, ಆದರೆ ಪರಂಪರೆ ಸಾಯುವುದಿಲ್ಲ Read More »

ಕರಾವಳಿ ಕರ್ನಾಟಕದ ಅಭಿವೃದ್ಧಿಯ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯ

ಜನ ಪ್ರತಿನಿಧಿ ಹೀಗೇ ಇರಬೇಕು ಎಂದು ತೋರಿಸಿಕೊಟ್ಟವರು ಇವರು ಅವರ ಬಗ್ಗೆ ಒಂದು ಸುದೀರ್ಘವಾದ ಪುಸ್ತಕವನ್ನು ಬರೆಯುವಷ್ಟು ಮಾಹಿತಿ ಹರಡಿ ಇಟ್ಟುಕೊಂಡು ಇಂದಿನ ಅಂಕಣ ಬರೆಯಲು ಆರಂಭಿಸಿರುವೆ.1946ರ ಹೊತ್ತಿಗೆ ಉಡುಪಿ ಮತ್ತು ದಕ್ಷಿಣ ಕನ್ನಡ ಉಭಯ ಜಿಲ್ಲೆಗಳು ಒಂದೇ ಲೋಕಸಭಾ ಕ್ಷೇತ್ರ ಆಗಿತ್ತು. 1946ರಿಂದ 1965ರವರೆಗಿನ ಸುದೀರ್ಘ ಅವಧಿಯಲ್ಲಿ (ಒಟ್ಟು 18 ವರ್ಷ) ಮಂಗಳೂರು ಲೋಕಸಭಾ ಕ್ಷೇತ್ರದ ಎಂಪಿ ಆಗಿದ್ದು, ಅವರು ಮಾಡಿದ ಅಭಿವೃದ್ಧಿಯ ಕೆಲಸಗಳು, ವಿಧಾಯಕ ಕಾಮಗಾರಿಗಳು ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತವೆ. ಲೋಕಸಭೆಯಲ್ಲಿ ಅತ್ಯಂತ ಪ್ರಭಾವಿ

ಕರಾವಳಿ ಕರ್ನಾಟಕದ ಅಭಿವೃದ್ಧಿಯ ರೂವಾರಿ ಉಳ್ಳಾಲ ಶ್ರೀನಿವಾಸ ಮಲ್ಯ Read More »

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್

ಸಿನೆಮಾದಲ್ಲಿ ಹುಡುಗಿಯರು ನಟಿಸುವುದು ಅಪರಾಧ ಎಂಬ ಕಾಲದಲ್ಲಿ ಆಕೆ ಸೂಪರ್ ಸ್ಟಾರ್ ಆಗಿ ಮೆರೆದಿದ್ದರು! ಇದನ್ನು ಹೇಳಿದರೆ ನೀವು ಖಂಡಿತವಾಗಿ ನಗಬಹುದು, ಆದರೆ ಆ ಕಾಲ ಹಾಗಿತ್ತು.ಶತಮಾನದ ಹಿಂದೆ ಭಾರತದಲ್ಲಿ ದಾದಾಸಾಹೇಬ್ ಫಾಲ್ಕೆ ಅವರು ‘ರಾಜಾ ಹರಿಶ್ಚಂದ್ರ ‘ ಸಿನೆಮಾ ಮಾಡಲು ಹೊರಟಾಗ ಚಂದ್ರಮತಿಯ ಪಾತ್ರದಲ್ಲಿ ಅಭಿನಯ ಮಾಡಲು ಯಾವ ಹುಡುಗಿಯೂ ಮುಂದೆ ಬರಲಿಲ್ಲ. ಹಲವು ಬಾರಿ ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟರೂ ಯಾರೂ ರೆಸ್ಪಾನ್ಸ್ ಮಾಡಲಿಲ್ಲ. ಕೊನೆಗೆ ಅಡುಗೆ ಮಾಡಲು ಬಂದಿದ್ದ ಒಬ್ಬ ಚಂದದ ಹುಡುಗನಿಗೆ ಸೀರೆ

ಭಾರತ ರಜತ ಪರದೆಯ ಮೊದಲ ನಾಯಕಿ ದೇವಿಕಾ ರಾಣಿ ರೋರಿಚ್ Read More »

ಸಿಂಪಥಿ ಮೀರಿದ ಎಂಪಥಿ…!

ನಮ್ಮನ್ನು ಎಲ್ಲ ಕಡೆಯೂ ಗೆಲ್ಲಿಸುವ ಮಹಾಮಂತ್ರ! ಒಂದು ಕಥೆಯಿಂದ ಆರಂಭ ಮಾಡುತ್ತೇನೆ.ಒಂದೂರಲ್ಲಿ ಒಂದು ನಾಯಿಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಕಾರ್ಯಕ್ರಮ ಏರ್ಪಾಡಾಗಿತ್ತು. ಬೇರೆ ಬೇರೆ ಜಾತಿಯ, ಬೇರೆ ಬೇರೆ ಬಣ್ಣದ ಚಂದವಾದ ನಾಯಿಗಳು. ಬೆಳಿಗ್ಗೆಯಿಂದ ಜನಸಾಗರ ಹರಿದು ಬಂದು ನಾಯಿಗಳನ್ನು ನೋಡುತ್ತ ತಮಗೆ ಇಷ್ಟವಾದ ನಾಯಿಗಳನ್ನು ಖರೀದಿ ಮಾಡುತ್ತಿತ್ತು.ಆದರೆ ಒಂದು ನಾಯಿ ಮೇಜಿನ ಕೆಳಗೆ ಧೂಳಲ್ಲಿ ಬಿದ್ದು ಒದ್ದಾಡುತ್ತಿತ್ತು. ಅದಕ್ಕೆ ಬೊಗಳಲು ಕೂಡ ತ್ರಾಣ ಇರಲಿಲ್ಲ. ಅದು ಯಾರಿಗೂ ಬೇಡವಾದ ನಾಯಿ ಆಗಿತ್ತು. ಯಾರೂ ಅದರ

ಸಿಂಪಥಿ ಮೀರಿದ ಎಂಪಥಿ…! Read More »

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ!

ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ. ಅದಕ್ಕೆ ಕಾರಣದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ.

ಮೆಸ್ಸಿ… ಮೆಸ್ಸಿ… ಮೆಸ್ಸಿ… ಜಗದಗಲ ಮೆಸ್ಸಿ! Read More »

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧನೆಗಳು

ಇಂದು ಶ್ರೀ ನಾರಾಯಣಗುರುಗಳ ಜಯಂತಿ. ಎರಡು ಶತಮಾನವನ್ನು ತಮ್ಮ ತಪಸ್ಸಿನ ಶಕ್ತಿಯಿಂದ ಪ್ರಭಾವಿಸಿ, ಮುಂದಿನ ಹಲವಾರು ಶತಮಾನಗಳನ್ನು ತನ್ನ ತತ್ವಗಳ ಬೆಳಕಿನಲ್ಲಿ ಮುನ್ನಡೆಸುವ ಬ್ರಹ್ಮಶ್ರೀ ನಾರಾಯಣ ಗುರುಗಳು ಹಚ್ಚಿದ ಹಣತೆಯ ಬೆಳಕು ಇಂದಿಗೂ ದೇದೀಪ್ಯಮಾನ. ಅವರ ಬೋಧನೆ ಮತ್ತು ತತ್ವಗಳೇ ನಮ್ಮ ಇಂದಿನ ನಿಜವಾದ ಐಕಾನ್!ಮೌಢ್ಯ ಮತ್ತು ಅಂಧಶ್ರದ್ಧೆ ಇವುಗಳಿಂದ ನಲುಗಿ ಹೋಗಿದ್ದ ಕೇರಳವನ್ನು ತಮ್ಮ ಸಶಕ್ತ ಸಾಮಾಜಿಕ ಪರಿವರ್ತನೆಯ ಮೂಲಕ ಹಿಡಿದು ಎತ್ತಿದ್ದು ಗುರುಗಳ ಸಾಧನೆ. ಜಾತಿ ಪದ್ಧತಿ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅಸಮಾನತೆಯಿಂದ ಬಸವಳಿದ

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ ಬೋಧನೆಗಳು Read More »

ಉಡುಪಿ ರಜತ ಸಂಭ್ರಮದಲ್ಲಿ ನಾವು ನೆನಪಿಸಿಕೊಳ್ಳಲೇ ಬೇಕಾದವರು…..

ಜಿಲ್ಲೆಯನ್ನು ಕಟ್ಟಿ ಬೆಳೆಸಿದ ಈ ಐವರು ಸದಾ ಪ್ರಾತಃಸ್ಮರಣೀಯರು 1997 ಆಗಸ್ಟ್ 25…. ಉಡುಪಿಯು ಶ್ರೀ ಕೃಷ್ಣನ ಸಂಭ್ರಮದ ವಿಠ್ಠಲಪಿಂಡಿಯ ಸಂಭ್ರಮದಲ್ಲಿ ಮಿಂದೇಳುತ್ತಿತ್ತು. ಆದರೆ ಆ ವರ್ಷದ ವಿಠ್ಠಲ ಪಿಂಡಿಯು ತುಂಬಾ ವಿಶೇಷವಾಗಿತ್ತು.ಅದಕ್ಕೆ ಕಾರಣವೆಂದರೆ ಉಡುಪಿ ನವೋದಿತವಾದ ಜಿಲ್ಲೆಯ ಉದ್ಘಾಟನೆಗೆ ಕ್ಷಣಗಣನೆಯು ಆಗಲೇ ಆರಂಭ ಆಗಿತ್ತು. ಇಡೀ ರಾಜ್ಯದ ಗಮನ ಸೆಳೆಯುವ ಘಟನೆ ಆಗಿತ್ತು ಅದು.ರಾಜ್ಯದ ಆಗಿನ ಮುಖ್ಯಮಂತ್ರಿ ಜೆ. ಎಚ್. ಪಟೇಲ್ ಅವರು ಉಡುಪಿಯ ಅಜ್ಜರಕಾಡಿನ ವಿಶಾಲ ಮೈದಾನದಲ್ಲಿ ಉಡುಪಿ ಜಿಲ್ಲೆ ಆರಂಭವಾದ ಘೋಷಣೆ ಮಾಡಿದರು.

ಉಡುಪಿ ರಜತ ಸಂಭ್ರಮದಲ್ಲಿ ನಾವು ನೆನಪಿಸಿಕೊಳ್ಳಲೇ ಬೇಕಾದವರು….. Read More »

error: Content is protected !!
Scroll to Top