ಡಾ. ಶರತ್ ರಾವ್ ಅವರಿಗೆ ಲಂಡನ್ ನ ಗೌರವಾನ್ವಿತ ಎಫ್‌ಆರ್‌ಸಿಪಿ ಪ್ರಶಸ್ತಿ

ಮಣಿಪಾಲ : ಖ್ಯಾತ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ, ಕಾರ್ಕಳದ ಡಾ. ಶರತ್ ಕುಮಾರ್ ರಾವ್ ಕೆ. ಅವರು ವೈದ್ಯಕೀಯ ನಾಯಕತ್ವ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ತೋರಿದ ಸಾಧನೆಗಾಗಿ ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅದರ ಗೌರವ ಡಾಕ್ಟರೇಟ್ (ಎಫ್ ಆರ್ ಸಿ ಪಿ) ಪಡೆದಿದ್ದಾರೆ. ಜು. 8ರಂದು ಲಂಡನ್‌ನ ರಾಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಶರತ್ ಕೆ. ರಾವ್ ಪ್ರಶಸ್ತಿ ಸ್ವೀಕರಿಸಿದರು.

ಡಾ. ರಾವ್ ಅವರು ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ನ ಆರೋಗ್ಯ ವಿಜ್ಞಾನಗಳ ಪ್ರೊ ವೈಸ್ ಚಾನ್ಸೆಲರ್ (ಪ್ರೊ ಉಪಕುಲಪತಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2019 ರಿಂದ 2023 ರವರೆಗೆ ಕಸ್ತೂರ್ಬಾ ಮೆಡಿಕಲ್ ಕಾಲೇಜ್ (ಕೆಎಂಸಿ), ಮಣಿಪಾಲ್ ನ ಡೀನ್ ಆಗಿದ್ದ ಅವರು 2023ರಿಂದ ಉಪಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಂಕೀರ್ಣ ಗಾಯ ಚಿಕಿತ್ಸೆ, ಸಂಧಿ ಜೋಡಣೆ, ಬದಲಾವಣೆ ಮತ್ತು ಮಣಿಗಂಟು ಆರ್ಥೋಸ್ಕೋಪಿ (knee arthroscopy) ಯಲ್ಲಿ ನಿಪುಣರಾಗಿರುವ ಡಾ. ಶರತ್‌ ಅವರು ಜರ್ಮನಿ, ಇಟಲಿ, ಯು.ಕೆ., ಮತ್ತು ಆಸ್ಟ್ರೇಲಿಯಾದ ಪ್ರಸಿದ್ಧ ವೈದ್ಯಕೀಯ ಕೇಂದ್ರಗಳಲ್ಲಿ ಮಂಡಿ ಮತ್ತು ಸೊಂಟದ ಬದಲಿ ಶಸ್ತ್ರಚಿಕಿತ್ಸೆಯಲ್ಲಿ ಉನ್ನತ ತರಬೇತಿ ಪಡೆದುಕೊಂಡಿರುತ್ತಾರೆ.

ಡಾ. ಶರತ್ ರಾವ್ ಅವರು ಉದ್ದೇಶಪೂರ್ಣ ನಾಯಕತ್ವದ ಪ್ರತಿನಿಧಿಯಾಗಿ ಶಸ್ತ್ರಚಿಕಿತ್ಸಾ ಕೋಣೆ, ತರಗತಿ ಕೋಣೆ ಮತ್ತು ಆಡಳಿತ ನಿರ್ವಹಣಾ ಹುದ್ದೆಗಳಲ್ಲಿ ಗುರುತಿಸಲ್ಪಡುತ್ತಾರೆ. ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ನೀಡಿದ ಈ ಗೌರವ ಒಂದು ವೈಯಕ್ತಿಕ ಸಾಧನೆಯಷ್ಟೇ ಅಲ್ಲ, ಅದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೇಲೆ ಅವರ ಶಾಶ್ವತ ಪರಿಣಾಮದ ಪ್ರತಿಫಲ ಆಗಿದೆ.
ಡಾ. ಎಚ್.ಎಸ್. ಬಲ್ಲಾಳ್
ಪ್ರೊ. ಚಾನ್ಸಲರ್‌ ಮಾಹೆ















































































error: Content is protected !!
Scroll to Top