ಅತ್ತೂರು ಪರ್ಪಲೆಗಿರಿಯಲ್ಲಿ ತುಡರ್ ಸೇವೆ

ಕಾರ್ಕಳ : ಶ್ರೀ ಕ್ಷೇತ್ರ ಅತ್ತೂರು ಪರ್ಪಲೆಗಿರಿಯ ಕಲ್ಕುಡ ಕಲ್ಲುರ್ಟಿ ತೂಕತ್ತೇರಿ ದೈವ ಸನ್ನಿಧಾನದಲ್ಲಿ ಜ. 24 ರಿಂದ ಜ. 26 ರವರೆಗೆ ನಡೆಯಲಿರುವ ತುಡರ್ ಸೇವೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಈ ಸಂದರ್ಭ ರಮೇಶ್ ಕಲ್ಲೊಟ್ಟೆ, ಚಂದ್ರಶೇಖರ್ ಶೆಟ್ಟಿ, ಸುಭಾಷ್ ಚಂದ್ರ ಹೆಗ್ಡೆ ಹಾಗೂ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ತುಡರ್‌ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಅತ್ತೂರು ಕೃಷ್ಣಗಿರಿ ಕಲ್ಕುಡ ದೇವಸ್ಥಾನ ಟ್ರಸ್ಟ್‌ ಪ್ರಕಟನೆಯಲ್ಲಿ ತಿಳಿಸಿದೆ.

Latest Articles

error: Content is protected !!