ಆಸಕ್ತರು ಕಂಟ್ರೋಲ್ ರೂಮ್ನಲ್ಲಿ ಹೆಸರು ನೋಂದಾಯಿಸಿಕೊಳ್ಳಬಹದು
ಕಾರ್ಕಳ: ಪರುಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆ ಕಾರ್ಯಕ್ರಮದ ಸಂದರ್ಭ ಸ್ವಚ್ಛತೆಗಾಗಿ ಎಸ್ಎಲ್ಆರ್ಎಂ ಸ್ವಚ್ಚತಾ ಕಾರ್ಯಕರ್ತರನ್ನು ಒಳಗೊಂಡ ಸ್ವಚ್ಚತಾ ಕಂಟ್ರೋಲ್ ರೂಮ್ ಸಿದ್ದವಾಗಿದೆ. ಈ ತಂಡದೊಂದಿಗೆ ಕಾರ್ಕಳ ಪುರಸಭೆ ತಂಡ, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಕೈ ಜೋಡಿಸಲಿದ್ದಾರೆ, 30 ಎಸ್ಎಲ್ಆರ್ಎಂ ತ್ಯಾಜ್ಯ ಸಂಗ್ರಹಣಾ ವಾಹನಗಳು, ಕಾರ್ಯಕರ್ತರು ಸೇರಿ ಸ್ವಚ್ಚತಾ ಕಾರ್ಯದಲ್ಲಿ ಸುಮಾರು 150 ಕಾರ್ಯಕರ್ತರಿರಲಿದ್ದಾರೆ. ಸ್ವಚ್ಚತಾ ಸೇವೆ ಮಾಡಲು ಆಸಕ್ತ ಸ್ವಯಂ ಸೇವಾ ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಸ್ವಚ್ಚತಾ ಕಂಟ್ರೋಲ್ ರೂಮ್ನಲ್ಲಿ ಹೆಸರು ನೋಂದಾಯಿಸಬಹುದು. 919964499358 (ಪ್ರಮೀಳಾ), 919945867407 ( ಪ್ರಕಾಶ್ ಬಲಿಪ), 919845924148 (ರಘುನಾಥ್), 919901982928 (ಮಾಧವಿ) ನಂಬರಿಗೆ ಸಂಪರ್ಕಿಸಬಹುದು ಎಂದು ಪರಶುರಾಮ ಥೀಮ್ ಪಾರ್ಕ್ ಕಾರ್ಯಾಲಯ ಪ್ರಕಟನೆಯಲ್ಲಿ ತಿಳಿಸಿದೆ.