ಕಾರ್ಕಳ ನಗರದ ಭವಾನಿ ವೃತ್ತದಲ್ಲಿ ಶಿವಾಜಿ ಪ್ರತಿಮೆಗೆ ಶಿಲಾನ್ಯಾಸ

ಕಾರ್ಕಳ : ನಗರದ ಬೈಪಾಸ್ ರಸ್ತೆಯ ಭವಾನಿ ಮಿಲ್ ನ ಬಳಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್‌ ತಾಲೂಕು ಘಟಕದ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 12 ಅಡಿ ಪುತ್ಥಳಿ ಸಹಿತ ವೃತ್ತ ನಿರ್ಮಾಣಕ್ಕೆ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಇಂದು ಶಿಲಾನ್ಯಾಸ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಕಾರ್ಕಳ ನಗರವನ್ನು ಪ್ರವೇಶ ಮಾಡುವಂತಹ ಭವಾನಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭವ್ಯ ಪುತ್ಥಳಿಯ ನಿರ್ಮಾಣವಾಗಬೇಕು, ತನ್ಮೂಲಕ ಈ ವೃತ್ತ ಅತ್ಯಂತ ಸುಂದರವಾಗಿ ಕಾಣಬೇಕು ಎಂಬುದು ಹಲವಾರು ದಿನಗಳ ಕನಸಾಗಿತ್ತು. ಅದನ್ನು ಯಾರು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಇದ್ದಿದ್ದರಿಂದ ಸ್ವಲ್ಪ ವಿಳಂಬವಾಗಿತ್ತು. ಆದರೆ ಇಂದು ಎಲ್ಲ ಸಾರ್ವಜನಿಕರ ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಕ್ಷತ್ರೀಯ ಮರಾಠ ಪರಿಷತ್‌ನ ನೇತೃತ್ವದೊಂದಿಗೆ ಒಂದು ಸುಂದರವಾದ ವೃತ್ತವನ್ನು ನಿರ್ಮಾಣ ಮಾಡಲು ಅಧಿಕೃತವಾದಂತಹ ಚಾಲನೆ ಸಿಕ್ಕಿರುವುದು ಅತ್ಯಂತ ಸಂತೋಷದಾಯಕ ವಿಚಾರವಾಗಿದೆ ಎಂದರು. ಕಾರ್ಕಳ ನಗರ ಸುಂದರವಾಗುವ ನಿಟ್ಟಿನಲ್ಲಿ ಸುಂದರವಾದ ವೃತ್ತಗಳು ಕೂಡ ನಿರ್ಮಾಣ ಮಾಡಬೇಕೆಂಬ ಪ್ರಯತ್ನ, ಈ ವೃತ್ತದಲ್ಲಿ ಶಿವಾಜಿ ಪುತ್ಥಳಿಯನ್ನು ನಿರ್ಮಾಣ ಮಾಡುವುದರ ಮುಖಾಂತರ ಕಾರ್ಕಳ ನಗರವನ್ನು ಪ್ರವೇಶ ಮಾಡುವಂತವರಿಗೆಲ್ಲರಿಗೂ ಸ್ವಾಗತ ಮಾಡಬೇಕಾಗಿರುವ ಒಂದು ಸುಂದರ ವೃತ್ತ ಇಂದು ನಿರ್ಮಾಣವಾಗುತ್ತಿದೆ. ಶಿವಾಜಿ ಹೋರಾಟ ಮತ್ತು ಉತ್ತಮ ಆಡಳಿತದ ಸಂಕೇತ. ಈ ಸಂಕೇತದ ಮೂಲಕ ಅಧರ್ಮದ ವಿರುದ್ಧ ಹೋರಾಡುವ ಎಲ್ಲ ಸಂಗತಿಗಳು ಕಾರ್ಕಳದಲ್ಲಿ ನೆಲೆವೂರುವಂತಾಗಲಿ. ತನ್ಮೂಲಕ ಕಾರ್ಕಳದಲ್ಲಿ ಒಳ್ಳೆಯ ಜನಜಾಗೃತಿ ಮೂಡಲಿ. ಇದರ ನೇತೃತ್ವವನ್ನು ವಹಿಸಿರುವಂತಹ ಕ್ಷತ್ರಿಯ ಮರಾಠ ಬಂಧುಗಳೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿ, ಅತಿ ಶೀಘ್ರವಾಗಿ ಈ ಪುತ್ಥಳಿಯೊಂದಿಗೆ ವೃತ್ತ ನಿರ್ಮಾಣವಾಗಲಿ ಇದಕ್ಕೆ ಬೇಕಾಗುವಂತಹ ಸಹಕಾರವನ್ನು ನೀಡುತ್ತೇನೆ ಎಂದು ಸಚಿವ ಸುನೀಲ್‌ ಕುಮಾರ್‌ ತಿಳಿಸಿದರು. ಬಳಿಕ ವಾಹನ ಜಾಥಾಕ್ಕೆ ಚಾಲನೆ ನೀಡಿದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಡಿ. ಆರ್.‌ ರಾಜು, ಹಿರಿಯ ನ್ಯಾಯವಾದಿ ಎಂ. ಕೆ. ವಿಜಯ್‌ ಕುಮಾರ್‌, ಪುರಸಭಾ ಅಧ್ಯಕ್ಷೆ ಸುಮಾ ಕೇಶವ್‌, ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್‌, ಬೊರ್ಕಟ್ಟೆ ಗಣಪತಿ ಹೆಗ್ಡೆ, ನಿತ್ಯಾನಂದ ಪೈ, ನಾರಾಯಣ ಮಣಿಯಾಣಿ, ಉಮೇಶ್‌ ರಾವ್‌ ಬಜಗೋಳಿ, ಗೋವಿಂದ ರಾವ್‌ ಕುಂಟಲ್ಪಾಡಿ, ಚಂದ್ರಶೇಖರ ಹೆಗ್ಡೆ, ಸಾವಿತ್ರಿ ರಾವ್‌, ಪ್ರೇಮಲತಾ ವೈ. ರಾವ್‌, ಯುವ ಮರಾಠ ಸಂಚಾಲಕ ಚಿರಾಗ್ ರಾವ್, ಹಿರಿಯರಾದ ಭಾಸ್ಕರ್‌ ರಾವ್‌, ಸಮಿತ್ರಾ ಭಾಸ್ಕರ್‌ ರಾವ್‌, ಕೆ.ಕೆ.ಎಂ.ಪಿ. ಉಡುಪಿ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಕಾರ್ಕಳ ತಾಲೂಕು ಘಟಕದ ಅಧ್ಯಕ್ಷ ಕೀರ್ತನ್ ಕುಮಾರ್, ಕಾರ್ಯದರ್ಶಿ ಹರೀಶ್ ರಾವ್, ಪುರಸಭಾ ಸದಸ್ಯರು ಮತ್ತು ಊರ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂತೋಷ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.





























































































































































































































error: Content is protected !!
Scroll to Top