ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮಹಿಳಾ ನಿಲಯದ ವತಿಯಿಂದ ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ಬೆಳೆದ ಅನಾಥ ಹುಡುಗಿ ಜಯಶ್ರೀಯ ವಿವಾಹವು ಮಲ್ಲೇಶ ಡಿ.ಎಲ್. ಎಂಬ ಹುಡುಗನ ಜೊತೆಗೆ ಅ.28ರಂದು ನಿಟ್ಟೂರು ಸರ್ಕಾರಿ ರಾಜ್ಯ ಮಹಿಳಾ ನಿಲಯದಲ್ಲಿ ನಡೆಯಿತು. ಮದುವೆ ಸಮಾರಂಭದಲ್ಲಿ ಭಾಗಿಯಾದ ಶಾಸಕ ಕೆ. ರಘುಪತಿ ಭಟ್ ವಧುವಿನ ಅಣ್ಣನ ಸ್ಥಾನದಲ್ಲಿ ನಿಂತು ಸಹೋದರ ತಂಗಿಯ ವಿವಾಹದಲ್ಲಿ ನಿರ್ವಹಿಸುವ ಅರಳು (ಹೊದಳ್) ಎರೆಯುವ ಧಾರ್ಮಿಕ ವಿಧಿಯನ್ನು ಪೂರೈಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಕೂರ್ಮಾ ರಾವ್ ಎಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಭಾರಿ ಉಪ ನಿರ್ದೇಶಕಿ ವೀಣಾ ಉಪಸ್ಥಿತರಿದ್ದರು.