ಕೋಟ ಪಡುಕೆರೆಯಲ್ಲಿ ಇಂದು ಬೂತಾಯಿ ಸುಗ್ಗಿ
ಉಡುಪಿ: ಬಲೆ ಹಾಕದೇ ರಾಶಿ ರಾಶಿ ಮೀನುಗಳು ಕೈ ಸೇರೋದು ಅಂದ್ರೆ ಎಷ್ಟು ಖುಷಿಯ ವಿಚಾರ ಅಲ್ವಾ. ಪಡುಕರೆ ಕಡಲ ತಡಿಗೆ ಬೂತಾಯಿ ಮೀನು ಬಂದು ಅಪ್ಪಳಿಸಿವೆ. ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆಯ ಕಡಲ ತೀರಕ್ಕೆ ರಾಶಿ ರಾಶಿ ಬೂತಾಯಿ ಮೀನುಗಳು ಅಲೆಗಳ ಸಮೇತ ಬಂದಿವೆ. ಹಾಗೂ ಬಲೆ ಬೀಸಿದವರ ಬಲೆಗೆ ಬಲೆಯೇ ಕಿತ್ತುಕೊಂಡು ಹೋಗುವ ರೀತಿ ರಾಶಿ ರಾಶಿ ಮೀನುಗಳು ಕೈ ಸೇರುತ್ತಿವೆ. ಕಡಲ ತೀರದಲ್ಲಿ ಮೀನುಗಳನ್ನು ಖರೀದಿಸಲು ಜನ ಮುಗಿಬಿದ್ದಿದ್ದು ಸುಗ್ಗಿ ಶುರುವಾಗಿದೆ.