Homeಸುದ್ದಿದರ್ಗಾ ಖಾದಿಂನಿಂದ ನೂಪುರ್‌ ಶರ್ಮ ಕತ್ತು ಕತ್ತರಿಸುವ ಬೆದರಿಕೆ

Related Posts

ದರ್ಗಾ ಖಾದಿಂನಿಂದ ನೂಪುರ್‌ ಶರ್ಮ ಕತ್ತು ಕತ್ತರಿಸುವ ಬೆದರಿಕೆ

ಅಜ್ಮೇರ್‌: ನೂಪುರ್‌ ಶರ್ಮ ಪ್ರವಾದಿಯ ಕುರಿತು ನೀಡಿದ್ದಾರೆನ್ನಲಾದ ವಿವಾದಾತ್ಮಕ ಹೇಳಿಕೆಯನ್ನು ನೆಪವಾಗಿಟ್ಟುಕೊಂಡು ಮತಾಂಧ ದುಷ್ಕರ್ಮಿಗಳಿಬ್ಬರು ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್‌ ಎಂಬ ಅಮಾಯಕ ವ್ಯಕ್ತಿಯ ಕತ್ತು ಕತ್ತರಿಸಿ ಕೊಂದಾಯಿತು. ಇದೀಗ ರಾಜಸ್ಥಾನದ ವಿಶ್ವವಿಖ್ಯಾತ ಸೂಫಿ ಸಂತ ಖ್ವಾಜಾ ಗರೀಬ್‌ ಜವಾಜ್‌ ದರ್ಗಾದ ಖಾದಿಂ ಸಲ್ಮಾನ್‌ ಚಿಸ್ತಿ ಎಂಬಾತ ನೂಪುರ್‌ ಶರ್ಮಾರ ಕತ್ತು ಸೀಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ನಿನ್ನೆ ಆತ ನೂಪುರ್‌ ಶರ್ಮಗೆ ಜೀವಬೆದರಿಕೆಯೊಡ್ಡಿರುವ ವೀಡಿಯೊ ಅಪ್‌ಲೋಟ್‌ ಮಾಡಿ ಬಳಿ, ತಲೆಮಡೆಸಿಕೊಂಡಿದ್ದಾನೆ. ಆದರೆ ಆತನ ವೀಡಿಯೊ ಭಾರಿ ವೈರಲ್‌ ಆಗಿದೆ.
ಸಲ್ಮಾನ್‌ ಚಿಶ್ತಿಯೇ ವಿಡಿಯೋ ಚಿತ್ರೀಕರಿಸಿಕೊಂಡು ಶೇರ್‌ ಮಾಡಿದ್ದಾನೆ ಎನ್ನಲಾಗಿದೆ. ಟೈಲರ್‌ ಕನ್ಹಯ್ಯಲಾಲ್‌ ಹತ್ಯೆ ಮಾಡಿದ ಬಳಿಕ ಆರೋಪಿಗಳಾದ ಮೊಹಮ್ಮದ್‌ ರಿಯಾಜ್‌ ಮತ್ತು ಗೌಸ್‌ ಮೊಹಮ್ಮದ್‌ ಮಾಡಿರುವ ವೀಡಿಯೊವನ್ನು ಚಿಸ್ತಿಯ ವೀಡಿಯೊ ಹೋಲುತ್ತಿದೆ. ಸುಮಾರು 2 ನಿಮಿಷ 50 ಸೆಕೆಂಡುಗಳ ಈ ವಿಡಿಯೋದಲ್ಲಿ ಸಲ್ಮಾನ್ ಚಿಶ್ತಿ ತನ್ನ ಧಾರ್ಮಿಕ ಭಾವನೆಗಳನ್ನು ಉಲ್ಲೇಖಿಸಿ ನೂಪುರ್ ಶರ್ಮಾಗೆ ಕೊಲೆ ಬೆದರಿಕೆ ಹಾಕಿದ್ದಾನೆ.
ಈ ವೀಡಿಯೊದಲ್ಲಿ ಸಲ್ಮಾನ್ ಚಿಶ್ತಿ ,ನೂಪುರ್ ಶರ್ಮಾ ಅವರನ್ನು ಗುಂಡಿಕ್ಕಿ ಕೊಲ್ಲುವ ಬಗ್ಗೆಯೂ ಮಾತನಾಡಿದ್ದಾನೆ. ಅಲ್ಲದೆ, ನೂಪುರ್ ಶರ್ಮಾರನ್ನು ಯಾರು ಕೊಂದರೂ ಬಹುಮಾನವಾಗಿ ಹಣ ಮತ್ತು ಮನೆ ನೀಡುವುದಾಗಿ ಹೇಳಿದ್ದಾನೆ. ನೂಪುರ್ ಶರ್ಮಾ ಅವರ ಕತ್ತು ಕೊಯ್ದವನಿಗೆ ತನ್ನ ಮನೆಯನ್ನು ಕೊಡುವುದಾಗಿ ಸಲ್ಮಾನ್ ಚಿಸ್ತಿ ಘೋಷಣೆ ಮಾಡಿದ್ದಾರೆ.
ವೀಡಿಯೊ ವೈರಲ್ ಆದ ನಂತರ, ಸಲ್ಮಾನ್ ಚಿಶ್ತಿ ವಿರುದ್ಧ ಅಜ್ಮೀರ್ ನಗರದ ಅಲ್ವಾರ್ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೀಡಿಯೊ ಶೇರ್‌ ಮಾಡಿದ ನಂತರ ಸಲ್ಮಾನ್‌ ಚಿಶ್ತಿ ತಲೆಮರೆಸಿಕೊಂಡಿದ್ದಾನೆ. ಸಲ್ಮಾನ್ ಚಿಶ್ತಿ ಕಾಶ್ಮೀರದವನಾಗಿದ್ದು, ಅಲ್ಲಿಗೆ ಹೋಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

Latest Posts

error: Content is protected !!