ಫೆ. 5- 6 : ಸಾಂತ್ರಬೆಟ್ಟು ಶ್ರೀ ನಾಗಬ್ರಹ್ಮದೇವರ ಹಾಗೂ ಪರಿವಾರ ದೈವಗಳ ಸನ್ನಿಧಿಯಲ್ಲಿ ಶ್ರೀ ನಾಗದೇವರ ಪುನರ್‌ ಪ್ರತಿಷ್ಠೆ ಮತ್ತು ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮ

ಕಾರ್ಕಳ : ಸಾಂತ್ರಬೆಟ್ಟು ಶ್ರೀ ನಾಗಬ್ರಹ್ಮದೇವರ ಪುನರ್‌ ಪ್ರತಿಷ್ಠಾ ಮಹೋತ್ಸವ ಫೆ. 5 ಹಾಗೂ 6ರಂದು ನಡೆಯಲಿದೆ. ಶ್ರೀ ಶಿಲಾ ಮಂಟಪ ಸಹಿತ, ಚಿತ್ರಕೂಟ ಸ್ಥಿತ ಶ್ರೀ ನಾಗಬ್ರಹ್ಮ ದೇವರ ಪುನರ್‌ ಪ್ರತಿಷ್ಠಾ ಮಹೋತ್ಸವ ಮತ್ತು 108 ಕಲಶ ಸಹಿತ ಬ್ರಹ್ಮಕುಂಭಾಭಿಷೇಕ ಫೆ.5 ಮತ್ತು 6 ರಂದು ಶ್ರೀ ನಾಗ ಬ್ರಹ್ಮಸ್ಥಾನ, ತೆಳ್ಳಾರು ೨ನೇ ಅಡ್ಡ ರಸ್ತೆ, ಸಾಂತ್ರಬೆಟ್ಟುವಿನಲ್ಲಿ ನಡೆಯಲಿರುವುದು.

ಫೆ. ೫ ರಂದು ಬೆಳಗ್ಗೆ 8 ಗಂಟೆಗೆ ಅನಂತಶಯನ ಶ್ರೀ ಅನಂತಪದ್ಮನಾಭ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ, ೯ ರಿಂದ ಋತ್ವಿಜರ ಸ್ವಾಗತ, ಶಿಲ್ಪಿಯಿಂದ ದೇಹ ಪ್ರತಿಗ್ರಹ, ಶ್ರೀ ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹ ವಾಚನ, ಆದ್ಯಗಣ ಯಾಗ, ಬಿಂಬ ಶುದ್ಧಿ ಪ್ರಕ್ರಿಯಾ, ಶಾಂತಿ ಪ್ರಾಯಶ್ಚಿತ್ತ ಹೋಮಗಳು, ಪ್ರಸಾದ ವಿತರಣೆ, ಪ್ರಸಾದ ಭೋಜನ, ಸಂಜೆ ೫ ರಿಂದ ಸಪ್ತಶುದ್ಧಿ, ಪ್ರಸಾದ ಶುದ್ಧಿ, ಪ್ರಕಾರ ಶುದ್ಧಿ, ವಾಸ್ತು ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ರಾಕ್ಷೋಘ್ನ ಹೋಮ, ಬಿಂಬ ಶಯ್ಯಾಧಿವಾಸ, ಅಷ್ಟಾವಧಾನ ಸೇವೆ, ದಿಕ್ಷಾಲಕ ಬಲಿವಿಧಾನ, ಲಕ್ಷ್ಮೀ ಪೂಜೆ, ಪ್ರಸಾದ ವಿತರಣೆ, ಬ್ರಹ್ಮಕಲಶ ಮಂಡಲ ರಚನೆ, ಮಂಡಲ ಪೂಜೆ, ಪ್ರಸಾದ ಭೋಜನ ನಡೆಯಲಿರುವುದು.

ಫೆ. ೬ ರಂದು ಬೆಳಗ್ಗೆ 8 ಗಂಟೆಯಿಂದ ಪುಣ್ಯಾಹ ನಾಂದೀ ಸಮಾರಾಧನೆ, ಪ್ರತಿಷ್ಠಾಯಾಗ, ಪ್ರಧಾನ ಯಾಗ, ಬೆಳಗ್ಗೆ ಗಂಟೆ 8-20ಕ್ಕೆ ಒದಗುವ ಕುಂಭ ಲಗ್ನ ಸುಮುಹೂರ್ತದಲ್ಲಿ ಶ್ರೀ ನಾಗದೇವರ ಪುನರ್‌ಪ್ರತಿಷ್ಠೆ, ಪುನ ಪ್ರತಿಷ್ಠಾ ಕಲಶಾಭಿಷೇಕ, ಪ್ರಸನ್ನ ಪೂಜೆ, ಪಂಚಾಮೃತ ಅಭಿಷೇಕ, ಶ್ರೀ ನಾಗದೇವರ ಸಂದರ್ಶನ – ನಾಗಪಾತ್ರಿ ವೇದಮೂರ್ತಿ, ಶ್ರೀ ಕ್ಷೇತ್ರ ಕಲ್ಲಂಗಳ ಶ್ರೀ ರಾಮಚಂದ್ರ ಕುಂಜಿತ್ತಾಯರು. ಅನಂತರ ತಿಲಹೋಮ, ಕೂಷ್ಮಾಂಡ ಹೋಮ, ಪವಮಾನ ಸೂಕ್ತಯಾಗ, ೧೦೮ ಕಲಶ ಸಹಿತ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, ಆಶ್ಲೇಷಾ ಬಲಿದಾನ ಸೇವೆ. ದೈವಗಳಿಗೆ ಪ್ರಾರ್ಥನೆ, ನವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ನಾಗದೇವರಿಗೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಗಂಟೆ 1ರಿಂದ ಮಹಾ ಅನ್ನ ಸಂತರ್ಪಣೆ. ಸಂಜೆ 7-30ಕ್ಕೆ ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರುಗಲಿರುವುದು.

ಸಾಂಸ್ಕೃತಿಕ ಕಾರ್ಯಕ್ರಮ
ಫೆ. ೬ ರ ರವಿವಾರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದ್ದು ಮಧ್ಯಾಹ್ನ ಗಂಟೆ 12ರಿಂದ ಶ್ರೀ ಸಿದ್ಧಿವಿನಾಯಕ ಬಾಲ ಭಜನಾ ಮಂಡಳಿ, ತೆಳ್ಳಾರು ರಸ್ತೆ ಇವರಿಂದ ಕುಣಿತ ಭಜನೆ, ಸಂಜೆ 7 ರಿಂದ ರಾತ್ರಿ ಗಂಟೆ 12 ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಕೃಪಾ ಪೋಷಿತ ಯಕ್ಷಗಾನ ಮೇಳದಿಂದ ಕಾಲಮಿತಿ ಯಕ್ಷಗಾನ ಬಯಲಾಟ ಪ್ರಸಂಗ ʼಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ನಡೆಯಲಿದೆ ಎಂದು ಶ್ರೀ ನಾಗಬ್ರಹ್ಮ ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.





























































































































































































































error: Content is protected !!
Scroll to Top