ಬೆಳ್ಮಣ್: ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದ ಹಿಂಬದಿಯಲ್ಲಿ ಮಟ್ಕಾ ಜುಗಾರಿ ಆಡುತ್ತಿದ್ದ ಓರ್ವನನ್ನು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಜ.28 ರಂದು ಹಣವನ್ನು ಪಣವಾಗಿರಿಸಿಕೊಂಡು ಓರ್ವ ಜುಗಾರಿ ಆಟ ಆಡುತ್ತಿದ್ದಾಗ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಜನಾರ್ಧನ್. ಕೆ ತಂಡ ದಾಳಿ ನಡೆಸಿ ನಂದಳಿಕೆ ಗ್ರಾಮದ ಯೊಗೀಶ್ ಕಾಳಪ್ಪ ಮಾಬಿಯಾನ್ (52) ನ್ನು ಮತ್ತು ಆಟಕ್ಕೆ ಬಳಸಿದ ನಗದು 1360 ರೂ. ಗಳನ್ನು ವಶಕ್ಕೆ ಪಡೆದಿರುತ್ತಾರೆ.
ಜುಗಾರಿ ಆಟ: ಓರ್ವ ವಶಕ್ಕೆ
Recent Comments
ಕಗ್ಗದ ಸಂದೇಶ
on