ಕಾರ್ಕಳ : ಪೆಟ್ರೋಲ್ ಬಂಕ್‌ನಲ್ಲಿ ಕಳವು

ಕಾರ್ಕಳ : ಸಾಣೂರಿನಲ್ಲಿರುವ ಸಿದ್ಧಿವಿನಾಯಕ ಪೆಟ್ರೋಲ್ ಪಂಪ್‌ನ ಶಟರ್‌ ಬೀಗ ಮುರಿದು ಕಚೇರಿ ಒಳಗಡೆಯಿದ್ದ ಎರಡು ಸ್ವಾಯಿಪಿಂಗ್ ಮಿಷಿನ್, ಪ್ಲಿಟ್  ಕಾರ್ಡ್ ಮಿಷಿನ್‌, ಹೊರಗಡೆ ಪಂಪ್‌ನ ಮೇಲೆ ಪಿಕ್ಸ್ ಮಾಡಿಟ್ಟ ಅಟೋ ಮಿಷನ್ ಡಿವೈಸ್ ಕಳವು ಮಾಡಿದ ಘಟನೆ ಅ. 6ರಂದು ನಡೆದಿದೆ. ನಸುಕಿನಲ್ಲಿ ಪ್ಯಾಂಟ್, ತುಂಬು ತೋಳಿನ ಶರ್ಟ್ ಹಾಗೂ ಮಾಸ್ಕ್ ಧರಿಸಿದ ವ್ಯಕ್ತಿ ಕಳವು ನಡೆಸಿದ ಘಟನಾವಳಿಗಳು ಪಂಪ್‌ನ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪಂಪ್‌ನ ಮ್ಯಾನೇಜರ್ ಉದಯ ಕುಮಾರ್ ಪ್ರಕರಣ ದಾಖಲಿಸಿದ್ದಾರೆ.





























































































































































































































error: Content is protected !!
Scroll to Top