ಹಿಂದೂಪರ ಸರಕಾರವಿದ್ಯಾಗ್ಯೂ ದೇಗುಲದ ಉಳಿವಿಗಾಗಿ ಹೋರಾಟದ ದುರ್ಗತಿ ಬಂದೊದಗಿದೆ : ಚೈತ್ರಾ ಕುಂದಾಪುರ

ಭಾರತದ ಪ್ರಜಾಪ್ರಭುತ್ವ ಅಫ್ಘಾನಿಸ್ತಾನದ ತಾಲಿಬಾನಿಗಳಿಗಿಂತ ಏನು ವ್ಯತ್ಯಾಸವಿಲ್ಲ

ಬಂದೂಕು – ತಲವಾರು ಹೊಂದಲು ಅವಕಾಶ ನೀಡಿ

ಕಾರ್ಕಳ : ಕಳೆದ ಮೂರು ನಾಲ್ಕು ವರ್ಷದ ಹಿಂದೆ ಟಿಪ್ಪುವಿನ ಸರಕಾರ ಇದ್ದಾಗ ದೇವಸ್ಥಾನ ರಕ್ಷಣೆಗೆ ಹೋರಾಟ ಮಾಡುತ್ತಿದ್ದೆವು. ಹಿಂದೂಗಳಿಗೆ ಬೆಂಬಲ ನೀಡುವ ಸರಕಾರ ಬಂದ ಮೇಲೂ ಹೋರಾಟ ಮಾಡೋ ದುರ್ಗತಿಗೆ ಬಂದಿರುವುದು ನಾಚಿಕೆಗೇಡಿನ ಸಂಗತಿ. ಹಿಂದೂ ಸಂಘಟನೆಗಳ ಕಾರ್ಯಕರ್ತರು ಎಂದರೆ ಬಿಜೆಪಿಯ ಚೇಲಾಗಳಲ್ಲ. ಹಿಂದೂಗಳ ಭಾವನೆ ಧಕ್ಕೆಯುಂಟಾಗುವ ಸಂದರ್ಭ ಯಾವುದೇ ಸರ್ಕಾರವಿದ್ದಾಗ್ಯೂ ಖಂಡಿತ ವಿರೋಧಿಸುತ್ತೇವೆ ಎಂದು ಚೈತ್ರಾ ಕುಂದಾಪುರ ಆಕ್ರೋಶ ವ್ಯಕ್ತಪಡಿಸಿದರು.

ಅವರು ಸೆ. 19ರಂದು ನಿಟ್ಟೆ ಲೆಮಿನಾ ಕ್ರಾಸ್‌ನಲ್ಲಿ ವಿಶ್ವ ಹಿಂದೂ ಪರಿಷತ್‌ ಭಜರಂಗದಳ ಕಾರ್ಕಳ ಪ್ರಖಂಡ ಇದರ ವತಿಯಿಂದ ಗೋ ಕಳ್ಳತನ ಹಾಗೂ ಮತಾಂತರದ ವಿರುದ್ಧ ನಡೆದ ಬೃಹತ್‌ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.

ಗೋವು ಕೇವಲ ಹಾಲು ಕೊಡುವ ಮೂಕಪ್ರಾಣಿಯಲ್ಲ. ಹಿಂದೂಗಳು ಗೋವಿನಲ್ಲಿ ಮುಕ್ಕೋಟಿ ದೇವತೆಗಳನ್ನು ಕಾಣುತ್ತೇವೆ. ಹಾಗಾಗಿ ಗೋವುಗಳನ್ನು ಕಡಿದು ತಿನ್ನುವಂತಹ ಮೂರ್ಖರಿಗೆ ದೇವರು ಕಾಣದಿದ್ದರೂ ಮಾನವೀಯತೆಯಾದರೂ ಕಾಣಬೇಕಿತ್ತು ಚೈತ್ರಾ ಕುಂದಾಪುರ ಹೇಳಿದರು.

ಭಾರತದ ಪ್ರಜಾಪ್ರಭುತ್ವ ಅಫ್ಘಾನಿಸ್ಥಾನದ ತಾಲಿಬಾನಿಗಳಿಗಿಂತ ಏನು ವ್ಯತ್ಯಾಸ ಇಲ್ಲ. ಯಾಕೆಂದರೆ ಗೋಮಾತೆ ಹಾಗೂ ಹಿಂದೂ ಹೆಣ್ಣುಮಕ್ಕಳಿಗೆ ಇಬ್ಬರಿಗೂ ಇಂದು ರಕ್ಷಣೆಯಿಲ್ಲ. ಎರಡನ್ನೂ ರಕ್ಷಣೆ ಮಾಡಿಕೊಳ್ಳಲಾಗದ ಅತಂತ್ರ ಪರಿಸ್ಥಿತಿಯಲ್ಲಿ ಇಂದು ನಾವಿದ್ದೇವೆ. ಹಿಂದೂ ಸಂಘಟನೆಗಳಿಗೆ ಇನ್ನು ಜಾಗೃತಿ ಕೆಲಸ ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದುಕೊಂಡಿದ್ದೆವು. ಗೋಹತ್ಯಾ ನಿಷೇಧ ಕಾನೂನು ಜಾರಿಯಾದ ನಂತರ ನಮಗೇನು ಕಷ್ಟವಾಗಲ್ಲ ಎಂದು ಭಾವಿಸಿದ್ದೆವು. ಗೋಕಳ್ಳರು ಸ್ವಲ್ಪದಿನ ಬಾಲ ಮುದುರಿಕೊಂಡಿದ್ದವರು ಈಗ ಪುನ: ಬಾಲ ಬಿಚ್ಚಿದ್ದಾರೆ ಎಂದವರು ಆಕ್ರೋಶ ವ್ಯಕ್ತಪಡಿಸಿದರು.

ತಲವಾರು ಬಂದೂಕಿಗೆ ಅವಕಾಶ ನೀಡಿ

ಪೊಲೀಸರ ಕೈಯಲ್ಲಿ ಬಂದೂಕು ಲಾಠಿ ಕೊಟ್ಟಿದ್ದರೂ ಗೋರಕ್ಷಣೆ ಸಾಧ್ಯವಾಗಿಲ್ಲ. ಗೋ ರಕ್ಷಣೆಗಾಗಿ ಕೃಷಿಕರು ಮನೆಯಲ್ಲಿ ತಲವಾರು ಮತ್ತು ಬಂದೂಕು ಇಟ್ಟುಕೊಳ್ಳಲು ಅನುಮತಿ ನೀಡಬೇಕು. ಬಜರಂಗದಳದ ಕಾರ್ಯಕರ್ತರು ಗೋಕಳ್ಳರನ್ನು ತಾಯಿಯ ಗರ್ಭಕ್ಕೆ ಮರಳಿ ಕಳುಹಿಸುವ ಕೆಲಸ ಮಾಡಲಿದ್ದಾರೆ ಎಂದು ಚೈತ್ರಾ ಕುಂದಾಪುರ ಹೇಳಿದರು.

ಗೋವು ಮತ್ತು ಗುಡಿ ಎರಡೂ ಹಿಂದೂ ಧರ್ಮದ ಅಂತಃಶಕ್ತಿಯ ಪ್ರತೀಕ. ಹತ್ತು ದಿನದ ಹಿಂದೆ ನಂಜನಗೂಡಿನಲ್ಲಿ ದೇವಸ್ಥಾನ ಧ್ವಂಸವಾಗಿದೆ. 700- 800 ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಕಟ್ಟಿದ ದೇವಸ್ಥಾನವನ್ನು ರಸ್ತೆ ಆಗುತ್ತದೆ ಎಂಬ ಕಾರಣಕ್ಕೆ ನೆಲಸಮ ಮಾಡುತ್ತಾರೆ ಎಂದಾದರೆ 70- 80 ವರ್ಷಗಳ ಹಿಂದೆ ಬಂದ ಕಾನೂನಿನಲ್ಲಿ ಅಕ್ರಮ ಎಂದು ಕರೆಸಿಕೊಳ್ಳಬೇಕಾ ? ನರೇಂದ್ರ ಮೋದಿಯವರು ಕರ್ನಾಟಕದ ಮುಖ್ಯಮಂತ್ರಿ ಆಗುತ್ತೇನೆ ಎಂದು ಬಂದು ದೇವಸ್ಥಾನ ಧ್ವಂಸ ಮಾಡಿದರೆ ಅವರನ್ನೂ ನಾವು ವಿರೋಧಿಸುತ್ತೇವೆ. ಇನ್ನು ಬೊಮ್ಮಾಯಿಯವರು ದೊಡ್ಡ ವಿಷಯ ಅಲ್ಲವೇ ಅಲ್ಲ ಎಂದು ಚೈತ್ರಾ ಹೇಳಿದರು.

ಬಿಜೆಪಿ ಶಾಲು ಹಾಕೊಂಡು ಹೋಗಿಲ್ಲ
ಹಿಂದೂ ಕಾರ್ಯಕರ್ತ ಯಾರು ಕೂಡ ಬಿರಿಯಾನಿ ಅಥವಾ ಪಿಂಕ್ ನೋಟಿನ ಆಸೆಗೆ ರಾಜಕೀಯ ಸಮಾವೇಶಕ್ಕೆ ಹೋದವರಲ್ಲ. ವೋಟ್ ಹಾಕಿದವನೂ ಅಲ್ಲ. ಬದಲಾಗಿ ಕೇಸರಿ ಶಾಲು ಹಾಕಿಕೊಂಡು ಹೋಗಿ ವೋಟ್ ಹಾಕುತ್ತಾನೆ ವಿನಃ ಬಿಜೆಪಿ ಶಾಲು ಹಾಕೊಂಡು ಹೋಗಿಲ್ಲ. ಹಿಂದುತ್ವದ ರಕ್ಷಣೆಗೆ ವೋಟ್ ಹಾಕುತ್ತಾರೆ ವಿನಹ ಜಾತ್ಯಾತೀತರಿಗೆ ಬಕೆಟ್ ಹಿಡಿಯಲು ಅಲ್ಲ. ನಮ್ಮ ದೇವಸ್ಥಾನ ಅಲ್ಲಿಯೇ ಕಟ್ಟಿಕೊಡಿ ಎಂದು ಹೇಳುತ್ತಿರುವುದು ದೇವಸ್ಥಾನ ಕಟ್ಟಲು ತಾಕತ್ತಿಲ್ಲ ಅಂತಲ್ಲ. ಆದರೆ, ಕೆಡವಿದವರಿಂದಲೇ ದೇವಸ್ಥಾನ ಮತ್ತು ನಿರ್ಮಾಣ ಮಾಡಿಸುವುದರ ಮೂಲಕ ಇನ್ನು ಮುಂದೆ ಯಾವ ಅಧಿಕಾರಿಯಾಗಲಿ, ಸಚಿವರಾಗಲಿ ಹಿಂದೂಗಳ ದೇವಸ್ಥಾನ ಮುಟ್ಟುವ ಧೈರ್ಯ ಮಾಡಬಾರದು ಎಂದೇ ಹಠ ಹಿಡಿದಿರುವುದು ಎಂದು ಚೈತ್ರಾ ಹೇಳಿದರು.

ಹಿಂದೂ ಧರ್ಮವನ್ನು ಮಾನಸಿಕವಾಗಿ ಮತಾಂತರ ಮಾಡುವ ಪ್ರಯತ್ನ ನಡೀತಾ ಇದೆ. ಕತ್ತಿಹಿಡಿದು ಮತಾಂತರ ಮಾಡುವವರನ್ನು ಎದುರಿಸಲು ಬಜರಂಗದಳವಿದೆ. ಆದರೆ, ಕೇಕ್ ಪೀಸ್ ಹಿಡಿದು ವೈನ್ ಕೊಡಿಸಿ ಮತಾಂತರ ಮಾಡುವವರು ತುಂಬಾ ಅಪಾಯಕಾರಿ. ನಾವು ಕ್ರಿಶ್ಚಿಯನ್ ವಿರೋಧಿಯಲ್ಲ ಆದರೆ ನೀರಿನಲ್ಲಿ ಮುಳುಗಿದಾಗ ಕ್ಯಾನ್ಸರ್ ಗುಣ ಆಗುತ್ತದೆ ಎನ್ನುವವರ ವಿರೋಧಿಗಳು ಎಂದವರು ತಿಳಿಸಿದರು.

ಮೈಸೂರಿನಲ್ಲಿ ದೇವಸ್ಥಾನ ಕೆಡವಿದ ಅಧಿಕಾರಿಗಳನ್ನು ಅಮಾನತು ಮಾಡಬೇಕೆಂದು ಆಗ್ರಹ ಪಡಿಸಿದ್ದು ಈವರೆಗೆ ಅಮಾನತು ನಡೆಸಿಲ್ಲ‌. ಆದ್ದರಿಂದ ಈ ಬಗ್ಗೆ ಇನ್ನೊಮ್ಮೆ ಆಗ್ರಹ ಪಡಿಸುತ್ತೇನೆ ಎಂದು ಭಜರಂಗದಳ ರಾಜ್ಯ ಸಂಚಾಲಕ ಸುನಿಲ್‌ ಕೆ.ಆರ್.‌ ಎಚ್ಚರಿಕೆ ನೀಡಿದರು.

ನಿಟ್ಟೆ ರಾಜೇಶ್ ಆಚಾರ್ಯ ಅವರು ಬೀದಿ ದನಗಳನ್ನು ತನ್ನ ಮನೆಯ ಆವರಣದಲ್ಲಿ ಆಶ್ರಯ ನೀಡಿದ್ದರೂ ಗೋಕಳ್ಳರು ಕದ್ದುಕೊಂಡು ಹೋಗಿರುತ್ತಾರೆ. ಅಕ್ರಮ ಗೋಸಾಗಾಟ, ಗೋ ಕಳ್ಳತನದ ವಿರುದ್ದ ನಿರಂತರ ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ‌2008 ರಲ್ಲಿ ಮತಾಂತರ ಕೇಂದ್ರದ ಮೇಲೆ ದಾಳಿ ನಡೆಸಿತ್ತು. ಮತಾಂತರದ ವಿರುದ್ದ ಮಂಗಳೂರಿನಲ್ಲಿ ಬೃಹತ್ ಜಾಗೃತಿ ಕಾರ್ಯಕ್ರಮದ ಮೂಲಕ ಇದು‌ ನಿಯಂತ್ರಣಕ್ಕೆ ಬಂದಿತ್ತು. ಕ್ರೈಸ್ತರಿಗೆ ಚರ್ಚ್ ಕಟ್ಟಲು ಅವಕಾಶ ಮಾಡಿಕೊಟ್ಟಿದ್ದು ಅಲ್ಲಿ ನಿಮ್ಮ‌ಪೂಜೆ ಪುರಸ್ಕಾರ ಮಾಡಿಯೆಂದು. ಅದು ಬಿಟ್ಟು ಮತಾಂತರಕ್ಕೆ ಕೈ ಹಾಕಿಯೆಂದಲ್ಲ. ಗೋಕಳ್ಳತನ ಮುಂದುವರಿದಲ್ಲಿ ತಕ್ಕ ಉತ್ತರ ನೀಡಲಿದ್ದೇವೆ ಎಂದವರು ಹೇಳಿದರು.

ವೇದಿಕೆಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ವಿಶ್ವಮೂರ್ತಿ ಆಚಾರ್ಯ, ಜಿಲ್ಲಾ ಕಾರ್ಯದರ್ಶಿ ದಿನೇಶ್‌ ಮೆಂಡನ್‌, ಭಜರಂಗದಳ ಜಿಲ್ಲಾ ಸಂಚಾಲಕ ಸುರೇಂದ್ರ ಕೋಟೇಶ್ವರ,‌ ತಾಲೂಕು ಉಪಾಧ್ಯಕ್ಷ ಅಶೋಕ್‌ ಕುಮಾರ್‌ ಜೈನ್, ಜಗದೀಶ್‌ ಸಾಣೂರು ಉಪಸ್ಥಿತರಿದ್ದರು. ಭಜರಂದದಳ ತಾಲೂಕು ಸಂಚಾಲಕ ಚೇತನ್‌ ಪೇರಲ್ಕೆ ಸ್ವಾಗತಿಸಿ, ಸುರಕ್ಷಾ ನಿರೂಪಿಸಿದರು. ಮನೀಷ್‌ ನಿಟ್ಟೆ ವಂದಿಸಿದರು.





























































































































































































































error: Content is protected !!
Scroll to Top