Friday, August 19, 2022
spot_img
Homeಸಂವಾದಮೀಸಲಾತಿ- ಒಂದು ಚಿಂತನೆ

ಮೀಸಲಾತಿ- ಒಂದು ಚಿಂತನೆ

ಮೀಸಲಾತಿಯ ಉದ್ದೇಶವೇ ಒಂದು ವರ್ಗದ ಜನರ ಶ್ರೇಯೋಭಿವೃದ್ಧಿ. ಆರ್ಥಿಕವಾಗಿ,
ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವುದೇ
ಉದ್ದೇಶ. ಹಾಗಾಗಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ. ರಾಜಕೀಯ ಮೀಸಲಾತಿಯೂ ಸಂವಿಧಾನದಲ್ಲಿ ಒಳಗೊಂಡಿದೆ. ಹಿಂದುಳಿದವರ ಸಂಖ್ಯೆ ಅಧಿಕ ಪ್ರಮಾಣದಲ್ಲಿ ಇರುವ ಪ್ರದೇಶದಿಂದ ಆ ವರ್ಗದ ಒಂದು ಪ್ರಾತಿನಿಧ್ಯ ಆಡಳಿತದಲ್ಲಿರುವುದು ಕೂಡ ಆ ವರ್ಗದ ಅನುಕೂಲಕ್ಕಾಗಿ. ಒಟ್ಟು ಸಮುದಾಯದ ಅಭ್ಯುದಯದ ದೃಷ್ಟಿಯಿಂದಲ್ಲ. ಆದರೆ ಅದು ಒಟ್ಟು
ಸಮಾಜದ ಅಭ್ಯುದಯದ ಭಾಗವೆಂಬುದನ್ನು ಅಲ್ಲಗಳೆಯುವಂತಿಲ್ಲ.
ಆಡಳಿತ ಎಂಬ ಪದದ ವ್ಯಾಪ್ತಿಯೊಳಗೆ ಸಮುದಾಯದ ಎಲ್ಲಾ ವರ್ಗದ ಜನರೂ ಬರುತ್ತಾರೆ. ಸರ್ವ ಜನರ ಅಭಿವೃದ್ಧಿಯೇ ಸಮಾಜದ ಅಭಿವೃದ್ಧಿ. 73, 74ನೇ ಸಂವಿಧಾನದ
ತಿದ್ದುಪಡಿ ಮಾಡಿರುವುದೇ ಸ್ಥಳೀಯಾಡಳಿತ ಸಂಸ್ಥೆಗಳ ಬಲವರ್ಧನೆಗಾಗಿ. ಅರ್ಥಾತ್
ಆಡಳಿತವನ್ನು ಬಲಪಡಿಸುವುದು. ಈ ಸಂಸ್ಥೆಗಳು ಆರ್ಥಿಕ ಹಾಗೂ ಅಧಿಕಾರದ ಕೊರತೆಯಿಂದ
ಒಂದು ಸ್ವತಂತ್ರ ಸಂಸ್ಥೆಗಳಾಗಿ, ಸಣ್ಣರೂಪದ ಸರಕಾರದಂತೆ ಕಾರ್ಯ ನಿರ್ವಹಿಸಲು ಸಾಧ್ಯವಾಗದಿರುವ ಸ್ಥಿತಿ ತಿದ್ದುಪಡಿ ಪೂರ್ವದಲ್ಲಿತ್ತು. ಬಲವರ್ಧನೆಯ ಮೂಲಕ
ಈ ನ್ಯೂನತೆಗಳನ್ನು ಹೋಗಲಾಡಿಸುವುದೇ ಈ ವಿಧೇಯಕಗಳ ಮುಖ್ಯ ಉದ್ದೇಶ. ಸಕಲರ
ಜವಾಬ್ದಾರಿಯನ್ನು ಸಮಾನವಾಗಿ ಹೊರುವ ಆಡಳಿತದ ಚುಕ್ಕಾಣಿ ಹಿಡಿಯುವಾತ ಎಷ್ಟು
ಸಮರ್ಥವಾಗಿರಬೇಕೆಂಬುದನ್ನು ಊಹಿಸಿನೋಡಿ. ಮೀಸಲಾತಿಯ ನೆಪದಲ್ಲಿ ಓರ್ವ ದುರ್ಬಲ
ಅನಕ್ಷರಸ್ಥನನ್ನು ಕೂರಿಸಿದರೇನಾಗುತ್ತದೆ.
ತಿದ್ದುಪಡಿಯ ಅವಸರದಲ್ಲಿ ಈ ಪ್ರಮುಖ ಅಂಶಗಳೇ ಹಿನ್ನೆಲೆಗೆ ಸೇರಿವೆ. 73, 74ನೇ
ಪರಿಚ್ಛೇದದಡಿಯಲ್ಲಿ ನೈಜ ಸಾರ್ವಜನಿಕ ಹಿತಾಸಕ್ತಿಗಿಂತ ರಾಜಕೀಯದ ಘಾಟು ಸೂಕ್ಷ್ಮವಾಗಿ ಓದಿದವರ ನಾಸಾ ಪುಟಕ್ಕೆ ಬಡಿಯದಿರದು. ಸಮರ್ಥಿಸಿಕೊಳ್ಳಲು ಒಂದೆರಡು ಬಲವಾದ ಉದಾಹರಣೆ ನೀಡಬಹುದು. ನಮ್ಮದು ಪ್ರಜಾಸತ್ತೆ ಅಂಥ ನಾವು ಹೇಳಿಕೊಳ್ಳುತ್ತಿದ್ದೇವೆ. ಇದರ ದ್ಯೋತಕವಾದ ಸಂಸತ್ ಹಾಗೂ ವಿಧಾನ ಸಭೆಗಳ ಚುನಾವಣೆಯಲ್ಲಿಲ್ಲದ ಶೇ.33 ಮಹಿಳಾ
ಮೀಸಲಾತಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಜನರೇ ಅಧಿಕ ಸಂಖ್ಯೆಯಲ್ಲಿರುವ
ಸ್ಥಳೀಯಾಡಳಿತ ಪ್ರದೇಶಗಳಿಗೇಕೆ? ಈಗ ಸುಮಾರು ಮೂವತ್ತು ವರ್ಷಗಳ ಹಿಂದೆಯೇ, ಇನ್ನೂ ಸಾಕ್ಷರತೆಯ ಪ್ರಮಾಣ ಗಣನೀಯವಾಗಿ ಕಡಿಮೆ ಇರುವಾಗಲೇ ಅನುಷ್ಠಾನಿಸಲಾಗಿತ್ತೆಂದರೆ
ಆಶ್ಚರ್ಯವಲ್ಲವೇ! ಸ್ಥಳೀಯಾಡಳಿತ ಸಂಸ್ಥೆಗಳ ಪುನಶ್ಚೇತನ ಅಂದರೆ ಮೀಸಲಾತಿ
ಹೆಚ್ಚಿಸುವುದೆಂದರ್ಥವೇ? ಇದಲ್ಲದೆ ಸಂವಿಧಾನದ ಮೂಲಾಶಯಗಳಿಗೆ ವಿರೋಧವಾದ ಅನೇಕ
ಅಂಶಗಳ ಮೇಲೂ ಬೆಳಕು ಚೆಲ್ಲಬೇಕಾಗಿದೆ.
ಮೊದಲನೆಯದಾಗಿ ಆವರ್ತನಾ ಮೀಸಲಾತಿ. ಇದರಂತೆ ಸರಕಾರ ಪ್ರತಿಬಾರಿಯೂ
ಕಾನೂನಿಗೆ ಚಾಲನೆ ನೀಡಬೇಕು. ಇದೆಂಥ ಕಾನೂನು. ಕಾನೂನು ಒಮ್ಮೆ ರೂಪಿಸಲ್ಪಟ್ಟರೆ ಅದು ಮಾರ್ಪಾಟು ಆಗುವ ಅಥವಾ ರದ್ದು ಆಗುವ ತನಕ ಸ್ಥಿರ ಹಾಗೂ ಸ್ವಯಂಚಾಲಿತ. ಆದರೆ ಇಲ್ಲಿ
ಪ್ರತಿಬಾರಿಯೂ ಆಡಳಿತದಲ್ಲಿರುವ ಸರಕಾರ ಚಾಲನೆ ನೀಡಬೇಕು. ಆ ಕಾಲಕ್ಕೆ ಆಡಳಿತದಲ್ಲಿರುವ ರಾಜಕೀಯ ಪಕ್ಷದ ನೇತೃತ್ವದ ಸರಕಾರ ತನ್ನ ಹಿತಾಸಕ್ತಿಯಂತೆ ಕೈಯಾಡಿಸಲು ಪ್ರೇರಣೆ ನೀಡುವ ಕಾನೂನು ಇದು. ಪರಿಣಾಮವಾಗಿ ಅತೃಪ್ತರು ನ್ಯಾಯಾಲಯದ ಕದ ತಟ್ಟುವುದು ಸ್ವಾಭಾವಿಕ.
ಕರ್ನಾಟಕದಲ್ಲಿ ಇದರ ಪರಿಣಾಮವಾಗಿ ಕಳೆದ ಎರಡೂವರೆ ವರ್ಷದಿಂದ ನೂರಾರು ಸ್ಥಳೀಯ
ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ರೂಪುಗೊಳ್ಳದೆ ಯೋಜನೆಯ ಉದ್ದೇಶವೇ ಮೂಲೆ ಪಾಲಾಗಿದೆ.
ಬೇಳೂರು ರಾಘವ ಶೆಟ್ಟಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!