Wednesday, August 17, 2022
spot_img
Homeಕ್ರೈಂಮರ್ಡರ್‌ಗೆ 55 ಸಾವಿರ, ಕೈಕಾಲು ಮುರಿದರೆ 5 ಸಾವಿರ - ಬೆಚ್ಚಿಬೀಳಿಸಿದ "ಗೂಂಡಾ ಸೇವೆ"ಯ ಜಾಹೀರಾತು

ಮರ್ಡರ್‌ಗೆ 55 ಸಾವಿರ, ಕೈಕಾಲು ಮುರಿದರೆ 5 ಸಾವಿರ – ಬೆಚ್ಚಿಬೀಳಿಸಿದ “ಗೂಂಡಾ ಸೇವೆ”ಯ ಜಾಹೀರಾತು


ಲಕ್ನೊ, ನ.5: ಗೂಂಡಾಗಳು ಕೂಡ ಈಗ ಡಿಜಿಟಲ್‌ ಮಾಧ್ಯಮದ ಮೂಲಕ ತಮ್ಮ ಸೇವೆಯ ಕುರಿತು ಜಾಹೀರಾತು ನೀಡುವ ಕಾಲ ಬಂದಿದೆ. ಕೈಕಾಲು ಮುರಿಯಬೇಕೆ 5,000 ರೂ. , ಧಮಕಿ ಹಾಕಬೇಕೆ 1,000 ರೂ , ಹಾಲ್ಫ್‌ ಮರ್ಡರ್‌ಗೆ 25,000 ರೂ. , ಮರ್ಡರ್‌ಗೆ 55,000 ರೂ. ಎಂಬ ಜಾಹೀರಾತೊಂದು ಸೋಷಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಂಡಾಗ ಉತ್ತರ ಪ್ರದೇಶದ ಪೊಲೀಸರು ಹೈರಾಣರಾಗಿ ಬಿಟ್ಟರು.
ಕೊರೊನಾ ಕಾರಣಕ್ಕೆ ಈಗ ಗೂಂಡಾಗಳ ಆದಾಯಕ್ಕೂ ಹೊಡೆತ ಬಿದ್ದಿದೆ. ಹೀಗಾಗಿ ಅವರು ತಮ್ಮ “ಸೇವೆ”ಗಳ ಬಗ್ಗೆ “ಮಾರ್ಕೆಟಿಂಗ್‌” ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಮುಜಾಫರ್‌ನಗರದ ಒಂದು ಗ್ಯಾಂಗ್‌ ಇದಕ್ಕೆ ಕಂಡುಕೊಂಡ ದಾರಿ ಸೋಷಿಯಲ್‌ ಮೀಡಿಯಾದಲ್ಲಿ ತಾನು ಒದಗಿಸುವ ವಿವಿಧ ಸೇವೆಗಳ ದರಪಟ್ಟಿಯನ್ನು ಪ್ರಕಟಿಸಿ ಗಿರಾಕಿಗಳನ್ನು ಆಕರ್ಷಿಸುವುದು. ಆದರೆ “ಗೂಂಡಾ ಸೇವೆ”ಯ ಜಾಹೀರಾತು ನೋಡಿದ ಬಳಿಕ ಪೊಲೀಸರ ನಿದ್ದೆ ಹಾರಿಹೋಯಿತು. ಅವರು ಹಗಲಿರುಳು ಶ್ರಮಿಸಿ ಜಾಹೀರಾತು ಹಾಕಿದವನನ್ನು ಪತ್ತೆ ಹಚ್ಚುವಲ್ಲಿ ಸಫಲರಾಗಿದ್ದಾರೆ. ದರ ಪಟ್ಟಿಯ ಜೊತೆಗೆ ಪಿಸ್ತೂಲು ಹಿಡಿದುಕೊಂಡ ಒಬ್ಬ ಯುವಕನ ಫೋಟೊ ಕೂಡ ಇತ್ತು. ಇದು ಆರೋಪಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಪೊಲೀಸರಿಗೆ ನೆರವಾಯಿತು.
ಬೀದಿ ಜಗಳ ಪ್ರಾರಂಭಿಸುವುದು, ಅಪಹರಣ, ಗಾಯಗೊಳಿಸುವುದು, ಬೆದರಿಕೆ ಹಾಕುವುದು, ಕೈಕಾಲು ಮುರಿಯುವುದು, ಕೊಲೆ ಮಾಡುವುದು ಸೇರಿದಂತೆ ಎಲ್ಲ ರೀತಿಯ ಗೂಂಡಾ ಸೇವೆ ನಮ್ಮಲ್ಲಿ ಲಭ್ಯ ಎಂದು ಈ ಜಾಹೀರಾತಿನಲ್ಲಿ ಬರೆದು ಅದರ ಎದುರು ಆಯಾಯ ಸೇವೆಯ ದರ ಹಾಕಿದ್ದರು.

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!