ಕ್ರೀಡೆ

ಐಪಿಎಲ್‌- 2022 : ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ ಇಂಡಿಯನ್ಸ್‌

ಮುಂಬೈ : ಐಪಿಎಲ್ 2022ರ ಎ. 13ರಂದು ನಡೆಯಲಿರುವ ಪಂದ್ಯದಲ್ಲಿ 5 ಬಾರಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್ ಮತ್ತು ಎದುರಾಳಿಯಾಗಿ ಪಂಜಾಬ್ ಕಿಂಗ್ಸ್ ತಂಡಗಳು ಸೆಣಸಾಡಲಿದೆ.ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಈಗಾಗಲೇ ಸತತ ಸೋಲುಗಳಿಂದ ಕಂಗೆಟ್ಟಿರುವ ಮುಂಬೈ ತಂಡಕ್ಕೆ ಈ ಪಂದ್ಯ ಮಹತ್ವದ ಪಂದ್ಯವಾಗಿದ್ದು, ಈಗಾಗಲೇ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿಯೂ ಸೋಲನ್ನಪ್ಪಿದೆ. ಇದರ ನಡುವೆ ಪಂಜಾಬ್ ತಂಡ ಸಹ ಸೋಲು ಗೆಲುವಿನ ನಡುವೆ ಆಡುತ್ತಿದ್ದು, ಮುಂಬೈ ತಂಡಕ್ಕೆ […]

ಐಪಿಎಲ್‌- 2022 : ಗೆಲುವಿನ ಖಾತೆ ತೆರೆಯಲಿದ್ಯಾ ಮುಂಬೈ ಇಂಡಿಯನ್ಸ್‌ Read More »

ಐಪಿಎಲ್‌-2022 : ಟೈಟಾನ್ಸ್‌ ಮುಳುಗಿಸಿತೆ ಸನ್‌ರೈಸರ್ಸ್ ಹೈದರಾಬಾದ್

ಮುಂಬೈ : ಎ. 11 ರಂದು ಐಪಿಎಲ್‌ ಪಂದ್ಯದಲ್ಲಿ ಗುಜರಾತ್‌ ಟೈಟಾನ್ಸ್‌ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಸವಾಲನ್ನು ಎದುರಿಸಲಿದೆ. ಗುಜರಾತ್‌ ಹಿಂದಿನ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿದ್ದರೆ ಹೈದರಾಬಾದ್‌ ಈ ಮೊದಲಿನ ಪಂದ್ಯದಲ್ಲಿ ಚೆನೈಸೂಪರ್‌ ಕಿಂಗ್ಸ್‌ ತಂಡವನ್ನು ಮಣಿಸಿತ್ತು. ಗೆಲುವಿನ ಉತ್ಸಾಹದಲ್ಲಿರುವ ಈ ಎರಡು ತಂಡಗಳು ಮುಖಾಮುಖೀಯಾಗಲಿದ್ದು ವಿಜಯಮಾಲೆ ಯಾರಿಗೆ ಒಲಿಯಲಿದೆ ಎಂಬುದನ್ನು ನೋಡಬೇಕಾಗಿದೆ.

ಐಪಿಎಲ್‌-2022 : ಟೈಟಾನ್ಸ್‌ ಮುಳುಗಿಸಿತೆ ಸನ್‌ರೈಸರ್ಸ್ ಹೈದರಾಬಾದ್ Read More »

ಐಪಿಎಲ್‌ – 2022 : ಇಂದು ನೂತನ ನಾಯಕರ ಪೈಪೋಟಿ

ಮುಂಬೈ : ಐಪಿಎಲ್ 15 ನೇ ಆವೃತ್ತಿಯ ಬರ್ಬೋನ್‌ ನಲ್ಲಿ ನಡೆಯಲಿರುವ ಇಂದಿನ ಪಂದ್ಯದಲ್ಲಿ ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ಮತ್ತು ಮಾಯಂಕ್‌ ಅಗರ್ವಾಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ಮುಖಾಮುಖಿಯಾಗಲಿವೆ.ನಡೆದ ಮೂರು ಪಂದ್ಯಗಳಲ್ಲಿ ಸೋಲಿನ ಮುಖವನ್ನೇ ಕಾಣದ ತಂಡ ಒಂದೆಡೆಯಾದರೆ, ಎದುರಿಸಿದ 3 ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದಿರುವ ತಂಡ ಮತ್ತೊಂದೆಡೆ. ಬ್ಯಾಟಿಂಗ್ ಮತ್ತು ಬೌಲಿಂಗ್‌‌ನಲ್ಲಿ ಎರಡೂ ತಂಡಗಳೂ ಸಮಬಲರಾಗಿದ್ದು, ಗೆಲುವು ಯಾರದ್ದಾಗಲಿದೆ ಎಂಬ ಕುತೂಹಲ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ.

ಐಪಿಎಲ್‌ – 2022 : ಇಂದು ನೂತನ ನಾಯಕರ ಪೈಪೋಟಿ Read More »

ಐಪಿಎಲ್‌- 2022 : ಆರ್‌ಸಿಬಿಗೆ ರಾಜಸ್ಥಾನ ರಾಯಲ್ಸ್‌ ಸವಾಲು

ಮುಂಬೈ : 15 ನೇ ಆವೃತ್ತಿಯ ಐಪಿಎಲ್‌ನಲ್ಲಿ ಸೋಲಿನ ಆರಂಭ ಪಡೆದ ಹೊರತಾಗಿಯೂ, ಕಳೆದ ಪಂದ್ಯದಲ್ಲಿ ಗೆದ್ದು ಬೀಗಿದ್ದ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ಇಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಮುಂಬೈ ವಾಂಖೇಡೆ ಕ್ರೀಡಾಂಗಣದಲ್ಲಿ ಸವಾಲನ್ನು ಎದುರಿಸಲಿದೆ.ಫಾಫ್‌ ಡು ಪ್ಲೆಸಿಸ್ ನಾಯಕತ್ವದ ಆರ್‌ಸಿಬಿ ಜಯದ ಲಯ ಮುಂದುವರಿಸುವ ಉತ್ಸಾಹದಲ್ಲಿದ್ದರೆ, ಎದುರಿಸಿರುವ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ರಾಜಸ್ಥಾನದಿಂದ ಕಠಿಣ ಸವಾಲು ಎದುರಾಗುವ ನಿರೀಕ್ಷೆ ಇದೆ.ಮೊದಲ ಪಂದ್ಯದಲ್ಲಿ ಬ್ಯಾಟ್ಸ್‌ಮನ್ಗಳು ಅಬ್ಬರಿಸಿದ್ದರೂ, ಬೌಲರ್‌ಗಳ ಕಳಪೆ ಆಟದ ಪರಿಣಾಮ ಪಂದ್ಯ ಸೋತಿದ್ದ ಆರ್‌ಸಿಬಿಯನ್ನು ಕಳೆದ

ಐಪಿಎಲ್‌- 2022 : ಆರ್‌ಸಿಬಿಗೆ ರಾಜಸ್ಥಾನ ರಾಯಲ್ಸ್‌ ಸವಾಲು Read More »

ಕಾಮನ್ವೆಲ್ತ್, ಏಷ್ಯನ್ ಗೇಮ್ಸ್: 190 ಕೋಟಿ ರೂ. ವ್ಯಯಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧಾರ

ನವದೆಹಲಿ: ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ – 2022 ನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ‌ ಕ್ರೀಡಾ ಸಚಿವಾಲಯವು 190 ಕೋಟಿ ರೂ. ಗಳನ್ನು ವ್ಯಯಿಸಲಿದೆ. ಕ್ರೀಡಾಪಟುಗಳ ತರಬೇತಿ ಮತ್ತು ಕ್ರೀಡಾ ಸಲಕರಣೆಗಳಿಗಾಗಿ ಈ ಮೊತ್ತವನ್ನು ಖರ್ಚು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 33 ಕ್ರೀಡಾ ವಿಭಾಗಗಳಿಗೆ ತರಬೇತಿ, ಸ್ಪರ್ಧೆ‌ಗಳ ವಾರ್ಷಿಕ ಕ್ಯಾಲೆಂಡರ್ ಸಹ ಈಗಾಗಲೇ ಅಂತಿಮಗೊಂಡಿದೆ. ಹಾಗೆಯೇ 259 ಕೋಟಿ ರೂ. ಗಳನ್ನು ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್‌ ಗಳ ಸಹಾಯಕ್ಕಾಗಿ 2022-23 ರ ಆರ್ಥಿಕ ವರ್ಷ‌ಕ್ಕೆ

ಕಾಮನ್ವೆಲ್ತ್, ಏಷ್ಯನ್ ಗೇಮ್ಸ್: 190 ಕೋಟಿ ರೂ. ವ್ಯಯಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ನಿರ್ಧಾರ Read More »

ಐಪಿಎಲ್‌ – 2022 : ಹೈದರಾಬಾದ್‌ಗೆ ಲಕ್ನೋ ಎದುರಾಳಿ

ಮುಂಬೈ : ಇಂದು ನಡೆಯಲಿರುವ 15 ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯ 15 ನೇ ಪಂದ್ಯದಲ್ಲಿ, ಎ. 4ರಂದು ಕೇನ್ ವಿಲಿಯಮ್ಸನ್‌ ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು, ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸವಾಲು ಸ್ವೀಕರಿಸಲು ಸಜ್ಜಾಗಿದೆ.ಡಿವೈ ಪಾಟೀಲ್ ಮೈದಾನದಲ್ಲಿ ಇಂದಿನ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಲಖನೌ ಈವರೆಗೆ ನಡೆದ ಪಂದ್ಯಗಳಲ್ಲಿ ಒಂದು ಸೋಲು, ಮತ್ತೊಂದು ಗೆಲುವನ್ನು ಕಂಡಿದ್ದು, ಸನ್‌ರೈಸರ್ಸ್ ಹೈದರಾಬಾದ್ ತಂಡವು ತನ್ನ ಪಾಲಿನ ಮೊದಲ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಹೀನಾಯ

ಐಪಿಎಲ್‌ – 2022 : ಹೈದರಾಬಾದ್‌ಗೆ ಲಕ್ನೋ ಎದುರಾಳಿ Read More »

ಐಪಿಎಲ್‌ 2022 : ಇಂದು ಗೆಲುವಿಗಾಗಿ ಸೆಣೆಸಾಡಲಿರುವ ಚೆನ್ನೈ- ಲಕ್ನೋ

ಮುಂಬೈ : ಐಪಿಎಲ್ 2022ರ 15ನೇ ಸೀಸನ್ ನ 7ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (LSG Vs CSK) ಸೆಣಸಾಡಲಿವೆ. ಮಾ. 31ರಂದು ಮುಂಬೈನ ಬ್ರಬೋರ್ನ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ಉಭಯ ತಂಡಗಳಲ್ಲಿ ಯಾರು ಗೆಲುವಿನ ಖಾತೆ ತೆರೆಯಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.ಕೊಲ್ಕತ್ತಾ ಎದುರು ಮೊದಲ ಪಂದ್ಯದಲ್ಲಿ ಚೆನ್ನೈ ಸೋತರೆ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೋಲನ್ನು ಕಂಡಿತ್ತು. ಹೀಗಾಗಿ ಎರಡೂ ತಂಡಗಳಿಗೂ ಇದು ಮಹತ್ವದ ಪಂದ್ಯವಾಗಿದ್ದು, ಗೆಲುವಿನ ಆರಂಭ ಮಾಡಬೇಕಿದೆ.

ಐಪಿಎಲ್‌ 2022 : ಇಂದು ಗೆಲುವಿಗಾಗಿ ಸೆಣೆಸಾಡಲಿರುವ ಚೆನ್ನೈ- ಲಕ್ನೋ Read More »

ಐಪಿಎಲ್‌-2022 : ಮುಖಾಮುಖಿ‌ಯಾಗಲಿವೆ ಆರ್‌ಆರ್ – ಎಸ್‌ಆರ್‌ಎಚ್

ಮುಂಬೈ : ಮಾ. 29 ರಂದು ಪುಣೆಯಲ್ಲಿ ನಡೆಯಲಿರುವ ಐಪಿಎಲ್ 15 ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿ‌ಯಾಗಲಿವೆ.15 ನೇ ಆವೃತ್ತಿ‌ಯ ಐದನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪರಸ್ಪರ ಕಾದಾಟ ನಡೆಸಲಿವೆ.ಕಳೆದ ಆವೃತ್ತಿಯಲ್ಲಿ ಈ ಎರಡೂ ತಂಡಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದು, ಅಂಕಪಟ್ಟಿಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ಪಡೆದುಕೊಂಡಿದ್ದವು. ಈ ಬಾರಿಯ ಆವೃತ್ತಿಗೂ ಮುನ್ನ ನಡೆದ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿರುವ

ಐಪಿಎಲ್‌-2022 : ಮುಖಾಮುಖಿ‌ಯಾಗಲಿವೆ ಆರ್‌ಆರ್ – ಎಸ್‌ಆರ್‌ಎಚ್ Read More »

ಐಪಿಎಲ್‌ – 2022 : ಇಂದು ಹೊಸ ತಂಡಗಳ ಹಣಾಹಣಿ

ಮುಂಬೈ : 2022ರ ಐಪಿಎಲ್‌ ತಂಡಗಳಲ್ಲಿ ಹೊಸದಾಗಿ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮೊದಲ ಬಾರಿ ಮುಖಾಮುಖಿಯಾಗಲಿವೆ. ಇಂದು ನಡೆಯಲಿರುವ ಉಭಯ ತಂಡಗಳ ಐಪಿಎಲ್ ಚೊಚ್ಚಲ ಪಂದ್ಯ ಇನ್ನಷ್ಟು ರೋಚಕವಾಗಲಿದ್ದು, ಐಪಿಎಲ್ 2022 ರ ನಾಲ್ಕನೇ ಪಂದ್ಯ, ಎರಡೂ ತಂಡಗಳ ನಡುವೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ.ಉಭಯ ತಂಡಗಳಿಗೂ ಐಪಿಎಲ್​ನಲ್ಲಿ ಇತಿಹಾಸವೇ ಇಲ್ಲದ ಕಾರಣ ದಾಖಲೆಗಳ ವಿಷಯದಲ್ಲಿ ಯಾರ ಮೇಲುಗೈ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ಎರಡೂ ತಂಡಗಳ

ಐಪಿಎಲ್‌ – 2022 : ಇಂದು ಹೊಸ ತಂಡಗಳ ಹಣಾಹಣಿ Read More »

ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನ ಗೆದ್ದ ಭಾರತದ ನಿಖತ್ ಝರೀನ್

ಹೈದರಾಬಾದ್‌ : ಸ್ಟ್ರಾಂಡ್ಜಾ ಸ್ಮಾರಕ ಅಂತಾರಾಷ್ಟ್ರೀಯ ಬಾಕ್ಸಿಂಗ್ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತೆಲಂಗಾಣ ಬಾಕ್ಸರ್ ನಿಖತ್ ಜರೀನ್ ಚಿನ್ನದ ಪದಕ ಗೆದ್ದಿದ್ದಾರೆ. ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಮಾ. 27ರಂದು ಮುಕ್ತಾಯಗೊಂಡ ಟೂರ್ನಿಯಲ್ಲಿ ನಿಜಾಮಾಬಾದ್ ಜಿಲ್ಲೆಯ ನಿಖತ್ 52ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿಖತ್ 4–1ರಲ್ಲಿ ಟೆಟಿಯಾನಾ ಕೊಬೆ (ಉಕ್ರೇನ್‌) ಬಾಕ್ಸರ್ ರನ್ನ ಮಣಿಸಿ 73 ವರ್ಷದ ಇತಿಹಾಸವಿರುವ ಸ್ಟ್ರಾಂಡ್ಜಾ ಪಂದ್ಯಾವಳಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳಾ ಬಾಕ್ಸರ್ ಎನಿಸಿಕೊಂಡರು.

ಅಂತಾರಾಷ್ಟ್ರೀಯ ಬಾಕ್ಸಿಂಗ್ ಪಂದ್ಯದಲ್ಲಿ ಚಿನ್ನ ಗೆದ್ದ ಭಾರತದ ನಿಖತ್ ಝರೀನ್ Read More »

error: Content is protected !!
Scroll to Top