ನವದೆಹಲಿ: ಮುಂಬರುವ ಕಾಮನ್ವೆಲ್ತ್ ಮತ್ತು ಏಷ್ಯನ್ ಗೇಮ್ಸ್ – 2022 ನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಕ್ರೀಡಾ ಸಚಿವಾಲಯವು 190 ಕೋಟಿ ರೂ. ಗಳನ್ನು ವ್ಯಯಿಸಲಿದೆ.
ಕ್ರೀಡಾಪಟುಗಳ ತರಬೇತಿ ಮತ್ತು ಕ್ರೀಡಾ ಸಲಕರಣೆಗಳಿಗಾಗಿ ಈ ಮೊತ್ತವನ್ನು ಖರ್ಚು ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 33 ಕ್ರೀಡಾ ವಿಭಾಗಗಳಿಗೆ ತರಬೇತಿ, ಸ್ಪರ್ಧೆಗಳ ವಾರ್ಷಿಕ ಕ್ಯಾಲೆಂಡರ್ ಸಹ ಈಗಾಗಲೇ ಅಂತಿಮಗೊಂಡಿದೆ. ಹಾಗೆಯೇ 259 ಕೋಟಿ ರೂ. ಗಳನ್ನು ವಿವಿಧ ರಾಷ್ಟ್ರೀಯ ಕ್ರೀಡಾ ಫೆಡರೇಷನ್ ಗಳ ಸಹಾಯಕ್ಕಾಗಿ 2022-23 ರ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮೀಸಲಿಡಲಾಗಿದೆ.
ಮುಂಬರುವ ಕಾಮನ್ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ಗೆ ಸಂಬಂಧಿಸಿದಂತೆ ಕ್ರೀಡಾಪಟುಗಳ ತರಬೇತಿ, ಕ್ರೀಡಾ ಸಲಕರಣೆಗಳ ಖರೀದಿ, ಸ್ಪರ್ಧೆಗಳ ಯೋಜನೆ, ಪ್ರಸ್ತಾವನೆಗಳನ್ನು ಸರ್ಕಾರ ಗಮನಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.